Thursday, December 19, 2024
Thursday, December 19, 2024

Shivamogga District Police ಪೊಲೀಸ್ ಕ್ರೀಡಾಕೂಟ ವಿಶೇಷ ಕ್ರಿಕೆಟ್ ಪಂದ್ಯ. ಪೊಲೀಸ್ ತಂಡಕ್ಕೆ ಶರಣಾದ ಪತ್ರಕರ್ತರ ತಂಡ

Date:

Shivamogga District Police ಶಿವಮೊಗ್ಗ ಜಿಲ್ಲಾ ಪೋಲೀಸ್ ಕ್ರೀಡಾಕೂಟದ ಭಾಗವಾಗಿ ಇಂದು ಮಧ್ಯಾಹ್ನ ಪೋಲೀಸ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಪೋಲೀಸ್ ಹಾಗೂ ಪತ್ರಕರ್ತರ ನಡುವಿನ ಪಂದ್ಯಾವಳಿ, ಕ್ರೀಡಾ ಸ್ಪೂರ್ತಿಗೆ ಸಾಕ್ಷಿಯಾಗಿದ್ದು, ಪೋಲೀಸ್ ಹಾಗೂ ಪತ್ರಕರ್ತರು ಅತ್ಯಂತ ಉತ್ಸಾಹದಿಂದ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ತಲಾ ಹತ್ತು ಓವರ್‌ಗಳ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ದುಕೊಂಡ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ನಾಯಕತ್ವದ ಜಿಲ್ಲಾ ಪೋಲೀಸ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೧೩೪ ರನ್ ಕಲೆ ಹಾಕಿತು.

ಈ ೧೩೪ ರನ್‌ನ್ನು ಬೆನ್ನು ಹತ್ತಿದ ಪತ್ರಕರ್ತರ ತಂಡ ಐದು ವಿಕೆಟ್‌ಗಳನ್ನು ಕಳೆದುಕೊಂಡು ೬೭ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಜಿಲ್ಲಾ ಪೋಲೀಸ್ ತಂಡದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ೧೭ ರನ್ ಗಳಿಸಿದರೆ, ಉಪಾಧೀಕ್ಷಕ ಗಜಾನನ ಸುತಾರ ೧೨, ಇನ್ಸ್ಪೆಕ್ಟರ್ ಅಣ್ಣಯ್ಯ ೩೬, ನಾರಾಯಣ ಸ್ವಾಮಿ ೧೯ ಹಾಗೂ ಪ್ರಶಾಂತ್ ೩೨ರನ್ ಗಳಿಸಿದರು.
ಪತ್ರಕರ್ತರ ತಂಡದ ಪರವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ. ವಿ. ಶಿವಕುಮಾರ್‌ರವರು ಜಿಲ್ಲಾ ರಕ್ಷಣಾಧಿಕಾರಿಗಳ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರಲ್ಲದೇ ೨೦ ರನ್ ಗಳಿಸಿ, ಗಮನ ಸೆಳೆದರು. ಪವರ್ ಟೀವಿಯ ಗೋ. ವ. ಮೋಹನ ಕೃಷ್ಣ ೧೪ರನ್ ಗಳಿಸಿದರು. ಈ ಇಬ್ಬರೂ ಆಟಗಾರರು ಅಜೇಯರಾಗಿ ಉಳಿದರು.

ಜಗದೀಶ್ ೦೩, ಸತೀಶ್ ೦, ರಾಜೇಶ್ ೩, ವೆಂಕಟೇಶ್ ೦, ನಾಗರಾಜ್ ೧, ಮಹೇಶ್ ೨, ಗಣೇಶ್ ೦ ರನ್ ಗಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್‌ರವರು ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಕ್ರೀಡಾಪಟುಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು.

Shivamogga District Police
ವಿಜಯಿಯಾದ ಜಿಲ್ಲಾ ಪೋಲೀಸ್ ತಂಡಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್ ಬಹುಮಾನ ಸ್ಮರಣಿಕೆ ನೀಡಿದರು.

ಪತ್ರಕರ್ತರಾದ ಹುಲಿಮನೆ ತಿಮ್ಮಪ್ಪ, ಗೋಪಾಲ್ ಯಡಗೆರೆ, ವೈದ್ಯನಾಥ್, ಜೇಸುದಾಸ್, ಕಿರಣ್ ಕಂಕಾರಿ, ನಾಗರಾಜ ನೇರಿಗೆ, ವಿ. ಟಿ. ಅರುಣ್, ಜಗದೀಶ್ ಅಮೋಘ ಮೊದಲಾದವರು ಉಪಸ್ಥಿತರಿದ್ದರು.-

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akashvani Bhadravati ಸಾರ್ವಜನಿಕ ಸ್ಥಳಗಳಲ್ಲಿ ಪ್ರವಾಸಿತಾಣಗಳ ಚಿತ್ರ ಪ್ರದರ್ಶನ. ಪ್ರವಾಸೋದ್ಯಮಕ್ಕೆ ಬೆಂಬಲ- ಎನ್.ಹೇಮಂತ್

Akashvani Bhadravati ಆಕಾಶವಾಣಿ ಭದ್ರಾವತಿ 60ನೇ ವರ್ಷದ ವಜ್ರ ಮಹೋತ್ಸವ ವರ್ಷಾಚರಣೆ...

Klive Special Article ಕನ್ನಡ – ಒಂದಷ್ಟು ಆತಂಕಗಳು

Klive Special Article ಮತ್ತೊಮ್ಮೆ ಕನ್ನಡದ ನುಡಿ ಜಾತ್ರೆ ಬಂದಿದೆ ....

B.Y.Raghavendra ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್ ನೋಡಿಕೊಳ್ಳುತ್ತದೆ- ಸಂಸದ ರಾಘವೇಂದ್ರ

B.Y.Raghavendra ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಸದ್ಯಕ್ಕೆ ಬಿ...