Yakshagana ಶಿವಮೊಗ್ಗ ಜಿಲ್ಲೆ ಸಾಗರದ ಹೆಗ್ಗೋಡು ಪ್ರಾಂತ್ಯದ ” ಸಾಕೇತ ಕಲಾವಿದರು” ಒಂದು ಹವ್ಯಾಸಿ ತಂಡವಾಗಿದೆ. ಸುಮಾರು 45 ವರ್ಷಗಳಿಂದ ಯಕ್ಷರಂಗದಲ್ಲಿ ವೈವಿಧ್ಯಮಯ ಪ್ರಸಂಗಗಳ ಪ್ರದರ್ಶನ ಮಾಡಿ ಯಕ್ಷಗಾನ ರಸಿಕರ ಮನಸೂರೆಗೊಂಡಿದ್ದಾರೆ.
ಸಾಕೇತ ಕಲಾವಿದರ ಪ್ರಸಂಗಗಳೆಂದರೆ ಮಲೆನಾಡು ಸೀಮೆಯಲ್ಲಿ ಹೆಸರುವಾಸಿಯಾಗಿದೆ.
ಇದೇ ಡಿಸೆಂಬರ್ 7 ಶನಿವಾರ ಸಂಜೆ 6 ಕ್ಕೆ ಕಲಾವಿದರ ತಂಡದ ಪ್ರಸಿದ್ಧ ಪ್ರಸಂಗಗಳಲ್ಲಿ ಒಂದಾಗಿರುವ
Yakshagana “ಭೀಷ್ಮ ಪರ್ವ” ರಂಗ ಪದರ್ಶನವಿದೆ. ಸ್ಥಳ: ಸುವರ್ಣ ಸಂಸ್ಕೃತಿ ಭವನ ಶಿವಮೊಗ್ಗ.
ಅಂದು ಹೆಸರಾಂತ ಹಿರಿಯ ಯಕ್ಷಗಾನ ಭಾಗವತ ಶ್ರೀ ರಾಮರಾಯರಿಗೆ ಆತ್ಮೀಯ ಸನ್ಮಾನವನ್ನು ಏರ್ಪಡಿಸಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನಾಭಿಮಾನಿಗಳು ಆಗಮಿಸಬೇಕೆಂದು
“ಸಾಕೇತ” ಸ್ನೇಹಿತರ ಪರವಾಗಿ ಹಿರಿಯ ಚಿಂತಕ ಲಕ್ಷ್ಮೀನಾರಾಯಣ ಕಾಶಿ ಅವರು ಕೆ ಲೈವ್ ಮಾಧ್ಯಮದ ಮೂಲಕ ಕೋರಿಕೊಂಡಿದ್ದಾರೆ.
Yakshagana ಡಿಸೆಂಬರ್ 7. ಶಿವಮೊಗ್ಗದಲ್ಲಿಸಾಕೇತ ಕಲಾವಿದರಿಂದ “ಭೀಷ್ಮಪರ್ವ” ಯಕ್ಷಗಾನ
Date: