Saturday, December 6, 2025
Saturday, December 6, 2025

Muthoot FinCorp ಕಣ್ಣು ಮಾನವ ದೇಹದ ಅತಿ ಸೂಕ್ಷ್ಮ ಅಂಗ ಜಾಗೃಕತೆಯಿಂದ ಇರಿಸಿಕೊಳ್ಳುವುದು ಅಗತ್ಯ: ವಿನಾಯಕ ಕುಲಕರ್ಣಿ

Date:

Muthoot FinCorp ಕಣ್ಣು ಮಾನವನ ದೇಹದ ಅತಿ ಸೂಕ್ಷ್ಮವಾದ ಅಂಗವಾಗಿದ್ದು, ಜಾಗರೂಕತೆಯಿಂದ ಇರಿಸಿಕೊಳ್ಳುವುದು ಕರ್ತವ್ಯವಾಗಿದೆ ಎಂದು ಮುತ್ತೂಟ್ ಫಿನ್‌ಕಾರ್ಪ್ನ ಪ್ರಾದೇಶಿಕ ವ್ಯವಸ್ಥಾಪಕ ವಿನಾಯಕ ಕುಲಕರ್ಣಿ ಹೇಳಿದರು.
ಸೊರಬ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಮುತ್ತೂಟ್ ಫಿನ್‌ಕಾರ್ಪ್ ಕಚೇರಿಯಲ್ಲಿ ಮುತ್ತೂಟ್ ಫಿನ್‌ಕಾರ್ಪ್, ತ್ರೀನೇತ್ರ ಐ ಆಪ್ಟಿಕಲ್ಸ್, ಆಸ್ಟರ್ ಫಾರ್ಮಸಿ ವತಿಯಿಂದ ಹಮ್ಮಿಕೊಂಡ ಉಚಿತ ಕಣ್ಣಿನ ಮತ್ತು ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮುತ್ತೂಟ್ ಫಿನ್‌ಕಾರ್ಪ್ ಸಂಸ್ಥೆ ವ್ಯವಹಾರಿಕವಾಗಿ ಮಾತ್ರವಲ್ಲದೇ ಸಮಾಜ ಸೇವೆಯಲ್ಲಿಯೂ ತೊಡಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಣ್ಣಿನ ಆರೋಗ್ಯದ ಮಾಹಿತಿ ಕೊರತೆಯಿಂದ ಹೆಚ್ಚು ಗಮನ ನೀಡುವುದಿಲ್ಲ. ಆರ್ಥಿಕ ಕೊರತೆಯಿಂದಾಗಿ ಕೆಲವರು ಆರೋಗ್ಯವನ್ನು ತಪಾಸಣೆ ಮಾಡಿಸುವುದಿಲ್ಲ. ಅಂತಹವರಿಗೆ ಅರಿವು ಮೂಡಿಸುವ ಜೊತೆಗೆ ಬಡಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕಣ್ಣಿನ ಮತ್ತು ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದರು.
Muthoot FinCorp ಜನದನಿ ರತ್ನ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಕೆ.ಪಿ. ಶ್ರೀಧರ್ ನೆಮ್ಮದಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮೊಬೈಲ್‌ನ ಅತಿಯಾದ ಬಳಕೆಯಿಂದ ಮಕ್ಕಳ ಕಣ್ಣಿನ ಮೇಲೆ ನೇರವಾದ ಮತ್ತು ಗಂಭೀರವಾದ ಪರಿಣಾಮ ಬೀರುತ್ತಿದೆ. ಮೊಬೈಲ್ ವೀಕ್ಷಣೆಯ ಸಮಯದಲ್ಲಿ ಮಕ್ಕಳು ಬ್ರೈಟ್ ನೆಸ್ ಜಾಸ್ತಿ ಇಟ್ಟುಕೊಳ್ಳುತ್ತಾರೆ. ಇದರಿಂದ ಕಣ್ಣದೃಷ್ಟಿ ಹಾಳಾಗುತ್ತದೆ. ಮನೆಗಳಲ್ಲಿ ಪೋಷಕರು ಬಿಡುವಿನ ವೇಳೆ ಮೊಬೈಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಕಾರಣ, ಮಕ್ಕಳು ಪೋಷಕರನ್ನು ಅನುಸರಿಸುತ್ತಾರೆ. ಕಣ್ಣಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಮುತ್ತೂಟ್ ಫಿನ್‌ಕಾರ್ಪ್ನ ವಲಯಾಧಿಕಾರಿ ಪಿ. ಚಂದ್ರಶೇಖರ್, ಶಾಖಾ ವ್ಯವಸ್ಥಾಪಕ ಎನ್. ನಾಗರಾಜ್, ಸಿಬ್ಬಂದಿ ಭರತ್, ಆಕಾಶ್, ಅರ್ಪಿತಾ, ನಿತಿನ್, ಮಜಯ ಬಾನು, ಮನುಕುಮಾರ್, ನೇತ್ರ ತಜ್ಞ ವೈದ್ಯ ಡಾ. ಸುಹಾಸ್, ತ್ರಿನೇತ್ರ ಆಫ್ಟಿಕಲ್ಸ್ನ ಕಿರಣ್, ಮಹೇಶ್, ಆಸ್ಟರ್ ಫಾರ್ಮಸಿಯ ಸೂರಜ್, ಸಾಲಿಕ್, ಪ್ರಮುಖರಾದ ಪಿ.ಪಿ. ರಮೇಶ ಸೇರಿದಂತೆ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...