Monday, November 25, 2024
Monday, November 25, 2024

Akhil Bharath Sahitya Parishad ರಾಜ್ಯೋತ್ಸವಗಳಿಗೆ ಅರ್ಥಬರುವುದು ಮುಂದಿನ ಪೀಳಿಗೆಯವರು ಮಾತೃಭಾಷೆಯಲ್ಲಿ ಅವಲೋಕಿಸುವಂತೆ ಮಾಡಿದಾಗ ಮಾತ್ರ : ಲಕ್ಷ್ಮೀನಾರಾಯಣ ಕಾಶಿ

Date:

Akhil Bharath Sahitya Parishad ಶಿವಮೊಗ್ಗದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು.ರಾಜ್ಯೋತ್ಸವ ಕವಿಗೋಷ್ಠಿ ಯನ್ನ ಏರ್ಪಡಿಸಿತ್ತು.
ತಾ.23-11-24 ರ ಶನಿವಾರ ವಿನೊಬಾ ನಗರದ ಪೊಲೀಸ್ ಚೌಕಿಯ ಸನಿಹವಿರುವ ವಿಕಾಸ ಪ್ರಾಥಮಿಕ ಶಾಲೆಯ ಸಭಾಗೃಹದಲ್ಲಿ ಕವಿ ,ಕವಿಯಿತ್ರಿಯರು ಸಂಭ್ರಮದಿಂದ ಪಾಲ್ಗೊಂಡಿದ್ದರು.
ಮಂಜುನಾಥ್ ಬುಳ್ಳಾಪುರ,‌ ತಿಮ್ಮೇಶಪ್ಪ, ರುದ್ರೇಶ್, ಶಾಲಿನಿ, ಶುಭಾ ಕುಸ್ಕೂರು, ಪೂರ್ಣಿಮಾ ಪ್ರಸನ್ನ, ಪದ್ಮಾದಿವಾಕರ್, ಚೇತನ್ ಅಜ್ಜಿಹಳ್ಳಿ, ಸಂತೋಷ್ ಬಿದರಗದ್ದೆ, ಶಾರದಾ ಉಳುವೆ, ಮನೋರಮಾ, ರಮೇಶ್ ಭದ್ರಾವತಿ,
ಮಮತಾ ಹೆಗ್ಡೆ, ಅಂಜುಂ, ಮುಂತಾದವರು ತಾವು ರಚಿಸಿದ ಕನ್ನಡ ಪ್ರೀತಿ, ದೇಶಾಭಿಮಾನದ ವಸ್ತುವುಳ್ಳ ಕವಿತೆಗಳನ್ನ ವಾಚಿಸಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಶಿವಮೊಗ್ಗದ ಹಿರಿಯ ಚಿಂತಕ‌ ಹಾಗೂ ಲೇಖಕ ಶ್ರೀಲಕ್ಷ್ಮೀನಾರಾಯಣ ಕಾಶಿ ಉದ್ಘಾಟಿಸಿದರು.
ಕನ್ನಡ ಭಾಷೆಯನ್ನ ಮಕ್ಕಳ ಹಂತದಿಂದಲೇ ಪೋಷಿಸಬೇಕು. ಇಂಗ್ಲೀಷ್ ವ್ಯಾಮೋಹದಿಂದ ಇಂದಿನ ಪೋಷಕರು ಮನೆ ಮಾತಿನಲ್ಲಿ ಆಲೋಚಿಸುವುದನ್ನ ಬಿಟ್ಟು ಇಂಗ್ಲೀಷ್ ಮೂಲಕವೇ ಮನಸ್ಸಿನಲ್ಲಿ ಪ್ರತಿಮೆಗಳನ್ನ ಕಟ್ಟಿಕೊಳ್ಳುವಲ್ಲಿ ಸೂಕ್ತ ಪದಸಂಪದ ಕೊರತೆಗೊಳಗಾಗುತ್ತಿದ್ದಾರೆ. ಭಾಷೆ ಬೆಳೆಯುವುದಾದರೂ ಹೇಗೆ? ಅದನ್ನ ಬಳಸುತ್ತಲೇ ಬೆಳೆಸಬೇಕು ಎಂದು ಲೇಖಕ ಕಾಶಿ ಕರೆಕೊಟ್ಟರು.
ರಾಜ್ಯೋತ್ಸವ ಮತ್ತು ಕವಿತೆಗಳ ಬಗ್ಗೆ ಲಕ್ಷ್ಮೀನಾರಾಯಣ ಕಾಶಿ ಅವರು ಮಾತನಾಡಿ” ರಾಜ್ಯೋತ್ಸವಗಳಿಗೆ ಅರ್ಥ ಬರುವುದು ನಾವು ನಮ್ಮ ಮುಂದಿನ ಪೀಳಿಗೆಯವರು ಮಾತೃಭಾಷೆಯಲ್ಲಿಅವಲೋಕಿಸುವಂತೆ ಮಾಡಿದಾಗ ಮಾತ್ರ. ಎಂದರು.
ಕವಿಗಳೂ ಕೂಡ ತಾವು ಬಳಸುವ ಭಾಷೆಯಲ್ಲಿ ಆರ್ದ್ರತೆ ತುಂಬಿದಾಗ ಮಾತ್ರ. ಅದು ಸಹೃದಯರನ್ನ ಸಶಕ್ತವಾಗಿ ಸ್ಪಂದಿಸುವಂತೆ ಮಾಡುತ್ತದೆ. ಇಲ್ಲದಿದ್ದರೆ ಕವಿಯ ಭಾವನೆಗಳು ಸಂವಹನವಾಗದೇ ಕವಿತೆ ಸೋಲುತ್ತದೆ ಎಂದರು.
ರಾಜ್ಯೋತ್ಸವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಅಭಾಸಾಪ ಜಿಲ್ಲಾಧ್ಯಕ್ಷ ಡಾ.ಸುಧೀಂದ್ರ ವಹಿಸಿದ್ದರು.
ಕನ್ನಡದ ಬಗ್ಗೆ ಪ್ರೀತಿ,ಅಭಿಮಾನ ಕುರಿತೇ ಕವಿತೆಗಳನ್ನ ಕವಿಗಳಿಂದ ಬರೆಯಲು ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಅದರಂತೆ ಕವಿತೆಗಳನ್ನ ಕಳಿಸಿದರು. ಹೆಸರು ಮಾಡದ ಕವಿಗಳಿಗೆ ಇದು ಆರಂಭದ ವೇದಿಕೆ.
ಮುಂದೆ ಅವರೆಲ್ಲ‌ ಹೆಸರು ಮಾಡಲಿಯೆಂಬ ಹೆಬ್ಬಯಕೆ ” ನಮ್ಮದಾಗಿದೆ. ಕನ್ನಡ ಪ್ರೀತಿಯನ್ನು ಕವಿ/ಕವಿಯತ್ರಿಯರು
ಸೊಗಸಾಗಿ‌ ತಮ್ಮ ಕವಿತೆಗಳಲ್ಲಿ ನಿವೇದಿಸಿದ್ದಾರೆ. ಬರೆಯುವ ಭರದಲ್ಲಿ ವ್ಯಾಕರಣ,ಪದ ಸಂಪತ್ತಿ, ಕಾವ್ಯಾಂಶಗಳಿಗೆ ಗಮನ ಕೊಡಿ. ರಾಷ್ಟ್ರಕವಿ ಕುವೆಂಪು ಅವರು ಕವಿಯ ಕೆಲಸ ಏನು ಎಂಬುದನ್ನ “ಬಾರಿಸು ಕನ್ನಡ ಡಿಂಡಿಮವ”ಎಂಬಲ್ಲಿ
ಸ್ಪಷ್ಟ ಪಡಿಸಿದ್ದಾರೆ.
ಸತ್ತಂತಿಹರನು ಬಡಿದೆಚ್ಚರಿಸು..
ಸಮಾಜದಲ್ಲಿ ಸುತ್ತಮುತ್ತಲೇನು ನಡೆದರೂ ಮೂಕ ಶವಗಳಿಂತಿರುವ ಜನವನ್ನ, ಶವನಿದ್ರೆಯಿಂದ ಎಚ್ಚರಿಸು.ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಜಾಗೃತಿ ಮೂಡಿಸು.
ಮುಂದೆ..
Akhil Bharath Sahitya Parishad ಕಚ್ಚಾಡುವವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು.
ಒಟ್ಟಿಗೆ ಬಾಳುವ ತೆರದಲಿ ಹರಸು.
ಈ ಸಮಾಜದಲ್ಲಿನ ಜಾತಿ ಮತ ಭೇದ, ಬಡವ ಬಲ್ಲಿದ, ಶ್ರೀಮಂತ ಬಡವ, ಧನಬಲ, ತೋಳ್ಬಲಗಳೇ ಪರಸ್ಪರ ಕಚ್ಚಾಟ ನಡಸಿವೆ. ಅಂತಹ ಮನಸ್ಸುಗಳನ್ನ ಕೂಡಿಸುವ, ಒಂದಾಗುವಂತೆ ಒಲಿಸುವ ಕಾವ್ಯ ಬರೆ.
ಹೊಟ್ಟೆಯ ಕಿಚ್ಚು ಆರಿಸಲಾಗದೇ ಹಣಗುವವರ ಬಗ್ಗೆ
ಪಶ್ಚಾತ್ತಾಪದ ಕಣ್ಣೀರು‌, ಅನುಕಂಪ ನಿನ್ನ ಕಾವ್ಯದಲ್ಲಿರಲಿ.
ಇಷ್ಟೆಲ್ಲಾ ಆದರೂ ಸುಮ್ಮನಿರ ಬೇಡ.ನಿನ್ನ ಕಾವ್ಯದ ಗುರಿ ಏನೆಂದರೆ’ ಒಟ್ಟಿಗೆ ಬಾಳುವ ತೆರೆದಲ್ಲಿ ಇರಲು, ಬಾಳುವೆ ಮಾಡಲು ನಿನ್ನ ಕಾವ್ಯದ ಮೂಲಕ ಹಾರೈಸು ಎಂದಿದ್ದಾರೆ.
ಅಂತಹ ಪಾರಂಪರಿಕ‌ ಕವಿಗಳು ಕನ್ನಡದ ಹಿರಿಮೆ. ಅಂತಹವರ
ಬರಹಗಳನ್ನ ಓದಬೇಕು ಎಂದು ಕವಿಗಳಿಗೆ ಮನಗಾಣಿಸುವಂತೆ ಮಾತನಾಡಿದರು.
ಶ್ರೀಮತಿ ಮಾಲಾ ಮಂಜುನಾಥ್ ಅವರು ಜಗನ್ನಾಥ ದಾಸರ ” ದಯಮಾಡು ವಾಗ್ದೇವಿಯೆ” ಕೃತಿಯ ಮೂಲಕ ಪ್ರಾರ್ಥಿಸಿದರು.
ಅಭಾಸಾಪದ ವಿಭಾಗೀಯ ಸಂಚಾಲಕ ಶ್ರೀಹರ್ಷ ಅವರು ” ಈ ಮುಂಚೆ ಇಂಗ್ಲೀಷ್ ಓದಿಕೊಂಡು ಬಂದ ಕನ್ನಡದ ಲೇಖಕರು
ಕನ್ನಡದಲ್ಲಿ ಸಮಕಾಲೀನ ಬರವಣಿಗೆ ಇಲ್ಲ. ಇಂಗ್ಲೀಷ್ ಸಾಹಿತ್ಯವೇ ಶ್ರೇಷ್ಠ ,ಕನ್ನಡ ಕನಿಷ್ಠ ಎಂಬ ಧೋರಣೆಯಿಂದ ಬರೆಯುತ್ತಿದ್ದ ಸಂದರ್ಭದಲ್ಲಿ ಅಭಾಸಾಪ ಕನ್ನಡದಲ್ಲಿ ಎಲ್ಲವೂ ಇದೆ ಎಂಬ ಧ್ಯೇಯದಿಂದ ಸಾಹಿತ್ಯ ಚಟುವಟಿಕೆ ಹಮ್ಮಿಕೊಳ್ಳಲು ಅಭಾಸಾಪ ಆರಂಭಿಸಿತು “ಎಂದರು.
ಸಮಾರಂಭವನ್ನ ಜ್ಯೋತಿ ಬೆಳಗುವ ಮೂಲಕ ಲೇಖಕ ಶ್ರೀಲಕ್ಷ್ಮೀನಾರಾಯಣ ಕಾಶಿ ಉದ್ಘಾಟಿಸಿದರು.
ಕವಿಯತ್ರಿ ಹಾಗೂ ಕೆ ಲೈವ್ ಉಪಸಂಪಾದಕಿ ಕು.ಅಂಜುಂ ಸೊಗಸಾಗಿ ಕಾರ್ಯಕ್ರಮ ನಿರೂಪಿಸಿದರು.
ಅಭಾಸಾಪ ದ ಸಂಪರ್ಕ ಪ್ರಮುಖ ಸತ್ಯನಾರಾಯಣ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...

Constitution Day ನವೆಂಬರ್ 26.”ಸಂವಿಧಾನ ದಿನ” .ಫ್ರೀಡಂ ಪಾರ್ಕಿನಲ್ಲಿ ವಿಶೇಷ ಕಾರ್ಯಕ್ರಮ

Constitution Day ನ. 26 ರಂದು 'ಸಂವಿಧಾನ ದಿನಾಚರಣೆ' ಪ್ರಯುಕ್ತ ಭಾರತ...