COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು ದೀಪ, ಸಾಧನೆಯ ಸವಿಗೊಂದು ದೀಪ, ಭರವಸೆಯ ಬದುಕಿಗೊಂದು ದೀಪ, ಅಧ್ಯಯನಶೀಲತೆಗೊಂದು ದೀಪ, ಎಲ್ಲರೊಳಗೆ ಪ್ರೀತಿಯ ಮಳೆ ಸುರಿಸಿ, ಸಂಭ್ರಮ ಹೆಚ್ಚಿಸುವ ದೀಪ ಒಟ್ಟಾಗಿ ಬೆಳಗೋಣ. ಮಹಿಳೆಯಲ್ಲಿ ಕೌಶಲ್ಯ, ಕಲೆ, ಶ್ರದ್ಧೆ, ದಕ್ಷತೆ, ಮೇಧಾವಿತನ ಸಹಜವಾಗಿ ಇರುವಂತದ್ದು. ಇವುಗಳನ್ನು ಮತ್ತಷ್ಟು ಹೊಳಪು ಮಾಡಿಕೊಳ್ಳುವ ಕಾರ್ಯ ನಮ್ಮಿಂದಲೇ ಆಗಬೇಕು. ಭಾರತದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಲ್ಲಿ ಬಹುತೇಕ ಮಹಿಳೆಯರು ಈ ಸಾಮರ್ಥ್ಯ ಗುರುತಿಸಿಕೊಳ್ಳಲಾಗದೆ, ಬಳಸಿಕೊಳ್ಳಲಾಗದೆ, ಪ್ರಚುರಪಡಿಸಲಾಗದೆ ಸುಮ್ಮನಿದ್ದುಬಿಡುತ್ತಾರೆ. ತಮ್ಮ ಸಾಮರ್ಥ್ಯವನ್ನು ವಿವಿಧ ಆಯಾಮಗಳಲ್ಲಿ ಗುರುತಿಸಿಕೊಳ್ಳುವ ಕಾರ್ಯ ಮಹಿಳೆಯಿಂದಲೇ ಆಗಬೇಕು ಎಂದು ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಬಳಗದಿಂದ, ಕಾಸ್ಮೋ ಶುಭಾಗಂಣದಲ್ಲಿ ಹಮ್ಮಿಕೊಂಡಿದ್ದ ಮಹಿಳೆ: ಚಿಂತನ – ಮಂಥನ ಕಾರ್ಯಕ್ರಮದಲ್ಲಿ ಮಿತ್ರೆ ಕಾಸ್ಮೋ ಮಹಿಳಾ ಬಳಗದ ಅಧ್ಯಕ್ಷರಾದ ಶ್ರೀರಂಜಿನಿ ದತ್ತಾತ್ರಿಯವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ನುಡಿದರು. ಇಂದಿನ ಮಹಿಳಾ ಮಂಥನದ ವಿಚಾರ ಸ್ವಾವಲಂಬನೆ, ಕೌಶಲ್ಯ, ಕ್ರೀಡೆ, ಆರೋಗ್ಯ, ಕಾನೂನು, ಯೋಗಾಭ್ಯಾಸ ಇವೆಲ್ಲವೂ ಪ್ರತಿಯೊಬ್ಬ ಮಹಿಳೆಯ ಮನೋ, ದೈಹಿಕ, ಸಾಮಾಜಿಕ, ಭಾವನಾತ್ಮಕ ಬೆಳವಣಿಗೆಗೆ ಸಹಕಾರಿ ಎಂದೇ ಅಯೋಜಿಸಲಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆ ಕಾಲಿಟ್ಟ ರಂಗಗಳಲ್ಲಿ ತನ್ನ ದೃಢ, ದಕ್ಷ, ಪ್ರಾಮಾಣಿಕ ನಿಲುವುಗಳಿಂದ ಕಷ್ಟಸಹಿಷ್ಣುತೆಯಿಂದ COSMO Club Shivamogga ಮುನ್ನಡೆಯನ್ನು ಸಾಧಿಸಿದ್ದಾಳೆ. ಹೀಗೆ ಮುನ್ನಡೆಯುತ್ತಿರುವ ಮಹಿಳೆಯನ್ನು ಕಾಲೆಳೆಯುವ ಮನಸ್ಥಿತಿಯವರೂ ಇದ್ದಾರೆ. ಮಹಿಳೆಯ ಸಮರ್ಥ ಯೋಜನೆ, ದೃಢ ಭಾವವನ್ನು ನೆಲಸಮ ಮಾಡುವವರೂ ಇದ್ದಾರೆ. ಆದರೆ ಎದೆ ಗುಂದದೆ ಸಾಧನೆಯತ್ತ ಮುನ್ನಡಬೇಕು. ಬಹು ಮುಖ್ಯವಾಗಿ ಮಹಿಳೆ ತನ್ನ ಬಾಹ್ಯ ಸೌಂದರ್ಯ, ಸಂತೋಷ, ಪ್ರವಾಸ, ವಿಲಾಸಗಳಿಗಷ್ಟೇ ಮನಸ್ಸು ನೀಡದೆ ಅಧ್ಯಯನ ಶೀಲ ಮನಸ್ಸನನ್ನು ಬೆಳೆಸಿಕೊಂಡು, ಸಮಾಜಮುಖಿ ಚಿಂತನೆಯತ್ತ ಮೊಗ ಮಾಡಿರುವುದರಿಂದಲೇ ಸಮಾಜ ಸುಭಿಕ್ಷವಾಗಿರುವುದು ಮರೆಯಬಾರದು. ನಮ್ಮ ಸಂತೋಷಕ್ಕಾಗೆ ಹಲವು ಕಾರ್ಯಕ್ರಮ ಮಾಡಿರುವ ನಾವು, ಇದೀಗ ಅಧ್ಯಯನ ಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣವೆಂದರು.
ಮೇಧಾ ತಂಡದ ನಾಯಕಿಯಾದ ಶ್ರೀಮತಿ. ಪ್ರಜ್ಞಾ ಕಿರಣ್‌ರವರು ಪ್ರಾಸ್ಥವಿಕ ನುಡಿಗಳನ್ನಾಡಿ ಚಿಂತನ ಮಂಥನಗಳು ಸದಾ ಬದುಕಿಗೆ ದಾರಿದೀಪ. ನಾವು ನಡೆದ ಹಾದಿಯ ಅವಲೋಕನದೊಂದಿಗೆ ಮುಂದಿಡಬಹುದಾದ ಹೆಜ್ಜೆಯನ್ನು ಹೊಳಪುಮಾಡುತ್ತದೆ. ನಮ್ಮೊಳಗೆ ಜ್ಙಾನವೆಂಬ ಅರಿವಿನ ದೀಪ ಹಚ್ಚಲು ಇಂತಹ ವಿಚಾರ ಸಂಕಿರಣಗಳು ಸಹಕಾರಿ. ಈ ದಿಸೆಯಲ್ಲಿ ಹಮ್ಮಿಕೊಂಡಿರುವ ಮಹಿಳಾ ಮಂಥನಕ್ಕೆ ತಾವೆಲ್ಲರೂ ಆಗಮಿಸಿದ್ದು ಸಂತೋಷ ಎಂದು ಶುಭ ನುಡಿದರು.
“ಮಹಿಳೆ ಮತ್ತು ಸ್ವಾವಲಂಬನೆ” ಕುರಿತು ಶ್ರೀಮತಿ. ಚಂದ್ರಕಲಾ ಎಸ್.ವಿ. ಅಧ್ಯಕ್ಷರು, ಸ್ನೇಹವಾಹಿನಿ ಸಹಕಾರ ಸಂಘ ಇವರು ಸ್ವಾವಲಂಬನೆಯತ್ತ ಹೊರಟ ಮಹಿಳೆಯ ಯೋಜನೆ ಬೇರೆ ಇದ್ದರೂ ಸಂಪನ್ಮೂಲ ಕ್ರೂಢೀಕರಣದ ಭಾವಶುದ್ಧಿ ಒಂದೇ ಇರುತ್ತದೆ. ಹಸು ಸಾಗಾಣಿಕೆ, ಸಾಂಬಾರ ಪದಾರ್ಥಗಳ ಮಾರಾಟ, ಕೃಷಿ ಉತ್ಪನ್ನಗಳ ಬೆಳವಣಿಗೆ, ಗೃಹ ಕೈಗಾರಿಕೆಗಲ್ಲಿ ತೊಡಗಿಕೊಳ್ಳುವಿಕೆ, ಸಾಂಸ್ಕೃತಿಕ, ಸೌಂದರ್ಯ, ಕಲೆ, ವಿಜ್ಞಾನ ಇತ್ಯಾದಿ ರಂಗಗಳಲ್ಲಿ ಪರಿಣಿತಿ ಪಡೆದು ಮತ್ತೊಬ್ಬರಿಗೆ ತರಬೇತಿ ನೀಡಿ ಆದಾಯಗಳಿಕೆಯತ್ತ ಮೊಗ ಮಾಡುವ ಚಟುವಟಿಕೆಗಳು ಅನೇಕವಿದೆ. ಈ ಬಗ್ಗೆ ಅರಿವನ್ನು ಪಡೆಯೋಣ ಎಂದರು.
“ಮಹಿಳೆ ಮತ್ತು ಆರೋಗ್ಯ” ಕುರಿತು ಡಾ: ವಿನಯಾ ಶ್ರೀನಿವಾಸ್, ಕಾರ್ಯದರ್ಶಿಗಳು ಐ.ಎಂ.ಎ. ಇವರು ಹೆಣ್ಣು ಸಂಸಾರದ ಕಣ್ಣು. ಆದರೆ ಸ್ವತಹಃ ಅವಳ ಆರೋಗ್ಯದ ಬಗ್ಗೆ ಅವಳ ಕಾಳಜಿ ಇಂದಿಗೂ ಕಡಿಮೆಯೆ. ರಕ್ತಹೀನತೆ, ಮಲಬದ್ಧತೆ, ಒಬೆಸಿಟಿ, ಋತುಚಕ್ರದ ತೊಂದರೆ, ಸ್ವಸ್ಥ ಮನಸ್ಸು ಇತ್ಯಾದಿಗಳತ್ತ ಅವಳು ಗಮನ ಕೊಡುವುದರಲ್ಲಿ ಹಿಂದಿರುತ್ತಾಳೆ. ಈ ಬಗ್ಗೆ ಜಾಗೃತಿ ಅಗತ್ಯವೆಂದರು.
“ಮಹಿಳೆ ಮತ್ತು ಕೌಶಲ್ಯ” ಕುರಿತು ಶ್ರೀಮತಿ. ಉಮಾವೆಂಕಟೇಶ್, ಮಹಿಳೆಗೆ ಕೌಶಲ್ಯ ಸಹಜವಾಗಿರುವಂತದ್ದು, ಅದನ್ನು ಒರೆಗೆ ಹಚ್ಚಿ, ಹೊಳಪು ಮಾಡಿಕೊಳ್ಳವ ಜಾಣ್ಮೆ ಮಹಿಳೆಗೆ ಇರಬೇಕು. ಅವಕಾಶಗಳು ವಿಪುಲವಾಗಿವೆ ಬಳಸಿಕೊಳ್ಳವ ಕೌಶಲ್ಯ ಹೊಂದಬೇಕು. ಸೀರೆ ಕುಚ್ಚು, ವಿವಿಧ ಪ್ರಕಾರದ ರವಿಕೆಹೊಲಿಯುವಿಕೆ, ಅದಕ್ಕೆ ಚಿತ್ತಾರ ಹಾಕಿ ಅಲಂಕಾರ, ಮೆಹೆಂದಿ ಕಲೆ, ವಿವಿಧ ವೇಷಭೂಷಣಗಳ ವಿನ್ಯಾಸದ ಕೌಶಲ್ಯ ಇತ್ಯಾದಿ ರೂಡಿಸಿಕೊಳ್ಳಿ. ಈ ಕೌಶಲ್ಯಕ್ಕೆ ಮೆರಗುಬರುವುದು ಅವಳ ಶ್ರಮ ಸಿದ್ದಧಾಮತ ಮತ್ತು ಆತ್ಮೀಯ ನಡವಳಿಕೆಗಳು ಎಂದರು.
“ಮಹಿಳೆ ಮತ್ತು ಕ್ರೀಡೆ” ಕುರಿತು ಶ್ರೀಮತಿ ಶಶಿಕಲಾರವರು ಇವತ್ತಿಗೂ ಕ್ರೀಡಾ ರಂಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕೊರತೆ ಇದೆ. ಕಾರಣ ಸಂಕೋಚ ಸ್ವಭಾವ. ರಾಜ್ಯ, ರಾಷ್ಟçಮಟ್ಟದ ಹಂತ ತಲುಪಲು ನಿರಂತರ ಅಭ್ಯಾಸ, ಸಮಯ ಮೀಸಲು ಇಡುವುದು ಅಗತ್ಯ. ಕ್ರೀಡಾ ರಂಗದಲ್ಲಿ ಹೆಜ್ಜೆ ಹಿಂದಿಡದೆ ಮುನ್ನಡೆದ ಬಹುತೇಕರಿಗೆ ಜಯ ಲಭಿಸಿದೆ ಮತ್ತಷ್ಟು ಮಹಿಳಾ ಕ್ರೀಡಾಪಟುಗಳ ಸಂಖ್ಯೆ ವೃದ್ಧಿಸಲಿ ಎಂದರು.
“ಮಹಿಳೆ ಮತ್ತು ಕಾನೂನು” ಶ್ರೀಮತಿ. ಪ್ರೇಮಾ ಇ. ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದ ಸದಸ್ಯರು, ಚಿ.ಮಗಳೂರು ಇವರು ಸಮಾಜದ ಪ್ರತಿಯೊಬ್ಬರೂ ಆರೋಗ್ಯ ಮತ್ತು ಕಾನೂನು ಇದರ ಅರಿವಿನಿಂದ ದೂರ ಇರೋಣ ಎಂದೇ ಬಯಸುತ್ತಾರೆ. ಆದರೆ ಪ್ರತಿಯೊಬ್ಬರಿಗೂ ಇದರ ತಿಳುವಳಿಕೆ ಇದ್ದರೆ ಎಂತಹ ಕಷ್ಟದ ಸಮಯದಲ್ಲು ಹೇಗೆ ಸಹಕಾರಿ ಆಗುತ್ತದೆ ಎಂದು ಹಲವು ಉದಾಹರಣೆಗಳ ಸಹಿತ ವಿವರಿಸಿದರು. ವ್ಯವಹಾರಿಕ ಜಗತ್ತಿನಲ್ಲಿ ಕಾನೂನಿನ ಅರಿವು ಇಲ್ಲದಾಗ ಗೊಂದಲ, ಗಲಭೆ, ಕ್ಷೆÆÃಭೆಗಳಿಗೆ ಒಲಗಾಗುವ ಹಲವು ಮಜಲುಗಳನ್ನು ತೆರೆದಿಟ್ಟರು.
“ಮಹಿಳೆ ಮತ್ತು ಯೋಗ” ಶ್ರೀಮತಿ. ಅರುಣಾ ಪ್ರಕಾಶ್, ಯೋಗ ಶಿಕ್ಷಕಿ ಇವರು, ಪುರುಷರಿಗಿಂತ ಮಹಿಳೆಯರಿಗೆ ಒತ್ತಡ ಜಾಸ್ತಿ. ಜವಾಬ್ದಾರಿ ಹೆಚ್ಚಿರುವ ಕಡೆ ಒತ್ತಡ ಸಹಜವಾದದ್ದು. ಮಹಿಳೆಯ ಮಲಬದ್ಧತೆ, ಮುಟ್ಟು, ಬಂಜೆತನ, ಬೆನ್ನು, ಕುತ್ತಿಗೆ, ಸೊಂಟದ ನೋವು, ಪ್ರಸವಪೂರ್ವ, ಪ್ರಸವದ ನಂತರ, ಮಧ್ಯವಯಸ್ಸು, ವೃದ್ಧಾಪ್ಯ ಹೀಗೆ ವಿವಿಧ ನೆಲೆಯಲ್ಲಿ ಆಗುವ ತೊಂದರೆಗಳು ಅದರ ಪರಿಹಾರದ ಬಗ್ಗೆ ಯೋಗಾಭ್ಯಾಸ ಹೇಗೆ ಉಪಯುಕ್ತ ಎಂದು ತಿಳಿಸಿದರು.
ನಿರ್ವಾಕರಾಗಿ ಆಗಮಿಸಿದ್ದ ಪ್ರೊ: ಕಿರಣ್ ದೇಸಾಯಿ, ಖ್ಯಾತ ವಾಗ್ಮಿ, ಚಿಂತಕಿ ಇವರು ಅರಿವಿನ ಜ್ಞಾನ ಒರೆಗೆ ಹಚ್ಚುವ, ಚಿಂತನೆಯ ಹೊತ್ತಿಗೆ ತೆರೆದಿಡುವ ವಿಷಯಗಳನ್ನು ಇಂದು ಮಿತ್ರೆ ಕಾಸ್ಮೋ ಕ್ಲಬ್‌ನ ಅಧ್ಯಕ್ಷರು ಮತ್ತವರ ಬಳಗ ಏರ್ಪಡಿಸಿರುವುದು ಶ್ಲಾಘನೀಯ. ವಿಚಾರ ಮಂಥನಗಳೇ ಬದುಕಿಗೆ ಶಕ್ತಿ ನೀಡುವುದು. ಕ್ರಿಯಾಶೀಲತೆ, ಕ್ರೀಡೆ, ಕೌಶಲ್ಯ, ಕಲೆಗಳು ಸ್ವಾವಲಂಭಿ ಬದುಕಿಗೆ ಸಹಕಾರಿ ಎಂಬುದಕ್ಕೆ ಲಕ್ಷಾಂತರ ಉದಾಹರಣೆಗಳು ನಮ್ಮ ಮುಂದೆ ಇವೆ. ಸಾಧನೆಯ ಪ್ರೇರಣೆಗೆ ಇಚ್ಚಾಶಕ್ತಿಯೇ ಕಾರಣ. ಇಚ್ಚೆ, ಕ್ರಿಯೆ, ಜ್ಞಾನ ಸಮ್ಮಿಳಿತಗೊಂಡಾಗ ಸ್ವತಹಃ ಅವಳು ಸಂಪನ್ಮೂಲ ಭರಿತಳಾಗುತ್ತಾಳೆ ಎಂದು ಹಲವು ವಿಚಾರಗಳ ತಿಳಿಸಿ, ಹಾಸ್ಯ ರಸಧಾರೆಯ ಮೂಲಕ ಮಹಿಳಾ ಮಂಥನದ ವಿಚಾರಗೋಷ್ಠಿಯನ್ನು ಸಂಪನ್ನಗೊಳಿಸಿದರು.
ಕಾರ್ಯಕ್ರಮದಲ್ಲಿ ಮಿತ್ರೆಯ ಕಾರ್ಯದರ್ಶಿ ದೀಪಾ ಶ್ರೀನಿವಾಸ್, ಖಜಾಂಚಿ ವೀಣಾ ಹರ್ಷ ಉಪಸ್ಥಿತಿ ಇದ್ದರು. ಮೇಧಾ ತಂಡದ ಸದಸ್ಯರಾದ ಸುಮಾರಾಣಿ ಕಾರ್ಯಕ್ರಮ ನಿರೂಪಿಸಿ, ಶೋಭಾರಾಣಿ ಸ್ವಾಗತಿಸಿ, ವೀಣಾಹರ್ಷ ಅತಿಥಿಗಳನ್ನು ಪರಿಚಯಿಸಿ, ಸ್ಮಿತಾ ಸಾತ್ವಿಕ್ ಮೇಧಾ ಎಂಬ ಋಷಿಕೆಯ ಬಗ್ಗೆ ಪರಿಚಯಿಸಿ, ವಿನಯಾ ಇಂದಿರೇಶ್ ಮತ್ತು ತಂಡ ಪ್ರಾರ್ಥಿಸಿದರು. ಇನ್ನುಳಿದ ಮೇಧಾ ತಂಡದ ವನಿತಾ ನಾಯಕ್, ಸಂಧ್ಯಾ ಉಮೇಶ್, ಗೌರಿ ರಂಗಧೋಳ್, ಕ್ಷಮಾ, ಶಾಲಿನಿ ಜಾದವ್, ಶ್ರೀಲತಾ ಪ್ರಭುರವರು ಪ್ರತಿಯೊಂದನ್ನು ಸಜ್ಜುಗೊಳಿಸಿದರು.
ಸಂಪನ್ಮೂಲ ವ್ಯಕ್ತಿಗಳನ್ನು ಮಿತ್ರೆ ಬಳಗದಿಂದ ಹರಿದ್ರಾ ಕುಂಕುಮ ನೀಡಿ ಗೌರವಿಸಲಾಯಿತು.
ಮೇಧಾ ತಂಡದಿಂದ ನೃತ್ಯ ವೈಭವ, ಕನ್ನಡ ನಾಡು ನುಡಿ ಸಂಬAಧಿತ ರಸಪ್ರಶ್ನೆ, ಅದೃಷ್ಠವಂತ ಕನ್ನಡತಿ ಬಹುಮಾನ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.