Sunday, December 14, 2025
Sunday, December 14, 2025

Shri Shankar Narayan Kashi Trust ಬಹು ಸಾಂಸ್ಕೃತಿಕ ಆಸಕ್ತಿಗಳ ಕೇಂದ್ರ ವ್ಯಕ್ತಿ, ಮಥುರಾ ಗೋಪಿನಾಥ್- ಪತ್ರಕರ್ತ ಎನ್.ಮಂಜುನಾಥ್

Date:

Shri Shankar Narayan Kashi Trust ಶಿವಮೊಗ್ಗ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಹಾಗೂ ಹಲವು ಯೋಜನೆಗಳ ಮಂಜೂರಾತಿಯಲ್ಲಿ ಮಧುರ ಪ್ಯಾರಡೈಸ್ ಶಕ್ತಿ ಕೇಂದ್ರವಾಗಿ ಕಾರ್ಯನಿರ್ವಹಿಸಿದೆ ಎಂದು ಕ್ರಾಂತಿ ದೀಪ ಪತ್ರಿಕೆ ಸಂಪಾದಕ ಹಾಗೂ ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ ಎನ್ ಮಂಜುನಾಥ್ ಹೇಳಿದರು.
ರವೀಂದ್ರನಗರ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಶ್ರೀ ಶಂಕರ್ ನಾರಾಯಣ ಕಾಶಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮಥುರ ಪ್ಯಾರಡೈಸ್ ರಜತ ಮಹೋತ್ಸವ, ಕನ್ನಡ ರಾಜ್ಯೋತ್ಸವ, ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಉಮಾಶಂಕರ್ ಉಪಾಧ್ಯ ಹಾಗೂ ಎನ್ ಗೋಪಿನಾಥ್ ಇವರುಗಳು ನನ್ನ ಕನಸಿನ ಶಿವಮೊಗ್ಗ ತಂಡವನ್ನ ರಚಿಸಿಕೊಂಡು ಶಿವಮೊಗ್ಗ ನಗರದಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನ ಕೈಗೊಂಡರು ಶಿವಮೊಗ್ಗ ನಗರದಲ್ಲಿ ಇಂದು ಸಾಕಷ್ಟು ಗಿಡಮರಗಳು ಬೆಳೆದಿದ್ದರೆ ಅದರ ಹಿಂದೆ ನನ್ನ ಕನಸಿನ ತಂಡ ಕಾರ್ಯವಿದೆ ಎಂದು ಹೇಳಿದರು.
ಶಿವಮೊಗ್ಗ ನಗರಕ್ಕೆ ವೈದ್ಯಕೀಯ ಕಾಲೇಜನ್ನು ತರುವ ನಿಟ್ಟಿನಲ್ಲಿ ಹಲವು ಸಭೆಗಳನ್ನ ಮಾಡಲಾಯಿತು. ಕೆಲವು ಸಭೆಗಳ ಪ್ರಯತ್ನ ವಿಫಲವಾಯಿತು. ಅಂತಿಮ ವಾಗಿ ನಡೆಸಿದ ಪ್ರಯತ್ನದಿಂದಾಗಿ ಶಿವಮೊಗ್ಗಕ್ಕೆ ವೈದ್ಯ ಕೀಯ ಕಾಲೇಜ್ ಮಂಜೂರಾಯಿತು ಎಂದರು.
ಉಮಾಶಂಕರ ಉಪಾಧ್ಯಕ್ಷ ಹಾಗೂ ಮಥುರ ಗೋಪಿನಾಥ್ ಇವರುಗಳಿಗೆ ಶಿವಮೊಗ್ಗದ ಜನಪ್ರತಿ ನಿಧಿಯಾಗುವ ಎಲ್ಲಾ ಅರ್ಹತೆ ಇತ್ತು. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಅದು ಈಡೇರಲಿಲ್ಲ ಎಂದರು.

Shri Shankar Narayan Kashi Trust
ಪತ್ರಿಕೋದ್ಯಮದಲ್ಲಿ ಸರ್ವಶ್ರೇಷ್ಠ ಪ್ರಶಸ್ತಿ ಎನಿಸಿಕೊಂಡಿರುವ ಮೊಹರೆ ಹಣಮಂತರಾಯ ಪ್ರಶಸ್ತಿಗೆ ಭಾಜನರಾದ ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಎನ್.ಮಂಜುನಾಥ್‌ರವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಸವಾಲಾತ್ಮಕ ಭಾವಗೀತೆ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ನಡೆಯಿತು.
ಕನಕದಾಸರ ಪದಗಳ ಗಾಯನ ಕಾರ್ಯಕ್ರಮ ಗುರುಗುಹ ಸಂಗೀತ ಮಹಾವಿದ್ಯಾಲಯದ ವತಿಯಿಂದ ನಡೆಸಲಾಯಿತು.
ಸಭೆಯಲ್ಲಿ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್ ರವಿಕುಮಾರ್, ಎನ್ ಗೋಪಿನಾಥ್, ನಿರ್ಮಲ ಕಾಶಿ, ಉಮಾಶಂಕರ್ ಉಪಾಧ್ಯ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...