Dargah Shah Aleem Deewan ಶಿವಮೊಗ್ಗದ ಹಜ್ರತ್ ಸೈಯದ್ ಶಾ ಅಲೀಮ್ ದಿವಾನ್ ಬಾಬಾ ದರ್ಗಾ ದಲ್ಲಿ ಮೂರು ದಿನಗಳ ಉರುಸ್ ಸಮಾರಂಭ ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ರೆಹಮಾನ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.24,25ಮತ್ತು 26ರಂದು ಕಾರ್ಯಕ್ರಮ ಏರ್ಪಡಿಸಲಾಗಿದ್ದು, 24 ಭಾನುವಾರ ರಂದು ಮಧ್ಯಾಹ್ನ 3 ಗಂಟೆಯಿಂದ ದರ್ಗಾ ಸಂದಲ್ ಮೆರವಣಿಗೆ ಪ್ರಾರಂಭವಾಗಲಿದ್ದು ನಗರದ ಟ್ಯಾಂಕ್ ಮೊಹಲ್ಲ, ಬಿ ಎಚ್ ರಸ್ತೆ , ಎಂಕೆ ಕೆ ರೋಡ್, ಗಾಂಧಿಬಜಾರ್, ನೆಹರು ರಸ್ತೆ ಮುಖಾಂತರವಾಗಿ ದರ್ಗಾದಲ್ಲಿ ಮುಕ್ತಾಯವಾಗಲಿದೆ. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ , ಧರ್ಮ ಗುರುಗಳ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನ.25 ರಂದು ಬೆಳಗ್ಗೆ 11ರಂದು ದರ್ಗಾ ಆವರಣದಲ್ಲಿ ಮುಸ್ಲಿಂ ವಧು-ವರರ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ವಿವಾಹದಲ್ಲಿ ಸುಮಾರು 15 ವಧು-ವರರ ಮದುವೆ ನಡೆಯಲಿದೆ ನಂತರ ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
Dargah Shah Aleem Deewan ಮರುದಿನ ನವೆಂಬರ್ 26ರಂದು ಸೂಫಿ ಕವಾಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ . ಈ ಎಲ್ಲಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದರ್ಗಾ ಉರಸ್ ಕಮಿಟಿಯ ಅಧ್ಯಕ್ಷರಾದಂತಹ ಶ್ರೀ ಸೈಯದ್ ಮುಝಮ್ಮಿಲ್ ರವರ ನೇತೃತ್ವದಲ್ಲಿ ಹಾಗೂ ದರ್ಗಾ ಉರುಸ್ ಕಮಿಟಿ ಯ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದರು,
ಹಾಗೂ ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯದ ದರ್ಗಾಗಳ ಧರ್ಮ ಗುರುಗಳು, ಸೂಫಿ ಸಂತರು, ದರ್ಗಾ ಶಾಪಿಂಗ್ ಕಾಂಪ್ಲೆಕ್ಸ್ ಮ್ಯಾನೇಜ್ಮೆಂಟ್ ಕಮಿಟಿ ಯ ಅಧ್ಯಕ್ಷರಾದಂತಹ ಕೇಬಲ್ ಫೈರೋಜ್ ರವರು ಹಾಗೂ ಕಮಿಟಿಯ ಸದಸ್ಯರು ನಗರದ ಮುಸ್ಲಿಂ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ದರ್ಗಾ ಉರುಸ್ ಕಮಿಟಿಯ ಕಾರ್ಯದರ್ಶಿ ರೆಹಮಾನ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ