Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ 2024 ರ ಸಾಲಿನ ರಾಜ್ಯ ಮಟ್ಟದ ಪ್ರತಿಷ್ಠಿತ “ಸಹಕಾರ ರತ್ನ ” ಪ್ರಶಸ್ತಿ ಗೆ ಕೊಪ್ಪ, ಶೃಂಗೇರಿ ಯ ಹಿರಿಯ ಸಹಕಾರಿ ಎಸ್ ಎನ್ ವಿಶ್ವನಾಥ್ ಮೊದಲಮನೆ ಇವರು ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ಬಾಗಲಕೋಟೆ ಯಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮ ದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಇವರಿಂದ ವಿಶ್ವನಾಥ್ ಈ ಪ್ರಶಸ್ತಿ ಸ್ವೀಕರಿಸಿದರು.
ಪ್ರಸ್ತುತ ಹಿಮಗಿರಿ ಸೌಹಾರ್ದ ಸಹಕಾರ ಸಂಫದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ವಿಶ್ವನಾಥ್ 30 ವರ್ಷಗಳಿಂದ ಸಹಕಾರಿ ರಂಗದಲ್ಲಿ ಇದ್ದಾರೆ. ಕರಿಮನೆ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ, ಗಾಯಿತ್ರಿ ಸೌಹಾರ್ದ ದ ಸ್ಥಾಪಕ ಅಧ್ಯಕ್ಷರಾಗಿ , ರಾಜ್ಯ ಭೂ ಬ್ಯಾಂಕ್ ನ ಕಾಮನ್ ಕೆಡರ್ ಸಮಿತಿ ಸದಸ್ಯರಾಗಿ, 10 ವರ್ಷ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತ ದ ಸದಸ್ಯರಾಗಿ ಈ ಕ್ಷೇತ್ರ ಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ.
Department of Cooperation ಸಂಸ್ಥೆ ಗಳನ್ನು ಬೆಳೆಸುವಲ್ಲಿ ವಿಶ್ವನಾಥ್ ಸದಾ ಹಿರಿದಾದ ಪಾತ್ರ ನಿರ್ವಹಿಸುತ್ತಾರೆ.
ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ, ಶ್ರೀ ಭಾರತೀ ತೀರ್ಥ ಕಲ್ಚರಲ್ ಟ್ರಸ್ಟ್ ನ ವಿಶ್ವಸ್ತ ರಾಗಿಯೂ ಸೇವೆ ಸಲ್ಲಿಸಿರುವ ವಿಶ್ವನಾಥ್ ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರ ನಟರಾಗಿಯೂ ವಿವಿಧ ಕ್ಷೇತ್ರ ದಲ್ಲಿ ತೊಡಗಿದ ಕ್ರಿಯಾಶೀಲರಾಗಿದ್ದಾರೆ.
ಜಲಪಾತ ಸಿನಿಮಾ ದಲ್ಲಿ ರೈತ ರಾಮಣ್ಣ ನ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ.
ಸರಳ ಸಜ್ಜನಿಕೆಯ ವ್ಯಕ್ತಿತ್ವ ದ ವಿಶ್ವನಾಥ್ ಅವರಿಗೆ ಈ ಸಂದರ್ಭದಲ್ಲಿ ಹಲವು ಸಂಫ ಸಂಸ್ಥೆ ಗಳೂ ಅಭಿನಂದನೆ ತಿಳಿಸಿವೆ.