Sri Shivaganga Yoga Centre ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಗಾಯತ್ರಿ ದೇವಿ ಸಜ್ಜನ್, ಡಾ. ಪದ್ಮನಾಭ ಅಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಶ್ರೀ ಪದ್ಮನಾಭ ಅಡಿಗ ಅವರು ಮಾತನಾಡುತ್ತ ಶರಣರ, ದಾಸರ, ವಚನಕಾರರ ಕೊಡುಗೆ ಕನ್ನಡ ಉಳಿಯುವಲ್ಲಿ, ಬೆಳೆಯುವಲ್ಲಿ ಅಪಾರವಾಗಿದೆ ಎಂದು ತಿಳಿಸಿದರು. ಶ್ರೀ ಲವಕುಮಾರ್ ಕನ್ನಡದ ಹಿರಿಮೆ, ಗರಿಮೆ ಹಾಗೂ ಬೆಳೆದು ಬಂದ ಹಾದಿ ಕುರಿತು ವಿಸ್ತಾರವಾಗಿ ತಿಳಿಸಿದರು. ಶ್ರೀಮತಿ ಭಾಗ್ಯ ಕನ್ನಡಿಗರ ಸಾಧನೆ ಕುರಿತು ಮಾತನಾಡಿದರು. ಡಾ. ನಾಗರಾಜ ಪರಿಸರ ಮಾತನಾಡಿ ನಾವೆಲ್ಲ ನಮ್ಮ ಮನೆಯಲ್ಲಿ, ಕಚೇರಿ ಸ್ಥಳಗಳಲ್ಲಿ ಕನ್ನಡದಲ್ಲಿ ಮಾತಾನ್ನಾಡುತ್ತ ಕನ್ನಡವನ್ನು ಪ್ರೀತಿಸಬೇಕು , ಕನ್ನಡ ಬಳಸಬೇಕು, ಬೆಳೆಸಬೇಕು, ಉಳಿಸಬೇಕು ಎಂದರು.
Sri Shivaganga Yoga Centre ಮಕ್ಕಳಿಗೆ ಈಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಸಿಕ್ಕಿರುವುದು ಬಹಳ ಸಂತೋಷದ ವಿಚಾರ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಗಾಚಾರ್ಯ ರುದ್ರಾರಾಧ್ಯ ವಹಿಸಿ ಮಾತನಾಡುತ್ತಾ ನಮ್ಮಲ್ಲಿನ ಯೋಗಾಸಕ್ತರೆಲ್ಲ ಕೂಡಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಕನ್ನಡ ಗೀತೆಗಳನ್ನು ಸುಮಧುರವಾಗಿ ಹಾಡಿದ್ದು ಬಹಳ ಸಂತೋಷ ಕೊಟ್ಟಿತು. ಮುಂದಿನ ದಿನಗಳಲ್ಲಿಯೂ ಸಹ ಇನ್ನೂ ದೊಡ್ಡಮಟ್ಟದಲ್ಲಿ ರಾಜ್ಯೋತ್ಸವ ಆಚರಣೆಯನ್ನು ಮಾಡೋಣ ಎಂದು ಸಂತಸ ವ್ಯಕ್ತಪಡಿಸಿದರು . ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಕುಮಾರ ಅಭಯ್ ಅದ್ಭುತವಾಗಿ ಕನ್ನಡ ಗೀತೆಯನ್ನು ಹಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕುಮಾರಿ ಧನ್ಯತಾ ಕನ್ನಡ ಗೀತೆಯನ್ನು ಸೊಗಸಾಗಿ ಹಾಡಿದಳು. ಇನ್ನುಳಿದಂತೆ ತಂಡೋಪ ತಂಡವಾಗಿ ಪುರುಷರು ಮಹಿಳೆಯರು ಎಲ್ಲರೂ ಒಟ್ಟಾಗಿ ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸಂಭ್ರಮಿಸಿದರು. ಶ್ರೀಮತಿ ವಿನಂತಿ ಪ್ರಾರ್ಥಿಸಿದರು. ಶ್ರೀಮತಿ ಶೀಲಾ ಸುರೇಶ್ ಪ್ರಸ್ತಾವಿಕ ನುಡಿಯನ್ನು ಆಡಿದರು. ಶ್ರೀಮತಿ ವೀಣಾ. ಎಸ್. ಕುಮಾರ್ ಸುಂದರವಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.