Wednesday, January 29, 2025
Wednesday, January 29, 2025

School Education ಶಾಲಾ ಶಿಕ್ಷಣ ಸಚಿವರು ವಿದ್ಯಾರ್ಥಿಯ ಮಾತಿಗೆ ಕೆಂಡಾಮಂಡಲ!

Date:

School Education ನಮ್ಮ ರಾಜ್ಯದ ಶಾಲಾ ಶಿಕ್ಷಣ ಮಂತ್ರಿಗಳಿಗೇ ವಿದ್ಯಾರ್ಥಿಯೊಬ್ಬ “ವಿದ್ಯಾಮಂತ್ರಿಗೆ ಕನ್ನಡ ಬರಲ್ಲ” ಎಂದು
ಆಕ್ಷೇಪಿಸಿದ ಘಟನೆ ನಡೆದಿದೆ.

ಬೆಂಗಳೂರಿನ ವಿಧಾನಸೌಧದಲ್ಲಿ ಇಲಾಖೆ ಏರ್ಪಡಿಸಿದ್ದ
” ವರ್ಚುಯಲ್ ಸಂವಾದ” ದಲ್ಲಿ ಶಾಲಾಶಿಕ್ಷಣ ಸಚಿವ ಮಧು ಬಂಗಾರಪ್ಪ ಪಾಲ್ಗೊಂಡು ಮಾತನಾಡುತ್ತಿದ್ದಾಗ ಈ ಪ್ರಸಂಗ ನಡೆದಿದೆ.
ಸರ್ಕಾರಿ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಟ್,ಜೆಇಇ,ಸಿಇಟಿ ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ಕೋಚಿಂಗ್ ನೀಡುವ
ತರಗತಿಗಳಿಗೆ ಸಚಿವರು ಚಾಲನೆ ನೀಡುವ ವೇಳೆ ಹೀಗೆ
ಸರಕ್ಕನೆ ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ. ಇದು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದು ಹಳೆಯದಾಗಿದೆ.
ಆದರೂ ಸಚಿವರು ಕನ್ನಡ ಓದಲು ಸಾಕಷ್ಟು ಕಸರತ್ತು ಮಾಡುವ ಬಗ್ಗೆಯೂ ವಿಡಿಯೋಗಳು ಈಗಾಗಲೇ ಹರಿದಾಡಿವೆ. ಸಿದ್ದಪಡಿಸಿದ ಭಾಷಣ ಓದುವಾಗಲೂ ಸಚಿವರು ಪ್ರಯಾಸದಿಂದ ತಪ್ಪು ಉಚ್ಚಾರಣೆ ಮಾಡುವುದನ್ನ ಬಹಳಷ್ಟು ಮಂದಿ ಪರಿಣಿತರೂ ಗಮನಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಂದ ಟೀಕೆ ಬಂದಾಗ ಸಚಿವರು ತೆರೆದ ಮನಸ್ಸಿನಿಂದ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ.
ಆದರೆ ಅವರು ಮುಂಬರುವ ದಿನಗಳಲ್ಲಿ ಸುಧಾರಿಸಿಕೊಳ್ಳುವ ಬಗ್ಗೆ ಜನತೆಗೆ ಅರಿವಾದರೆ ಈ ರೀತಿಯ ಮುಜುಗರ ಸನ್ನಿವೇಶಗಳನ್ನ ತಪ್ಪಿಸಬಹುದು.
ಸಂವಾದದಲ್ಲಿ ಮೊದಲಿಗೆ ಲಘುಧಾಟಿಯಲ್ಲಿ ವಿದ್ಯಾರ್ಥಿಯ ಪ್ರತಿಕ್ರಿಯೆ ಸ್ವೀಕರಿಸಿ ಸಚಿವರು ಹಾಗೇ ಸುಮ್ಮನಿರಬೇಕಿತ್ತು.

ಆದರೆ ” ಸ್ಟುಪಿಡ್” ಎಂದು ಉದ್ಗರಿಸಿದ್ದಾರೆ. ಯಾರಿಗೆ ಹೇಳಿದರು ಗೊತ್ತಿಲ್ಲ. ” ಮೀಡಿಯಾದವರು ಇದನ್ನೇ ಇಟ್ಟುಕೊಂಡು ಹೊಡೀತಾರೆ” ಎಂದೂ ಪ್ರತಿಕ್ರಿಯಿಸಿದರು.
” ಇಂತಹ ನಡವಳಿಕೆ ಸರಿಯಲ್ಲ.ಇದು ಮೂರ್ಖತನ. ನಾಚಿಕೆಯಾಗಬೇಕು.
ಇಂಥದ್ದನ್ನ ಸಹಿಸಿಕೊಳ್ಳಲಾಗಲ್ಲ.
ಯಾರು ಈ ರೀತಿ ಹೇಳಿದ್ದು,ರೆಕಾರ್ಡ್ ತೆಗೆದು ಪತ್ತೆಹಚ್ಚಿ ಗಂಭೀರವಾಗಿ ಪರಿಗಣಿಸಿ.ಸಂಬಂಧಪಟ್ಟ ಬಿಇಓ, ಶಾಲಾಮುಖ್ಯಶಿಕ್ಷಕರು ಯಾರೆಂದು ಪತ್ತೆಮಾಡಿ ಹೇಳಲು ಸೂಚನೆ ನೀಡಿ ಕೈಗೊಳ್ಳಿ” ಎಂದು ಇಲಾಖೆ ಚೀಫ್ ಸೆಕ್ರೆಟರಿ ರಿತೇಶ್ ಕುಮಾರ್ ಸಿಂಗ್ ಮತ್ತು ಪಿಯು ಮಂಡಳಿ ನಿರ್ದೇಶಕಿ ಸಿಂಧು ರೂಪೇಶ್ ಅವರಿಗೆ ಫಟ್ಟನೆ ತಿಳಿಸಿದ್ದಾರೆ.

School Education ಇಲ್ಲಿ ವಿದ್ಯಾರ್ಥಿಯ ಬಗ್ಗೆ ಆತ ಹೇಳಿದ್ದು ಔಚಿತ್ಯಪೂರ್ಣವಿರಲಿಲ್ಲ. ಕಾರ್ಯಕ್ರಮದ ಧ್ಯೇಯವೇ ಬೇರೆ, ವಿದ್ಯಾರ್ಥಿ ಮಾತಾಡಿದ್ದೇ ಬೇರೆ.
ಈ ದೃಷ್ಟಿಯಿಂದ ಅದು ವಿದ್ಯಾರ್ಥಿಯ ಅನುಚಿತ ವರ್ತನೆ ಒಪ್ಪೋಣ. ಆದರೆ ವಾಸ್ತವಾಂಶದಲ್ಲಿ ಸಚಿವರ ‌ಕನ್ನಡ ವಾಚನ ಪ್ರಕ್ರಿಯೆ ಮಾತ್ರ ಸಮಾಧಾನಕರವಿಲ್ಲ ಎಂಬ ನಿಷ್ಠುರ ಸತ್ಯವನ್ನ ಮತ್ತೆ ಅವರು ಒಪ್ಪಿಕೊಳ್ಳಬೇಕು.
ಕನ್ನಡ ಓದುವುದನ್ನ ಆಭ್ಯಾಸಮಾಡಿದ್ದೇನೆ,ಮಾಡುತ್ತಿದ್ದೇನೆ ಎಂಬ ಅವರ ಸದ್ಯದ ಬೆಳವಣಿಗೆಯ ಬಗ್ಗೆಯಾದರೂ ತಿಳಿಸಬಹುದಿತ್ತು.
ವಿದ್ಯಾರ್ಥಿಯ ಬಗ್ಗೆ ಕ್ರಮ ಜರುಗಿಸುವಲ್ಲಿ
ಅವರ ಸೂಚನೆ ಪಾಲನೆಯಾಗುತ್ತದೆ.
ಆದರೆ ಮತ್ತೆ ಅವರ ಸಿದ್ಧಪಡಿಸಿದ ಭಾಷಣ ಕೇಳುವ “ನಮ್ಮ ಸಮಯ” ಬಂದಾಗ ಮತ್ತೆ ಸಚಿವರ ಕನ್ನಡ ಭಾಷಾ ಜ್ಞಾನವನ್ನ ಜನತಾ ಪಂಡಿತ ವಲಯವು ಒರೆಗಲ್ಲಿಗೆ ಹಚ್ಚಲಾಗುತ್ತದೆ ಎಂಬುದನ್ನ ಮರೆಯುವಂತಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Royal English Medium School ಆರೋಗ್ಯದಲ್ಲಿ ತರಕಾರಿಗಳ ಮಹತ್ವ.‌ರಾಯಲ್ ಡೈಮಂಡ್ ಶಾಲೆಯಲ್ಲಿ‌ ವಿಶಿಷ್ಟ ಕಾರ್ಯಕ್ರಮ

Royal English Medium School ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನೆಡದ...

Kudali Sringeri Shankaracharya ತುಂಗಭದ್ರಾ ಸಂಗಮ ಕೂಡಲಿಯಲ್ಲಿ ಶ್ರೀನರಸಿಂಹ ಭಾರತಿ ಸ್ವಾಮಿಗಳ ಆರಾಧನೆ

Kudali Sringeri Shankaracharya ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ದಕ್ಷಿಣಾಮ್ನಾಯ ಶ್ರೀ‌ಶಾರದಾ...

CM Siddharamaiah ಮುಖ್ಯಮಂತ್ರಿಗಳಿಂದ ಅನುಸೂಚಿತ ಜಾತಿ & ಬುಡಕಟ್ಟುಗಳ ಮೇಲ್ವಿಚಾರಣಾ ಸಮಿತಿ ಸಭೆ

CM Siddharamaiah ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ...