Sunday, November 17, 2024
Sunday, November 17, 2024

Scheduled Castes Welfare Department ತನ್ನ ಸಮುದಾಯದ ಜನರನ್ನ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಸಾಹಸಿ ,ಬಿರ್ಸಾ ಮುಂಡಾ- ಸಂಸದ ರಾಘವೇಂದ್ರ

Date:

Scheduled Castes Welfare Department ಭಾರತೀಯ ಬುಡಕಟ್ಟುಸ್ವಾತಂತ್ರ್ಯ ಹೋರಾಟಗಾರ ಭಗವಾನ್ ಬಿರ್ಸಾ ಮುಂಡಾ ಅವರು ತಮ್ಮ ಜೀವತಾವಧಿಯ ಅತ್ಯಲ್ಪ ಕಾಲದಲ್ಲಿ ಬ್ರಿಟೀಷರ ವಿರುದ್ಧ ಮಾತ್ರವಲ್ಲ ತನ್ನ ಸಮುದಾಯದ ಜನರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ನಿರಂತರ ಹೋರಾಡಿದ ಮಹಾನ್ ಸಾಧಕರಾಗಿದ್ದರು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಏರ್ಪಡಿಸಲಾಗಿದ್ದ ಭಗವಾನ್ ಶ್ರೀ ಬಿರ್ಸಾಮುಂಡಾ ಅವರ 150ನೇ ಜಯಂತಿ ಹಾಗೂ ಜನಜಾತೀಯ ಗೌರವ ದಿವಸ ಆಚರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಬ್ರಿಟೀಷರ ವಸಾಹತುಶಾಹಿ ಶೋಷಣೆ ವಿರುದ್ಧ ಜನರ ಪ್ರತಿರೋಧದ ನಾಯಕರಾಗಿ ಹೊರಹೊಮ್ಮಿದ್ದ ಭಗವಾನ್ ಬಿರ್ಸಾಮುಂಡಾ, ಜನರ ಹಕ್ಕುಗಳ ಹೋರಾಟಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ನಾಯಕತ್ವ ವಹಿಸಿದ್ದ ಪ್ರಬುದ್ದ ಹಾಗೂ ಮಹಾನ್ ಜನನಾಯಕರಾಗಿ ಗುರುತಿಸಿಕೊಂಡಿದ್ದ ಅವರ ಸಾಹಸಗಾಥೆಗಳು ಈಗಲೂ ಜಾರ್ಖಂಡ್ ರಾಜ್ಯದಲ್ಲಿ ದಂತಕತೆಗಳಾಗಿವೆ. ಅವರ ಆಕಾಂಕ್ಷೆಗಳು, ಸ್ವಾತಂತ್ರ್ಯ, ನ್ಯಾಯ, ಅಸ್ಮಿತೆ ಮತ್ತು ಘನತೆ ನಮ್ಮ ದೇಶದ ಯುವಕರಿಗೆ ಸದಾ ಪ್ರೇರಣೆಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ನಮ್ಮ ಧರ್ಮದ ವಿರುದ್ಧ ಪ್ರಚಾರ ಮಾಡುತ್ತಿದ್ದ ಮಿಷನರಿಗಳ ವಿರುದ್ಧವೂ ಹೋರಾಟ ನಡೆಸಿದ್ದ ಭೂಮಿಯ ಪಿತಾಮಹ ಎಂದೆ ಖ್ಯಾತರಾಗಿದ್ದ ಮುಂಡಾ ಅವರು, ಬ್ರಿಟೀಷ್ ಅಧಿಕಾರಿಗಳು ಮತ್ತು ಸ್ಥಳೀಯ ಜಮೀನುದಾರರು ಬುಡಕಟ್ಟು ಸಮುದಾಯಗಳನ್ನು ಶೋಷಿಸುತ್ತಿದ್ದಾಗ ಅವರ ಭೂಮಿಯನ್ನು ಕಸಿದುಕೊಂಡು ದೌರ್ಜನ್ಯ ಎಸಗುತ್ತಿದ್ದಾಗ ಬಿರ್ಸಾ ಅವರು ಈ ಸಾಮಾಜಿಕ ಮತ್ತು ಆರ್ಥಿಕ ಅನ್ಯಾಯದ ವಿರುದ್ಧ ಸಿಡಿದೆದ್ದು, ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ನಾಯಕತ್ವ ವಹಿಸಿದ್ದರು ಎಂದರು.
Scheduled Castes Welfare Department ಬಿರ್ಸಾ ಅವರ ಅಸಾಧಾರಣ ಬುದ್ದಿಮತ್ಯೆಯಿಂದಾಗಿ ಬುಡಕಟ್ಟು ಜನರು ಯಾವುದೇ ವ್ಯಕ್ತಿಯ ಹಸ್ತಕ್ಷೇಪವಿಲ್ಲದೇ ಭೂಮಿಯನ್ನು ಹೊಂದುವ ಮತುತ ಕೃಷಿ ಮಾಡುವ ಹಕ್ಕನ್ನು ಕೊಡಿಸಿದರು. ಬುಡಕಟ್ಟು ಪದ್ದತಿಗಳು ಮತ್ತು ಸಾಮಾಜಿಕ ಮೌಲ್ಯಗಳ ಮಹತ್ವವನ್ನು ಸಾರಿದ ಮುಂಡಾ ಅವರ ಹೋರಾಟದ ಪರಿ ಮಹಾತ್ಮಗಾಂಧೀಜಿಯವರನ್ನು ನ್ಯಾಯ ಮತ್ತು ಸತ್ಯದ ಅನ್ವೇಷಣೆಯಿಂದ ಮಾರ್ಗದರ್ಶನ ಹೊಂದಿದಂತೆ ಕಾಣುತ್ತಿತ್ತು ಎಂದ ಅವರು, ರೋಗಿಗಳ ಶುಶ್ರೂಶೆ ಮಾಡುವುದು ಅವರಿಗೆ ಒಂದು ಹವ್ಯಾಸವಾಗಿತ್ತು. ರೋಗಿಗಳ ಗುಣಪಡಿಸುವುದರಲ್ಲಿ ಸಂತೃಪ್ತ ಭಾವ ಹೊಂದುತ್ತಿದ್ದರು ಎಂದರು. ಬುಡಕಟ್ಕಕಟು ಸಂಸ್ಕೃತಿ, ಘನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಹೋರಾಡಿದ ಮುಂಡಾ ಅವರು ಬುಡಕಟ್ಟು ಸಮುದಾಯದವರೆಲ್ಲರೂ ಹೆಮ್ಮೆಯ ಸಂಕೇತವಾಗಿದ್ದರು. ಮಾತ್ರವಲ್ಲ ಭಾರತೀಯ ಸ್ವಾತಂತ್ರö್ಯ ಹೋರಾಟದಲ್ಲಿ ಮಹಾನ್ ಜನನಾಯಕರಾಗಿ ಗುರುತಿಸಿಕೊಂಡಿದ್ದರು ಎಂದರು.
ಬುಡಕಟ್ಟು ಜನರಲ್ಲಿ ಸ್ವಾವಲಂಬನೆ, ಸ್ವಯಂ ಆಡಳಿತ ಮತ್ತು ಘನತೆಯ ಪ್ರಜ್ಞೆಯನ್ನು ಜಾಗೃತಗೊಳಿಸಿ ಬಿರ್ಸಾ ಮುಂಡಾ ಈ ಶೋಷಣೆಯ ವಿರುದ್ಧ ಪ್ರಬಲ ಚಳುವಳಿಯನ್ನು ಹುಟ್ಟುಹಾಕಿದರು. ಇದು ಸಮುದಾಯದ ಭವ್ಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದರು.
ರಾಜ್ಯದಲ್ಲಿಯೂ ಇಂತಹ ಶೋಷಿತ ಹಾಗೂ ತಳ ಸಮುದಾಯಗಳಲ್ಲಿ ಸಾಮಾನ್ಯ ಜೀವನ ನಿರ್ವಹಿಸುತ್ತಿರುವ ಎಲ್ಲಾ ಜಾತಿ-ಜನಾಂಗಗಳ ಪ್ರತಿ ವ್ಯಕ್ತಿಯೂ ಶಿಕ್ಷಿತರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಅದಕ್ಕಾಗಿ ಸರ್ಕಾರಗಳ ವತಿಯಿಂದ ಅಗತ್ಯವಿರುವ ಎಲ್ಲಾ ನೆರವನ್ನು ಒದಗಿಸಿಕೊಡಲು ಬದ್ದವಾಗಿರುವುದಾಗಿ ಅವರು ನುಡಿದರು.
ಇದೇ ಸಂದರ್ಭದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಉಪನ್ಯಾಸಕ ಡಾ.ಮೋಹನ್ ಚಂದ್ರಗುತ್ತಿ ಅವರು ಭಗವಾನ್ ಬಿರ್ಸಾಮುಂಡಾ ಅವರು ಜೀವನಾದರ್ಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಅನರ್ಹರ ಬಿಪಿಎಲ್ ಕಾರ್ಡ್ ಮಾತ್ರ ವಾಪಸ್ – ಸಿದ್ಧರಾಮಯ್ಯ

CM Siddaramaiah ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನು ಮಾತ್ರ ವಾಪಾಸ್ ಪಡೆಯಬಹುದು....