Friday, November 15, 2024
Friday, November 15, 2024

McGann Hospital ಅಪರಿಚಿತ ಶವ ಪತ್ತೆ. ದೊಡ್ಡಪೇಟೆ ಪೊಲೀಸ್ ಠಾಣೆಯ ಪ್ರಕಟಣೆ

Date:

McGann Hospital ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆ ಎದುರುಗಡೆ ಗೇಟ್ ಹತ್ತಿರ ಸುಮಾರು 70-75 ವರ್ಷ ವಯಸ್ಸಿನ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದು, ಆತನನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನ. 12ರಂದು ಮೃತಪಟ್ಟಿರುತ್ತಾರೆ. ಈತನ ಹೆಸರು, ವಿಳಾಸ ಹಾಗೂ ವಾರಸ್ಸುದಾರರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ.
ಈತನ ಚಹರೆ 5.6 ಅಡಿ ಉದ್ದ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮುಂದೆಲೆ ಭಾಗ ಬೋಳಾಗಿರುತ್ತದೆ. ಎಡ ಕೆನ್ನೆಯ ಮೇಲೆ ಜೋಳದ ಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಮೈಮೇಲೆ ಕಂದು ಮತ್ತು ಬಿಳಿ ಕಪ್ಪು ಬಣ್ಣದ ಅಡ್ಡಪಟ್ಟಿಗಳಿರುವ ತುಂಬು ತೋಳಿನ ಸ್ವೆಟರ್ ಧರಿಸುತ್ತಾರೆ.
McGann Hospital ಈತನ ವಾರಸ್ಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 /9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga Gayatri Vidyalaya ಪರಿಪೂರ್ಣತೆ ಸಾಧಿಸಲು ಮಕ್ಕಳಿಗೆ ಸಂಸ್ಕಾರ & ಕೌಶಲ್ಯ ಅಗತ್ಯ – ಜಿ‌.ವಿಜಯ ಕುಮಾರ್

Shimoga Gayatri Vidyalaya ಮಕ್ಕಳು ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳಬೇಕಾದರೆ ಸಂಸ್ಕಾರ...

Rotary Shivamogga ರೋಟರಿ ಪೂರ್ವಯುವಶಕ್ತಿ ನವಭಾರತ ನಿರ್ಮಾಣಕ್ಕೆ ಬಹಳ ಪ್ರಮುಖ- ಡಾ.ಪರಮೇಶ್ವರ್ ಡಿ.ಶಿಗ್ಗಾಂವ್

Rotary Shivamogga ರಾಷ್ಟ್ರ ನಿರ್ಮಾಣದಲ್ಲಿ ಯುವ ಶಕ್ತಿಯ ಕೊಡುಗೆ ಅನನ್ಯವಾದುದೆಂದು ರೋಟರಿ...

National Health Campaign ತಜ್ಞವೈದ್ಯರ & ಅರೆ ವೈದ್ಯಕೀಯ ಸಿಬ್ಬಂದಿಗಳ ತಾತ್ಕಾಲಿಕ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ

National Health Campaign ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧೀನದಲ್ಲಿ...

Bahumukhi Shivamogga ನ.16. ‘ಬಹುಮುಖಿ’ಯಿಂದ ನಿರ್ಮಲ ತುಂಗಭದ್ರ ಅಭಿಯಾನದ ಬಗ್ಗೆ ತಜ್ಞರೊಡನೆ ಸಂವಾದ ವ್ಯವಸ್ಥೆ

Bahumukhi Shivamogga ಶಿವಮೊಗ್ಗ ನಗರದ ಬಹುಮುಖಿ ವತಿಯಿಂದ ನಲವತ್ತೆರಡನೇ ಕಾರ್ಯಕ್ರಮವಾಗಿ ನಿರ್ಮಲ...