Chamber of Commerce Shivamogga ಭಾರತೀಯ ಪರಂಪರೆಯ ಚಿಕಿತ್ಸಾ ಪದ್ಧತಿಯಲ್ಲಿ ವಿಶೇಷ ಶಕ್ತಿಯಿದೆ ಎಂದು ವೈದ್ಯ ಧನ್ವಂತರಿ ಡಾ. ಲತಾ ಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ 535ನೇ “ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ”ಯಲ್ಲಿ ಮಾತನಾಡಿ, ಚಿಕಿತ್ಸಾ ಕಾರ್ಯಗಾರದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ಆರೋಗ್ಯದಲ್ಲಿ ಉತ್ತಮ ಪರಿವರ್ತಾತ್ಮಕ ಫಲಿತಾಂಶಗಳು ಕಂಡುಕೊಂಡು ಆರೋಗ್ಯವಂತ ಜೀವನ ಶೈಲಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಸಾರ್ವಜನಿಕರು ಸರಿಯಾದ ಆಹಾರ ಕ್ರಮವನ್ನು ಅನುಸರಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಜೀವನಶೈಲಿಯಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದಾಗಿದೆ. ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
Chamber of Commerce Shivamogga ಭಾರತೀಯ ಪರಂಪರೆಯ ಚಿಕಿತ್ಸಾ ಕ್ರಮಗಳನ್ನು ಮಾರ್ಗದರ್ಶಿಸುವ ಪರಿಪೂರ್ಣ ಚಿಕಿತ್ಸಾ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು. ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅನೇಕರು ಅವರಲ್ಲಿದ್ದ ಮಂಡಿ ನೋವು, ಸಕ್ಕರೆ ಕಾಯಿಲೆ, ಅರ್ಧ ತಲೆನೋವು, ಹೃದಯ ಸಮಸ್ಯೆ, ಸ್ತ್ರೀ ಸಮಸ್ಯೆ ಇನ್ನು 10 ಹಲವು ದೀರ್ಘಕಾಲದ ಸಮಸ್ಯೆಯಿಂದ ಚೇತರಿಕೆ ಕಂಡವರ ಸಂತೋಷ ಇಮ್ಮಡಿಯಾಗಿತ್ತು.
ಡಾ. ಲತಾ ಶೇಖರ್ ಅವರ ತಂದೆ ಕೃಷ್ಣದೇವರಾಯ, ಅಮೃತ್ ನೋನಿ ಸಂಸ್ಥಾಪಕ ಶ್ರೀನಿವಾಸ ಮೂರ್ತಿ, ರಾಮ್ ಮೂರ್ತಿ ಪಾಲ್ಗೊಂಡಿದ್ದರು.