Jagadguru Shri Vidhusekhara Bharati 17 ದಿನಗಳ ಚೆನ್ನೈನ ವಿಜಯ ಯಾತ್ರೆ ಮುಗಿಸಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನ ಮುಂದಿನ ಊರಿಗೆ ಯಾತ್ರೆ ಮುಂದುವರಿಸಿದ್ದಾರೆ.
ಯಾತ್ರೆಯ ಕಡೆಯ ಎರಡು ದಿನವೂ ಹಲವು ಉಪಯುಕ್ತ ಕಾರ್ಯಕ್ರಮಗಳು ನಡೆದವು.ಐದು ವರ್ಷಗಳ ಕೆಳಗೆ ಇಲ್ಲಿನ ಶ್ರೀ ವಿದ್ಯಾತೀರ್ಥ ಫೌಂಡೇಶನ್ನಿಗೆ ಸನ್ನಿಧಾನ ಒಂದು ಜವಾಬ್ದಾರಿ ವಹಿಸಿದ್ದರು. ಶಾಲಾ ಮಟ್ಟದಲ್ಲೇ ಸನಾತನ ಧರ್ಮ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಬೇಕು ಎಂದು ಅದರಂತೆ ವಿವಿದ ಸ್ಪರ್ಧೆ ಸಂಸ್ಥೆ ನಡೆಸುತ್ತಾ ಬಂದಿದೆ.
ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದವರನ್ನು ಶೃಂಗೇರಿಗೇ ಕರೆತಂದು ಗುರುದರ್ಶನ ಮಾಡಿಸಲಾಗುತ್ತದೆ.ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಶಾಲಾ ವಿದ್ಯಾರ್ಥಿಗಳ ಸಮಾವೇಶ ನಡೆಸಿ ಜಗದ್ಗುರುಗಳಿಂದ ಆಶೀರ್ವಾದ ಕೊಡಿಸಲಾಯಿತು.
2500 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಧರ್ಮ ಮತ್ತು ಪರಮಾತ್ಮನ ಕುರಿತು ಈ ವಿದ್ಯಾರ್ಥಿಗಳಿಗೆ ಗುರುಗಳು ಸರಳವಾಗಿ ಉಪನ್ಯಾಸ ನೀಡಿದರು. ಶೃಂಗೇರಿಯ ಸೂತ್ತಲಿನ ವಿದ್ಯಾರ್ಥಿಗಳಿಗೂ ಇಂತದೇ ಕಾರ್ಯಕ್ರಮ ನಡೆಯುತ್ತಿದೆ.ಮೈಸೂರು ಸೇರಿದಂತೆ ಅನೇಕ ಕಡೆ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡುವ ಕಾರ್ಯಕ್ರಮ ಹಲವು ವರ್ಷಗಳಿಂದ ನಡೆಯುತ್ತಿದೆ. ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ 108 ನೇ ವರ್ಷಾಚರಣೆಯ ಸಂದರ್ಭದಲ್ಲಿ ವಿದ್ಯಾತೀರ್ಥ ಫೌಂಡೇಶನ್ನಿಗೆ ಇನ್ನೂ ಮಹತ್ವದ ಜವಾಬ್ದಾರಿ ನೀಡಲಾಗುವುದು ಎಂದು ಶ್ರೀಗಳು ತಿಳಿಸಿ ಅವರುಗಳನ್ನು ಆಶೀರ್ವಾದಿಸಿದರು.
Jagadguru Shri Vidhusekhara Bharati ಮೀನಾಕ್ಷಿ ಕಾಲೇಜಿನಲ್ಲಿ ಜಗದ್ಗುರುಗಳಿಗೆ ಗುರುವಂದನ ಕಾರ್ಯಕ್ರಮ ನಡೆಯಿತು. ಇಲ್ಲಿ 1986 ರಲ್ಲಿ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಶ್ರೀ ಶಾರದಮ್ಮ, ಮಹಾಗಣಪತಿ ಮತ್ತು ಶ್ರೀ ವೆಂಕಟಾಚಲಪತಿ ದೇವರ ಕುಂಬಾಬಿಶೇಕ ನೆರವೇರಿಸಿದ್ದರು. 2012 ರಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನ ಮತ್ತೊಮ್ಮೆ ಕುಂಬಾಬಿಶೇಕ ನೆರವೇರಿಸಿದ್ದರು. ಶ್ರೀ ವಿದ್ಯಾತೀರ್ಥರು ಕುಂಬಾಬಿಶೇಕ ನಡೆಸಿದ 38 ವರ್ಷಗಳ ನಂತರ ಅದೇ ದಿನದಂದು ಸನ್ನಿಧಾನ ಕುಂಬಾಬಿಶೇಕ ನೆರವೇರಿಸಿದರು.
ಈ ವಾಸ್ತವ್ಯದ ವಿವರವನ್ನು ಆಡಳಿತಾಧಿಕಾರಿ ಶ್ರೀ ಮುರುಳಿ ತಮ್ಮ ವರದಿಯಲ್ಲಿ ಗುರುವಂದನಾ ಸಮಾರಂಭದಲ್ಲಿ ತಿಳಿಸಿದರು.ದಿನವೂ ಸಹಸ್ರಾರು ಜನ ಗುರುದರ್ಶನ ಮಾಡಿದರು.407 ವೇದ ಪಂಡಿತರನ್ನು ಪುರಸ್ಕರಿಸಲಾಯಿತು. ವಿವಿದ ಕಾರ್ಯಕ್ರಮ ನೇರ ಪ್ರಸಾರವನ್ನು 16 ಲಕ್ಷ ಭಕ್ತರು ವೀಕ್ಷಿಸಿದರು. ಶ್ರೀಗಳು 40 ಕ್ಕಿಂತ ಹೆಚ್ಚು ಅನುಗ್ರಹ ಭಾಷಣ ಮಾಡಿದರು.ಚಂದ್ರಮೌಳೇಶ್ವರ ಪೂಜೆ ಸೇರಿದಂತೆ 30 ಪೂಜೆ ನೆರವೇರಿಸಿದರು. ಹಲವು ಕುಂಬಾಬಿಶೇಕ, ಸಹಸ್ರ ಚಂಡೀಯಾಗದಂತ ಧಾರ್ಮಿಕ ಕಾರ್ಯಕ್ರಮ ಈ ಸಂದರ್ಭ ನಡೆಯಿತು.ರಾಜ್ಯಪಾಲರುಗಳು,ಮಂತ್ರಿಗಳು,ಉಚ್ಚ ನ್ಯಾಯಾಲಯದ ನ್ಯಾಯಾದೀಶರು,ಅಧಿಕಾರಿಗಳು, ಉದ್ಯಮಿಗಳು,ಶಿಕ್ಷಣ ತಜ್ಞರು,ಮಠಾಧೀಶರುಗಳು, ಹೀಗೆ ಗಣ್ಯರುಗಳನೇಕರು ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಹಲವು ದೇವಸ್ಥಾನಗಳಿಗೆ ಶ್ರೀಗಳು ಬೇಟಿ ನೀಡಿದರು. ಚೆನ್ನೈನಲ್ಲಿ ಶ್ರೀಗಳ ವಾಸ್ತವ್ಯದ ದಿನಗಳು ಶೃಂಗೇರಿಯ ಭಕ್ತರ ಪಾಲಿಗೆ ಅಪೂರ್ವ ಕ್ಷಣಗಳಾಗಿತ್ತು. ಹಲವು ತಲೆಮಾರಿನಿಂದ ಶೃಂಗೇರಿಯ ಗುರುಗಳಲ್ಲಿ ಅಚಲ ಭಕ್ತಿ ಇಟ್ಟು ನಡೆದುಕೊಂಡು ಬಂದ ಭಕ್ತರು ಅದೇ ಶ್ರದ್ಧಾಭಕ್ತಿಯಿಂದ ಗುರುಸೇವೆ ಮಾಡಿ ಕೃತಾರ್ಥರಾದರು. ಶೃಂಗೇರಿಯ ನೂತನ ಆಡಳಿತಾಧಿಕಾರಿ ಶ್ರೀ ಮುರಳಿ ಇನ್ನೂ ಹೊಸಬರು. ವಿಜಯ ಯಾತ್ರೆ ಹೇಗೆ ಸಂಯೋಜಿಸುತ್ತಾರೋ ಎಂಬ ಶಂಕೆಗೆ ಆಸ್ಪದವೇ ಇಲ್ಲದೇ ಪೀಠದ ಘನತೆ ಎತ್ತಿ ಹಿಡಿಯುವ ರೀತಿ ಕಾರ್ಯಕ್ರಮ ಸಂಯೋಜಿಸಿದರು. ಎಲ್ಲೂ ತಮ್ಮ ಇರುವನ್ನು ತೋರಿಸಿಕೊಳ್ಳದೇ ವಿನೀತರಾಗಿ ನೇಫತ್ಯದಲ್ಲಿದ್ದೇ ಅವರು ಕಾರ್ಯನಿರತರಾಗಿದ್ದು ಭಕ್ತರ ಗಮನ ಸೆಳೆಯಿತು.
ಶೃಂಗೇರಿಯಲ್ಲಿ ಸಹ ಎಂದಿನ ಚಟುವಟಿಕೆ ಯಥಾ ನಡೆಯುತ್ತಿದೆ. ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನ ಶೃಂಗೇರಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಶಿಷ್ಯರ ಅನುಪಸ್ಥಿತಿಯಲ್ಲಿ ಪಾಲ್ಗೊಂಡು ಆಶೀರ್ವಾದಿಸುತ್ತಿದ್ದಾರೆ. ಈಗ ನಡೆಯುತ್ತಿರುವ ತುಂಗಾರತಿ ಎಂದಿನ ವೈಭವದಿಂದ ನಡೆಯುತ್ತಿದೆ.ಅದೇ ಶೃಂಗೇರಿಯ ವಿಶೇಷ.