Mathura Paradise Hotel ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ನನ್ನ ಕನಸಿನ ಶಿವಮೊಗ್ಗ ಸಂಸ್ಥೆಯ ಅಂಗ ಸಂಸ್ಥೆಯಾದ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ ಭಾನುವಾರ ಅಸ್ತಿತ್ವಕ್ಕೆ ಬಂದಿದೆ.
ಪಟ್ಟಣದ ಮಥುರ ಪ್ಯಾರಡೈಸ್ ಹೋಟೆಲ್ ಸಭಾಂಗಣದಲ್ಲಿ ನಡೆದ ಪ್ರಥಮ ಸಭೆಯಲ್ಲಿ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು
ವೇದಿಕೆಯ ನೂತನ ಅಧ್ಯಕ್ಷರಾಗಿ ಇತಿಹಾಸ ಸಂಶೋಧಕ ಡಾ. ಎಸ್. ಜಿ. ಸಾಮಕ್, ಉಪಾಧ್ಯಕ್ಷರಾಗಿ ಡಾ. ಜಿ.ವಿ.ಕಲ್ಲಾಪುರ್, ಕಾರ್ಯದರ್ಶಿಯಾಗಿ ದಿಲೀಪ್ ನಾಡಿಗ್, ಖಜಾಂಚಿಯಾಗಿ ಶ್ರೀಕಂಠ ಹೆಚ್.ಆರ್, ನಿರ್ದೇಶಕರಾಗಿ ಡಾ. ಕೆ.ಪಿ. ಸುನೀಲ್, ನಗರ ಸುಧೀಂದ್ರ ಭಂಡಾರ್ಕರ್, ರಮೇಶ್ ಹಿರೇಜಂಬೂರು, ನಾಗರಾಜ್ ಎಮ್.ಪಿ. ಕಲ್ಯಾಣ್ ಕುಮಾರ್ ಆಯ್ಕೆ ಆಗಿದ್ದಾರೆ. ಇತಿಹಾಸ ಆಸಕ್ತರು ಪ್ರತಿಷ್ಟಾನದ ಸದಸ್ಯತ್ವಕ್ಕಾಗಿ ವೇದಿಕೆಯ ಕಾರ್ಯದರ್ಶಿ ಹಾಗೂ ನಿರ್ದೇಶಕರನ್ನು ಸಂಪರ್ಕಿಸ ಬಹುದು. ಸದಸ್ಯತ್ವ ಶುಲ್ಕ
ವಾರ್ಷಿಕ ರೂ 100 ಹಾಗು
ಆಜೀವ ಸದಸ್ಯತ್ವಕ್ಕಾಗಿ ಶುಲ್ಕ ರೂ ಒಂದು ಸಾವಿರ ರೂಪಾಯಿ ನಿಗದಿ ಪಡಿಸಲಾಗಿದೆ.
Mathura Paradise Hotel ಆಸಕ್ತರು ಸದಸ್ಯತ್ವಕ್ಕಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ವೇದಿಕೆಯ ಕಾರ್ಯದರ್ಶಿ ದಿಲೀಪ್ ನಾಡಿಗ್ ಕೋರಿದ್ದಾರೆ.
9448438038
6361124316
6364211088
9483016851
8088685745