S.N.Chennabasappa ತುಂಗಾಭದ್ರ ನದಿಗಳು ಸಾಮ್ರಾಜ್ಯಗಳ ಉಗಮ ಮತ್ತು ಪತನಕ್ಕೆ ಸಾಕ್ಷಿಯಾಗಿರುವ ಐತಿಹಾಸಿಕ ಪ್ರಾಮುಖ್ಯತೆಯ ನದಿಗಳು. ಮಲೆನಾಡಿನ ಹಾಗೂ ಬಯಲು ಸೀಮೆಯ 5 ಜಿಲ್ಲೆಗಳಲ್ಲಿ ರೈತರೂ ಸೇರಿದಂತೆ ಸುಮಾರು ಒಂದು ಕೋಟಿ ನಾಗರಿಕರ ಜೀವ ನದಿಗಳಾಗಿ ಪರಿಗಣಿಸಲ್ಪಟ್ಟಿದೆ. ತುಂಗಾ-ಭದ್ರಾ ನದಿಗಳ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಹಾಗೂ ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ಕೊಪ್ಪಳ ಜಿಲ್ಲೆಯ ಕಿಷ್ಕಿಂದೆಯವೆರೆಗೂ ಹಮ್ಮಿಕೊಂಡಿರುವ ನಿರ್ಮಲ ತುಂಗಾ ಭದ್ರಾ ಅಭಿಯಾನ ಪಾದಯಾತ್ರೆಯು ಶಿವಮೊಗ್ಗ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ “ಬೃಹತ್ ಯುವ ಜಾಗೃತಿ ಕಾರ್ಯಕ್ರಮ”ದಲ್ಲಿ ಯುವ ಪೀಳಿಗೆಯೊಂದಿಗೆ ಪಾಲ್ಗೊಂಡು ಸ್ವಚ್ಛತೆ, ನೈರ್ಮಲ್ಯತೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಮ್ಮ ನದಿಗಳ ಪ್ರಾಮುಖ್ಯತೆಯ ಕುರಿತು ಅಭಿಪ್ರಾಯ ಶಾಸಕ ಚನ್ನಬಸಪ್ಪ ನುಡಿದರು.
ನಂತರ ನಡೆದ ಬೃಹತ್ ಜಾಥಾದಲ್ಲಿ ಕಾಲೇಜು ಮಕ್ಕಳೊಂದಿಗೆ ಹೆಜ್ಜೆ ಹಾಕುವ ಮೂಲಕ ಈ ಬೃಹತ್ ಪಾದಯಾತ್ರೆ ಗೆ ಕೈಜೋಡಿಸಲಾಯಿತು.
S.N.Chennabasappa ಶ್ರೀಕ್ಷೇತ್ರ ಶೃಂಗೇರಿ ಬಳಿಯ ಗಂಗಡಿಕಲ್ಲು ಪ್ರದೇಶದಲ್ಲಿ ಹುಟ್ಟುವ ತುಂಗಾ ಮತ್ತು ಭದ್ರಾ ನದಿಗಳು ಶ್ರೀಕ್ಷೇತ್ರ ಕೂಡಲಿಯಲ್ಲಿ ಸಂಗಮವಾಗಿ ತುಂಗಾಭದ್ರಾ ನದಿಯಾಗಿ ಒಟ್ಟು ಸುಮಾರು 400 ಕಿ.ಮೀ. ಉದ್ದದಷ್ಟು ವಿಸ್ತಾರಗೊಂಡಿದೆ. ಪವಿತ್ರ ಜಲವನ್ನು ಸಂರಕ್ಷಿಸಿ ಮಲಿನ ಮುಕ್ತ ನದಿಯನ್ನಾಗಿ ಮಾಡುವ ಮೂಲಕ ಭವಿಷ್ಯದ ದಿನಗಳನ್ನು ರಕ್ಷಿಸುವುದು ಅಭಿಯಾನದ ಮೂಲ ಉದ್ದೇಶವಾಗಿದೆ.
ಈ ಮಹಾನ್ ಕಾರ್ಯವು ಯಶಸ್ವಿಯಾಗಲು ಶ್ರಮಿಸಿದ ಶಿವಮೊಗ್ಗದ ಅನೇಕ ಸಂಘ- ಸಂಸ್ಥೆಗಳಿಗೆ ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬರಿಗೂ ಆತ್ಮೀಯವಾಗಿ ಧನ್ಯವಾದಿಸುತ್ತ, ಇದು ಕೇವಲ ಆರಂಭ ಮಾತ್ರ. ತುಂಗಾ-ಭದ್ರೆಯನ್ನು ಪ್ರತಿ ದಿನವೂ ಸಂರಕ್ಷಿಸುವ ಮೂಲಕ, ನಾವು ನಮ್ಮ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುತ್ತಾ ಸಾಗೋಣ ಎಂದು ಶಾಸಕ ಚೆನ್ನಿ ಕರೆಕೊಟ್ಟಿದ್ದಾರೆ.