B.Y.Raghavendra ದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಹಾಗೂ ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ “ಶೃಂಗೇರಿಯಿಂದ-ಕಿಷ್ಕಿಂದೆವರೆಗೆ” ನಡೆಯುತ್ತಿರುವ “ನಿರ್ಮಲ ತುಂಗಾ-ಭದ್ರಾ ಅಭಿಯಾನ – ಬೃಹತ್ ಜಲ ಜಾಗೃತಿ, ಬೃಹತ್ ಜನ ಜಾಗೃತಿ” ಅಭಿಯಾನದ ಪಾದಯಾತ್ರೆ ನಗರಕ್ಕೆ ಆಗಮಿಸಿದ್ದು ಇದರ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಮಲೆನಾಡ ಜೀವನದಿಯನ್ನು ಉಳಿಸುವ ಪ್ರಯುಕ್ತ ಅದರ ಸಾಧ್ಯ ಸಾಧ್ಯತೆಗಳನ್ನು ವಿಮರ್ಶಿಸಲು ಇಂದು ಆಯೋಜಿಸಿದ್ದ “ಪ್ರಬುದ್ಧರ ಸಭೆ” ಯಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಳ್ಳಲಾಯಿತು.
ತುಂಗಾ-ಭದ್ರಾ ನದಿಯು ನಮ್ಮ ಮಲೆನಾಡಿನ ಜೀವನದಿಯಾಗಿದೆ. ದೈವದತ್ತವಾಗಿ ನಮಗೆ ದೊರಕಿರುವ ಎರಡು ಪ್ರಮುಖ ನದಿಗಳಾಗಿದೆ. ಆಧುನೀಕರಣ ಮತ್ತು ಕೈಗಾರಿಕರಣದಿಂದ ನದಿಯ ಪಾವಿತ್ರತೆ ಹದಗೆಡುತ್ತಿದೆ. ಮನುಷ್ಯನ ತಪ್ಪಿನಿಂದಾಗಿ ನದಿಯು ಮಲಿನಗೊಳ್ಳುತ್ತಿದೆ. ಪವಿತ್ರ ಜಲವನ್ನು ಸಂರಕ್ಷಿಸಿ ಮಲಿನ ಮುಕ್ತ ನದಿಯನ್ನಾಗಿ ಮಾಡುವುದು ಈ ಮೂಲಕ ಭವಿಷ್ಯದ ಉತ್ತಮ ದಿನಗಳನ್ನು ರಕ್ಷಿಸುವುದು ಅಭಿಯಾನದ ಮೂಲ ಉದ್ದೇಶವಾಗಿದೆ.
B.Y.Raghavendra ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಚನ್ನಬಸಪ್ಪ ಅವರು, ಗಣ್ಯರಾದ ಪ್ರೊ. ಕುಮಾರಸ್ವಾಮಿ ಅವರು, ಶ್ರೀ ಗೋಪಿನಾಥ ಅವರು, ಶ್ರೀ ಗಿರೀಶ್ ಪಟೇಲ್ ಅವರು, ಡಾ. ಶ್ರೀಧರ್ ಅವರು ಸೇರಿದಂತೆ ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.