Rotary East English Medium School ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆ, ರಾಜೇಂದ್ರನಗರ ಶಿವಮೊಗ್ಗ ಮತ್ತು ರವೀಂದ್ರನಗರ ಕ್ಲಸ್ಟರ್‌ನ ಸಂಯೋಗದಲ್ಲಿ ಏರ್ಪಡಿಸಲಾಗಿದ್ದ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಮಾರಂಭದ ಉದ್ಘಾಟನೆ ಸಮಾರಂಭದಲ್ಲಿ ಶ್ರೀಮತಿ ಶಶಿರೇಖಾ ಇವರು ಮಾತನಾಡುತ್ತ, ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ & ಕಲೋತ್ಸವವು ವಿದ್ಯಾರ್ಥಿಗಳಲ್ಲಿ ಸೂಪ್ತವಾಗಿರುವ ಪ್ರತಿಭೆಯನ್ನು ಅನಾವರಣಗೊಳ್ಳಲು ಅತ್ಯುತ್ತಮ ವೇದಿಕೆಯಾಗಿರುತ್ತದೆ. ಯಾವ ವಿದ್ಯಾರ್ಥಿಗಳಲ್ಲಿ ಯಾವ ಪ್ರತಿಭೆ ಅಡಗಿದೆ ಎಂಬುದನ್ನು ಗುರುತಿಸುವಲ್ಲಿ ಈ ಪ್ರತಿಭಾ ಕಾರಂಜಿ & ಕಲೋತ್ಸವ ಸಹಕಾರಿಯಾಗಿರುತ್ತದೆ ಎಂದು, ಈ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳೆಲ್ಲರೂ ತಮ್ಮಲ್ಲಿರುವ ವಿವಿಧ ಪ್ರತಿಭೆಗಳನ್ನು ನಿರ್ಭೀತಿಯಿಂದ ಹೊರ ಹಾಕಿ ಈ ಪ್ರತಿಭಾ ಕಾರಂಜಿಯನ್ನು ಯಶಸ್ವಿಗೊಳಿಸಿ, ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಬೇಕೆಂದು, ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಶುಭ ಹಾರೈಸಿದರು.
ಇದೇ ಸಮಾರಂಭದಲ್ಲಿ ಶ್ರೀ ದಿನೇಶ್, ಅಧ್ಯಕ್ಷರು, ತಾ.ಪ್ರಾ.ಶಾ.ಶಿ.ಸಂಘ, ಶಿವಮೊಗ್ಗ ಇವರು ಮಾತನಾಡುತ್ತಾ ಈ ಪ್ರತಿಭಾ ಕಾರಂಜಿಯಲ್ಲಿ ಸುಮಾರು ೩೦ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಆಯಾ ಶಾಲೆಯ ಶಿಕ್ಷಕ ವೃಂದದವರು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಿದ್ದು, ಈ ಒಂದು ಪ್ರತಿಭಾ ಕಾರಂಜಿಯು ಯಶಸ್ವಿಯಾಗಲೆಂದು ಮತ್ತು ಇಲಾಖೆಯ ವತಿಯಿಂದ ಈ ನಿಟ್ಟಿನಲ್ಲಿ ಎಲ್ಲ ರೀತಿಯ ಮಾರ್ಗದರ್ಶನ & ಸಲಹೆ ಸಹಕಾರವನ್ನು ನೀಡಲಾಗಿದ್ದು, ಈ ವೇದಿಕೆಯನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಪೂರ್ವದ ಅಧ್ಯಕ್ಷರಾದ ರೊ. ಅರುಣ್ ದೀಕ್ಷಿತ್ ಅವರು ಮಾತನಾಡುತ್ತಾ, ಹಲವಾರು ವರ್ಷಗಳ ನಂತರ ನಮ್ಮ ರೋಟರಿ ಶಾಲೆಯಲ್ಲಿ ಈ ಒಂದು ಪ್ರತಿಭಾ ಕಾರಂಜಿ & ಕಲೋತ್ಸವವು ನಡೆಯತ್ತಿರುವುದಕ್ಕೆ ನಮಗೆ ಅತೀವ ಸಂತೋಷವಾಗಿದೆ ಎಂದು ಈ ಒಂದು ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲ ರೀತಿಯ ಸಹಕಾರವನ್ನು ಕ್ಲಬ್ ವತಿಯಿಂದ ನೀಡಲಾಗಿದೆ ಎಂದು ತಿಳಿಸಿದರು.
Rotary East English Medium School ಟ್ರಸ್ಟ್ನ ಕಾರ್ಯದರ್ಶಿ ರೊ. ಎಸ್.ಸಿ. ರಾಮಚಂದ್ರ ಇವರು ಮಾತನಾಡುತ್ತಾ, ಪ್ರತಿಭಾ “ನವನವನವನ್ಮೋದ ಶಾಲಿನಿ” ಅಂದರೆ ಪ್ರತಿಭೆಯ ಮೂಲಕ ಹೊಸ ಹೊಸ ಆವಿಷ್ಕಾರಗಳು ಅನಾವರಣಗೊಳ್ಳುತ್ತವೆ ಎಂದು ಈ ಪ್ರತಿಭೆಯು ಯಾವ ಸಂದರ್ಭದಲ್ಲಿ ಯಾವ ರೀತಿ ಪ್ರಕಟಗೊಳ್ಳುತ್ತದೆ ಎಂಬುದಕ್ಕೆ ಸೂಕ್ತ ವೇದಿಕೆಯ ಅವಶ್ಯಕತೆ ಇರುತ್ತದೆ ಎಂದು ಈ ನಿಟ್ಟಿನಲ್ಲಿ ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆ, ರವೀಂದ್ರನಗರ ಕ್ಲಸ್ಟರ್ ಮಟ್ಟದ ಸಹಯೋಗ & ಶಿಕ್ಷಣ ಇಲಾಖೆಯಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮವು ಅತ್ಯಂತ ಶ್ಲಾಘನೀಯವೆಂದು, ಇಂತಹ ಕಾರ್ಯಕ್ರಮಗಳು ಪುನರಾವರ್ತನೆಯಾದರೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸುಲಭವಾಗುತ್ತದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ರೊ. ಚಂದ್ರಶೇಖರಯ್ಯ ಎಂ., ಇವರು ಮಾತನಾಡುತ್ತ, ನಮ್ಮ ಟ್ರಸ್ಟ್ ಮೂಲಕ ಈ ಒಂದು ಕಾರ್ಯಕ್ರಮವನ್ನು ನಡೆಸಿಕೊಡಬೇಕೆಂದು ಶಿಕ್ಷಣ ಇಲಾಖೆಯವರು ತಿಳಿಸಿದಾಗ ಈ ಒಂದು ಕಾರ್ಯಕ್ರಮದ ಮಹತ್ವವನ್ನು ತಿಳಿದ ತಾವು ಈಗ್ಗೆ ೧೫-೨೦ ದಿನಗಳಿಂದಲೂ ಪೂರ್ವ ತಯಾರಿಯನ್ನು ನಡೆಸಿ, ಈ ಒಂದು ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಅನಾನುಕೂಲಗಳಾಗದಂತಹ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿ ಬಹಳ ಮುಖ್ಯವಾಗಿ ಇಲಾಖೆಯು ನಮ್ಮ ಶಾಲೆಯನ್ನು ಗುರುತಿಸಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಆಯೋಜಿಸಿರುವುದಕ್ಕೆ ಇಲಾಖೆಗೆ & ಸಂಬAಧಿಸಿದ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ, ಸುಮಾರು ೩೦ ವಿವಿಧ ಕಲಾ ಪ್ರಕಾರಗಳಿಗೆ ಸಂಬAಧಿಸಿದAತೆ ಸಂಪೂರ್ಣ ಸಿದ್ಧತೆಯೊಂದಿಗೆ ಹಾಜರಾಗಿರುವ ವಿದ್ಯಾರ್ಥಿಗಳನ್ನು ನೋಡಿದಾಗ ಈ ಮಕ್ಕಳಲ್ಲಿರುವ ಪ್ರತಿಭೆ ಅತ್ಯದ್ಬುತವಾಗಿ ಪ್ರಕಟಗೊಳ್ಳುತ್ತದೆ ಎಂಬ ಭಾವನೆ ತಮ್ಮಲ್ಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾರಂಭಕ್ಕೆ ಮೊದಲು ಪ್ರಾಸ್ತವಿಕವಾಗಿ ಶ್ರೀ ಪ್ರವೀಣ್, ರವೀಂದ್ರನಗರ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ, ಅವರು ಮಾತನಾಡುತ್ತ, ಈ ಒಂದು ಕಾರ್ಯಕ್ರಮದ ಉದ್ದೇಶ & ಮಹತ್ವವನ್ನು ತಿಳಿಸಿದರು. ಸಮಾರಂಭದಲ್ಲಿ ಟ್ರಸ್ಟ್ನ ಉಪಾಧ್ಯಕ್ಷರು ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಖಜಾಂಚಿ ರೊ. ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಶ್ರೀಮತಿ ಶೈಲಶ್ರೀ, ಸ್ರೀ ಸತೀಶ್ ಡಿ.ಬಿ., ಶ್ರೀ ಯುಗಪುರುಷ, ಶ್ರೀ ಸೂರ್ಯನಾರಾಯಣ್ ಆರ್., ಶ್ರೀಮತಿ ಜಯಶೀಲಾ ಬಾಯಿ, ಶ್ರೀ ಮಂಜುನಾಥ್ ಇನ್ನು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಸುಪ್ರಿತಾ, ಇವರು ನಿರೂಪಣೆ ಮಾಡಿದರು. ಎಲ್ಲರನ್ನು ದಾದಾಪಲ್ಲಿ, ಇವರು ಸ್ವಾಗತಿಸಿದ್ದು, ಶ್ರೀಮತಿ ಶೋಭಾ, ಇವರ ವಂದನಾರ್ಪಣೆಯೊAದಿಗೆ ಸಭೆ ಮುಕ್ತಾಯವಾಯಿತು.
Rotary East English Medium School ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಪ್ರತಿಭಾ ಕಾರಂಜಿ,ಮಕ್ಕಳ ಕಲಾಸಕ್ತಿ ಅನಾವರಣಕ್ಕೆ ಸೂಕ್ತ ವೇದಿಕೆ- ಶಶಿರೇಖಾ
Date: