Education Officers Office ಶಿವಮೊಗ್ಗ ಜಿಲ್ಲಾ ಸಮಗ್ರ ಶಿಕ್ಷಣ ಅಭಿಯಾನ ಯೋಜನೆ ಅಡಿ 2024-25 ನೇ ಸಾಲಿನಲ್ಲಿ ಶಿವಮೊಗ್ಗ ತಾಲ್ಲೂಕಿನ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಿವಮೊಗ್ಗ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ನ.14 ರಂದು ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಳಘಟ್ಟ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಪೂರ್ಣದೃಷ್ಟಿ ದೋಷ, ಶ್ರವಣ ದೋಷ, ಲೋಕೋಮೋಟರ್ (ದೈಹಿಕ ಅಂಗವಿಕಲತೆ), ಸೆರೆಬ್ರಲ್ ಪಾಲ್ಸಿ, ಬಹು ಅಂಗಾಂಗ ವಿಕಲತೆ, ದೈಹಿಕ ಅಂಗವಿಕಲತೆವುಳ್ಳ ಮಕ್ಕಳು ಭಾಗವಹಿಸಬಹುದು.
Education Officers Office ಶಿಬಿರಕ್ಕೆ ಹಾಜರಾಗಲು ಅಂಗವಿಕಲ ಗುರುತಿನ ಚೀಟಿ, ಆದಾಯ ಪ್ರಮಾಣ ಪತ್ರ, ಮಗುವಿನ ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಮಗುವಿನ ಪಾಸ್‌ಪೋರ್ಟ್ ಸೈಜಿನ 4 ಭಾವಚಿತ್ರಗಳು ಮಗುವಿನ ಬ್ಯಾಂಕ್ ಪಾಸ್ ಪುಸ್ತಕ, ಮಗುವಿನ ಆಧಾರ್ ಕಾರ್ಡ್ನ್ನು ತರಬೇಕು .
ಈ ಶಿಬಿರದಲ್ಲಿ ಪೂರ್ವ ಪ್ರಾಥಮಿಕದಿಂದ 12 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಸರ್ಕಾರಿ/ಅನುದಾನಿತ ಶಾಲೆಗಳ ವಿಕಲಚೇತನ ಮಕ್ಕಳು(ಈ ಹಿಂದೆ ಸಾಧನ ಸಲಕರಣೆ ಪಡೆದ ಮಕ್ಕಳನ್ನು ಹೊರತುಪಡಿಸಿ) ಇದರ ಸದುಪಯೋಗವನ್ನು ಪಡೆಯಬಹುದೆಂದು ಬಿಇಓ ರಮೇಶ್ ಮತ್ತು ಬಿಆರ್‌ಸಿ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರು ತಿಳಿಸಿದ್ದಾರೆ.