Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತಿನ ಸಂಸ್ಥೆಯಾಗಿದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ ಎಂದು ಜಿಪಂ ಸಿಇಒ ಹೇಮಂತ್ ಹೇಳಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜ ಚೀಟಿ ಬಿಡುಗಡೆಗೊಳಿಸಿ ಮಾತನಾಡಿ, ಸಂಸ್ಥೆಯು ಅನೇಕ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎತ್ತರಕ್ಕೆ ಬೆಳೆಯುತ್ತಿದ್ದು, ಅದರ ಬೆಳವಣಿಗೆಗೆ ನಾವೆಲ್ಲರೂ ಕೈ ಜೋಡಿಸೋಣ, ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವಿನಾಶ್.ಸಿ ಧ್ವಜ ಚೀಟಿ ಬಿಡುಗಡೆ ಮಾಡಿ ಮಕ್ಕಳನ್ನುದ್ದೇಶಿಸಿ ಮಾತನಾಡಿ, ಸಂಸ್ಥಾಪನಾ ದಿನಾಚರಣೆ ಮಹತ್ವವನ್ನು ತಿಳಿಸುತ್ತ ಸ್ಕೌಟ್ಸ್ ಇತಿಹಾಸದ ಬಗ್ಗೆ ವಿವರಿಸಿದರು.
ಭಾರತದಲ್ಲಿ ಸ್ಕೌಟಿಂಗ್ ಗೈಡಿಂಗ್ ಬೆಳೆದು ಬಂದ ದಾರಿ ತಿಳಿಸಿ ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ನ್ಯಾಷನಲ್ ಸ್ಕೌಟ್ ಅಸೋಸಿಯೇಷನ್, ಹಿಂದೂಸ್ತಾನ ಸ್ಕೌಟ್ಸ್ ಅಸೋಸಿಯೇಷನ್, ಗರ್ಲ್ ಗೈಡ್ ಅಸೋಸಿಯೇಷನ್ ಹೀಗೆ ಅನೇಕ ಸಂಘಟನೆಗಳಿದ್ದು, ಇವೆಲ್ಲವನ್ನು ಒಂದುಗೂಡಿ ಒಂದೇ ಸಂಘಟನೆ ಆಗಬೇಕೆಂದು ನಿರ್ಧರಿಸಿ ಪ್ರತಿಫಲವಾಗಿ 1950 ನವೆಂಬರ್ 7 ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು ಎಂದು ತಿಳಿಸಿದರು.
Bharat Scouts and Guides ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಡಿಡಿಪಿಐ ಎಸ್.ಆರ್.ಮಂಜುನಾಥ್ ಅವರು ಇಲಾಖೆ ಕಚೇರಿ ಆವರಣದಲ್ಲಿ ಧ್ವಜ ಚೀಟಿ ಬಿಡುಗಡೆ ಮಾಡಿ ಮಾತನಾಡಿದರು. ಎ.ವಿ.ರಾಜೇಶ್ ಮಾತನಾಡಿದರು. ಜಿಲ್ಲಾ ಆಯುಕ್ತ(ಸ್ಕೌಟ್ಸ್) ಎಸ್.ಜಿ.ಆನಂದ್ ಮತ್ತು ಜಿಲ್ಲಾ ಆಯುಕ್ತ ಕೆ.ರವಿ, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ಸಹ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ವಿಜಯಕುಮಾರ, ಜಿಲ್ಲಾ ಸಹಾಯಕ ಆಯುಕ್ತರು ಮಲ್ಲಿಕಾರ್ಜುನ ಕಾನೂರು, ಕೃಷ್ಣಸ್ವಾಮಿ, ಮೀನಾಕ್ಷಮ್ಮ, ಶಾಂತಮ್ಮ, ದಾಕ್ಷಾಯಿಣಿ ರಾಜಕುಮಾರ್, ನಗರದ ವಿವಿಧ ಶಾಲೆಯ 200 ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಉಪಸ್ಥಿತರಿದ್ದರು.
Bharat Scouts and Guides ಸ್ಕೌಟ್ಸ್ & ಗೈಡ್ಸ್ ಶಿಸ್ತಿನ ಸಂಸ್ಥೆ. ಅದರ ಬೆಳವಣಿಗೆಗೆ ಎಲ್ಲರೂ ಶ್ರಮಿಸೋಣ- ಸಿಇಓ ಹೇಮಂತ್
Date: