Thursday, December 19, 2024
Thursday, December 19, 2024

Klive Special Article ಸಮಾಜ‌ ಪ್ರೀತಿಯ” ಸುಬ್ಬಯ್ಯ ಮಾವನವರು- ಅವಿಸ್ಮರಣೀಯ‌‌ ವ್ಯಕ್ತಿ

Date:

Klive Special Article ನಾನು ಡಾ ಶ್ರೀನಿವಾಸ್ ರವರನ್ನು ಮದುವೆಯಾಗಿ ಬಂದಾಗ ನನ್ನ ಮಾವನವರಿಗೆ ಸುಮಾರು ಐವತ್ತೈದರ ಹರೆಯವಿರಬಹುದು. ನನ್ನ ಮದುವೆಯ ದಿನವೇ ಅವರ ಅಚ್ಚುಕಟ್ಚುತನವನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೆ. ಮಾಡುವ ಕೆಲಸಗಳು ಪರಿಪೂರ್ಣವಾಗಿರಬೇಕು ಎಂಬುದು ಅವರ ಬದುಕಿನ ನಿಯಮವಾಗಿತ್ತು. ದುಡಿಮೆಯೇ ದೇವರು ಎಂಬುದನ್ನು ಅಕ್ಷರಶಃ ಪಾಲಿಸಿದವರು ಅವರು. ಪ್ರತಿ ಬಾರಿ ಊಟಕ್ಕೆ ಕುಳಿತಾಗ ‘ಈ ದಿನದ ಊಟವನ್ನು ನಾನು ಗಳಿಸಿದ್ದೇನೆಯೇ? ಅಷ್ಟು ಕೆಲಸವನ್ನು ನಾನು ಇಂದು ಮಾಡಿದ್ದೇನೆಯೇ’ ಎಂದು ಸ್ವ ವಿಮರ್ಶೆ ಮಾಡಿ ತುತ್ತನ್ನು ಕೈಗೆತ್ತಿಕೊಳ್ಳುವ ಸ್ವಭಾವ ಅವರದ್ದು. ಮನೆಯ ಮೂರೂ ಸೊಸೆಯಂದಿರನ್ನು ಕಡೆಯವರೆಗೂ ಬಹುವಚನ ಪ್ರಯೋಗ ಮಾಡಿಯೇ ಮಾತನಾಡಿಸುತ್ತಿದ್ದುದು ಅವರ ವ್ಯಕ್ತಿತ್ವದ ವಿಶೇಷತೆ.

ಸ್ಮರಣೆ: ಡಾ.ವಿನಯಾ ಶ್ರೀನಿವಾಸ್.

ಹಿರಿಯ ಸಮಾಜ ಸೇವಕ ಮತ್ತು ಸುಬ್ಬಯ್ಯ ವೈದ್ಯಕೀಯ ಕಾಲೇಜು ಸಂಸ್ಥಾಪಕರಾದ ಶ್ರೀಸುಬ್ಬಯ್ಯ ಅವರ ಸೊಸೆ,ಡಾ.ವಿನಯಾ ಶ್ರೀನಿವಾಸ್.
ಪತ್ರಿಕೆಗಳಲ್ಲಿ‌ ವೈದ್ಯಕೀಯ ಲೇಖನ ಪ್ರಕಟಿಸಿ ಜನತೆಗೆ ಆರೋಗ್ಯದ ಬಗ್ಗೆ ಜಾಗೃತಿ‌ ಮೂಡಿಸುತ್ತಿದ್ದಾರೆ.
ಇತ್ತೀಚೆಗಷ್ಟೆ ನಿಧನರಾದ ತಮ್ಮ ಪ್ರೀತಿಯ “ಮಾವ” ನವರಾದ ದಿ.ಸುಬ್ಬಯ್ಯ ಅವರ ಆತ್ಮೀಯ ನೆನಪನ್ನ ಹಂಚಿಕೊಂಡಿದ್ದಾರೆ
.

Klive Special Article ಯಾವುದೇ ಮಹತ್ತರ ಕಾರ್ಯ ಕೈಗೆತ್ತಿಕೊಳ್ಳುವಾಗ ಮುಂದಿನ ನೂರು ವರ್ಷಗಳವರೆಗಿನ ಸಾಧಕ ಬಾಧಕಗಳನ್ನು ಆಲೋಚಿಸಿ ಹೆಜ್ಜೆ ಇಡುವಂತಹ ದೂರದೃಷ್ಟಿ ಅವರದ್ದು. ಯಾರೇ ತಪ್ಪು ದಾರಿ ತುಳಿದರೂ ಖಡಾ ಖಂಡಿತವಾಗಿ ಖಂಡಿಸುತ್ತಿದ್ದ ನಿಷ್ಟುರತೆ ಅವರದ್ದು. ‘ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಏಕೆಂದರೆ ಯಾರೂ ನಮ್ಮಿಂದ ಕಸಿದುಕೊಳ್ಳದ ಆಸ್ತಿಯೆಂದರೆ ವಿದ್ಯೆ ಮಾತ್ರ ಎಂಬ ಕಿವಿಮಾತನ್ನು ಮನೆಯಲ್ಲಿ ಸದಾ ಹೇಳುತ್ತಿದ್ದರು. ತಮ್ಮಲ್ಲಿ ಸಹಾಯ ಕೇಳಿ ಬರುತ್ತಿದ್ದ ಬಡವರಿಗೆ ಎಂದೂ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಅವರು ವ್ಯಯ ಮಾಡುತ್ತಿದ್ದ ಹಣದ ಲೆಕ್ಕಾಚಾರವನ್ನು ಬರೆದಿಡುತ್ತಿದ್ದ ಪರಿ ನನ್ನನ್ನು ಎಷ್ಟೋ ಬಾರಿ ಚಕಿತಗೊಳಿಸಿದೆ. ಇತ್ತೀಚೆಗೆ ಅವರ ಬೀರುವಿನಲ್ಲಿ ಸಿಕ್ಕ ಪುಸ್ತಕವೊಂದರಲ್ಲಿ ಇಡೀ ಕಟ್ಟಡವೊಂದಕ್ಕೆ ಖರ್ಚು ಮಾಡಿ ಬರೆದಿಟ್ಟ ವಿವರ ಅವರ ಆರ್ಥಿಕ ಶಿಸ್ತು ಹಾಗೂ ಕಾರ್ಯತತ್ಪರತೆಯನ್ನು ಎತ್ತಿ ತೋರುತ್ತದೆ. ಸರಳತೆ ಮತ್ತು ಮಿತವ್ಯಯತೆ ಅವರ ವ್ಯಕ್ತಿತ್ವದ ಮತ್ತೊಂದು ಮುಖ. ಸ್ವತಃ ಪದವೀಧರರಲ್ಲದಿದ್ದರೂ ಒಬ್ಬ ವೈದ್ಯನಿಗಿಂತಲೂ ಹೆಚ್ಚಾಗಿ ಆಸ್ಪತ್ರೆಯೊಂದರ ಆಡಳಿತವನ್ನು ಪರಿಪೂರ್ಣವಾಗಿ ನಡೆಸುವ ಸಾಮರ್ಥ್ಯ ಅವರದ್ದು. ಯಾವುದೇ ಮಹತ್ತರ ಕಾರ್ಯವನ್ನು ಕೈಗೆತ್ತಿಕೊಂಡಾಗ ಅದು ಮುಗಿಯುವ ತನಕ ವಿಶ್ರಾಂತಿ ಬಯಸದ ರೀತಿ ಅವರದ್ದು. ಅವರ ಈ ವೈಖರಿಯೇ ನಮ್ಮ ಸಂಸ್ಥೆಗಳಿಗೆ ಭದ್ರ ಅಡಿಪಾಯ ಎಂದರೆ ಪ್ರಾಯಶಃ ತಪ್ಪಾಗಲಾರದು. ಅವರು ಒಂದು ಮಹಾನ್ ಶಕ್ತಿಯಂತೆ ನಮ್ಮ ಮುಂದಿನ ತಲೆಮಾರುಗಳಿಗೂ ದಾರಿದೀಪವಾಗಲಿ ಎಂಬದೇ ಈ ಹೊತ್ತಿನ ನಮ್ಮ ಆಶಯ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂಬುದು ಸದ್ಯದ ಪ್ರಾರ್ಥನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akashvani Bhadravati ಸಾರ್ವಜನಿಕ ಸ್ಥಳಗಳಲ್ಲಿ ಪ್ರವಾಸಿತಾಣಗಳ ಚಿತ್ರ ಪ್ರದರ್ಶನ. ಪ್ರವಾಸೋದ್ಯಮಕ್ಕೆ ಬೆಂಬಲ- ಎನ್.ಹೇಮಂತ್

Akashvani Bhadravati ಆಕಾಶವಾಣಿ ಭದ್ರಾವತಿ 60ನೇ ವರ್ಷದ ವಜ್ರ ಮಹೋತ್ಸವ ವರ್ಷಾಚರಣೆ...

Klive Special Article ಕನ್ನಡ – ಒಂದಷ್ಟು ಆತಂಕಗಳು

Klive Special Article ಮತ್ತೊಮ್ಮೆ ಕನ್ನಡದ ನುಡಿ ಜಾತ್ರೆ ಬಂದಿದೆ ....

B.Y.Raghavendra ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್ ನೋಡಿಕೊಳ್ಳುತ್ತದೆ- ಸಂಸದ ರಾಘವೇಂದ್ರ

B.Y.Raghavendra ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಸದ್ಯಕ್ಕೆ ಬಿ...