Basavaraj Bommai On Waqf Land ಮಾನ್ಯ ವಕ್ಪ್ ಸಚಿವರಾದ ಜಮೀರ್ ಅವರು ನಾನು ವಕ್ಪ್ ಬೋರ್ಡ್ ಸಮಾರಂಭದಲ್ಲಿ ಮಾತನಾಡಿರುವ ಹಳೆಯ ವಿಡಿಯೊ ಹರಿಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ.
ನಾನು ಯಾವುದೇ ವಕ್ಪ್ ಬೋರ್ಡ್ ಸಭೆ ಮಾಡಿಲ್ಲ. ವಕ್ಪ್ ಬೋರ್ಡ್ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅನ್ವರ್ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಪ್ ಆಸ್ತಿ ಕಬಳಿಸಿರುವ ಕರ್ನಾಟಕದ ಕಾಂಗ್ರೆಸ್ ನಾಯಕರಿಂದ ವಕ್ಪ್ ಆಸ್ತಿ ವಶಪಡಿಸಿಕೊಳ್ಳಬೇಕೆಂದು ಹೇಳಿರುವುದನ್ನು ತಿರುಚಿದ್ದಾರೆ. ಆ ಸಂದರ್ಭದಲ್ಲಿ ರೈತರ ಜಮೀನಿಗೆ ನೊಟೀಸ್ ಕೊಡುವುದಾಗಲಿ, ಪಹಣಿ ತಿದ್ದುಪಡಿ ಮಾಡುವುದಾಗಲಿ ಯಾವೂದೂ ವಿಷಯ ನಮ್ಮ ಮುಂದೆ ಪ್ರಸ್ತಾಪವಾಗಿರಲಿಲ್ಲ.
ನಾನು ಅಂದು ಹೇಳಿರುವುದು ಅನ್ವರ್ ಮಾನಿಪ್ಪಾಡಿ ಅವರ ಸಮಿತಿ ವರದಿ ನೀಡಿರುವಂತೆ ಕಾಂಗ್ರೆಸ್ ನ್ ಕೆಲವು ದೊಡ್ಡ ನಾಯಕರು ಮೋಸದಿಂದ ಎಷ್ಡೆಷ್ಟು ವಕ್ಪ್ ಆಸ್ತಿ ನುಂಗಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು.
Basavaraj Bommai On Waqf Land ನಾವು ರೈತರಿಗೆ ಯಾವುದೇ ನೊಟಿಸ್ ಕೊಟ್ಟಿಲ್ಲ ರೈತರ ಜಮೀನು ವಶ ಪಡೆದುಕೊಂಡಿಲ್ಲ. ಸಚಿವ ಜಮೀರ್ ಅವರು ರೈತರಿಗೆ ನೋಟಿಸ್ ಕೊಡುವ ಮೊದಲು ಕಾಂಗ್ರೆಸ್ ನಾಯಕರು ಎಲ್ಲೆಲ್ಲಿ ವಕ್ಪ್ ಆಸ್ತಿ ಹಡಪ್ ಮಾಡಿದ್ದಾರೆ ಅದನ್ನು ಕೂಡಲೇ ರಿಕವರಿ ಮಾಡಲಿ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುವಂತೆ ಹೇಳಿರುವುದು ಕಣ್ಣೊರೆಸುವ ತಂತ್ರ. ನೋಟಿಸ್ ವಾಪಸ್ ಪಡೆದು ಚುನಾವಣೆ ಮುಗಿದ ನಂತರ ಮತ್ತೆ ನೋಟೀಸ್ ಕೊಡುವುದಿಲ್ಲ ಅನ್ನುವುದು ಏನು ಗ್ಯಾರೆಂಟಿ. ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ನಿಜವಾಗಲೂ ಕಾಳಜಿ, ಗೌರವ ಇದ್ದರೆ, ರೈತರ ಆಸ್ತಿ ಉಳಿಸಬೇಕೆಂಬ ಮನಸ್ಸಿದ್ದರೆ ಕೂಡಲೆ ವಕ್ಪ್ ಗೆಜೆಟ್ ನೊಟಿಫಿಕೇಶ್ ರದ್ದು ಮಾಡಬೇಕು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಕ್ಸ್ ಖಾತೆಯ ಮೂಲಕ ನಿಜಾಂಶ ತಿಳಿಸಿ ಸ್ಪಷ್ಟೀಕರಣ ನೀಡಿದ್ದಾರೆ.