Thursday, November 7, 2024
Thursday, November 7, 2024

Vagdevi Charitable Trust ಆಸರೆಯ ಬದುಕು ನೀಡುವ ಧ್ಯೇಯದ ವಾಗ್ದೇವಿ ಚಾರಿಟಬಲ್ ಟ್ರಸ್ಸ್

Date:

Vagdevi Charitable Trust ಆರ್ಥಿಕವಾಗಿ ಹಿಂದುಳಿದ ವಿಕಲಚೇತನರು, ಅನಾಥರು, ವೃದ್ಧರು ಮತ್ತು ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮೂಲ ಉದ್ದೇಶದೊಂದಿಗೆ 2015 ರಲ್ಲಿ ವಾಗ್ದೇವಿ ಚಾರಿಟಬಲ್ ಟ್ರಸ್ಟ್ ತೀರ್ಥಹಳ್ಳಿಯಲ್ಲಿ ಆರಂಭವಾಯಿತು. ಅಗತ್ಯವಿರುವವರಿಗೆ ವಸತಿ, ಶಿಕ್ಷಣ, ಆರೋಗ್ಯ, ಆಹಾರ… ಹೀಗೆ ಅವಶ್ಯಕತೆಗೆ ತಕ್ಕಂತೆ ಸಹಾಯ ಕಲ್ಪಿಸಲಾಗುತ್ತಿದೆ.
ಟ್ರಸ್ಟಿನ ಇದುವರೆಗಿನ ಸೇವಾ ಕಾರ್ಯಗಳು
ವಾಗ್ದೇವಿ ವಿದ್ಯಾಧಾರ ಯೋಜನೆ: 15 ವಿಕಲಚೇತನ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 1500 ಸಹಾಯಧನ ನೀಡಲಾಗುತ್ತಿದೆ. 15 ವಿಕಲಚೇತನ ಬಡ ವಿದ್ಯಾರ್ಥಿನಿಯರಿಗೆ ಸುಕನ್ಯಾ ಸಮೃದ್ಧಿ ಯೋಜನೆಗೆ ರೂ.1000 ನೀಡಲಾಗಿದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಇ ಪದವಿ ಅಭ್ಯಾಸ ಮಾಡುತ್ತಿರುವ ಅನಾಥ ವಿದ್ಯಾರ್ಥಿಯೊಬ್ಬನಿಗೆ ಲ್ಯಾಪ್‌ಟಾಪ್‌ ನೀಡಲಾಗಿದೆ. ಜೊತೆಗೆ ಪ್ರತಿ ವರ್ಷ ರೂ.5000 ಸಹಾಯ ಧನ ನೀಡಲಾಗುತ್ತಿದೆ. ಇನ್ನೋರ್ವ ಇಂಜಿನಿಯರಿಂಗ್ ವಿದ್ಯಾರ್ಥಿಗೆ ರೂ. 10000 ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಇಬ್ಬರು ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಶುಲ್ಕವನ್ನು ಭರಿಸಲಾಗುತ್ತಿದೆ. ಕೆಲವು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿಲಾಗಿದೆ. ಅಂಧರ ಕ್ರೀಡಾಕೂಟಕ್ಕೆ ಪ್ರತಿ ವರ್ಷ ರೂ. 5000 ದೇಣಿಗೆ ನೀಡಲಾಗುತ್ತಿದೆ. ಬಡ ವಿದ್ಯಾರ್ಥಿಯೊಬ್ಬನಿಗೆ ಶಾಲಾ ವಾಹನದ ಶುಲ್ಕ ಭರಿಸಲಾಗುತ್ತಿದೆ. ಬಾಲಕನೊಬ್ಬನಿಗೆ ಶಾಲೆಗೆ ಹೋಗಲು ಪ್ರೇರೇಪಣೆ ನೀಡಿ ಸಮವಸ್ತ್ರ ಮತ್ತು ರೈನ್‌ ಕೋಟ್‌ ನೀಡಿದೆ.
ವಾಗ್ದೇವಿ ಆರೋಗ್ಯಧಾರ ಯೋಜನೆ: ಕ್ಯಾನ್ಸರ್ ಪೀಡಿತರು ಹಾಗೂ ಅಪಘಾತದಿಂದ ತೀವ್ರವಾಗಿ ಗಾಯಗೊಂಡವರಿಗೆ ಆರ್ಥಿಕ ನೆರವು ನೀಡಿದೆ. ಈ ಯೋಜನೆಯಡಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಆರು ಕಡು ಬಡ ವ್ಯಕ್ತಿಗಳಿಗೆ ಪ್ರತಿ ತಿಂಗಳು ರೂ 1000-3000ವರೆಗೆ ಔಷಧಿ ಖರ್ಚಿಗೆಂದು ನೆರವು ನೀಡಲಾಗುತ್ತಿದೆ. ಅನಾಥ ವೃದ್ಧೆಯೊಬ್ಬರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ರೂ.20000 ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ, ಅನಾರೋಗ್ಯಪೀಡಿತ, ಅನಾಥ ವೃದ್ಧರೊಬ್ಬರಿಗೆ ಆಶ್ರಮದ ಖರ್ಚಿನ ಬಾಬ್ತು ರೂ. 5000 ಪ್ರತಿ ತಿಂಗಳು ಭರಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಯೊಬ್ಬರಿಗೆ ಡಯಾಲಿಸಿಸ್ಗಾಗಿ ಹೋಗಿ ಬರಲು ವಾಹನದ ಖರ್ಚನ್ನು ಭರಿಸಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರಿಗೆ ರೂ. 12000 ಮೌಲ್ಯದ ಸರ್ಜಿಕಲ್ ಮಂಚವೊಂದನ್ನು ನೀಡಿದೆ.
ವಾಗ್ದೇವಿ ಆಶ್ರಯಧಾರ ಯೋಜನೆ: ಆರ್ಥಿಕವಾಗಿ ಹಿಂದುಳಿದ ವಿಕಲಚೇತನ ವ್ಯಕ್ತಿಯೊಬ್ಬರಿಗೆ ವಾಸದ ಮನೆಯೊಂದನ್ನು ಕಟ್ಟಿಸಿ ಕೊಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ವಿಕಲಚೇತನರ ಎರಡು ಕುಟುಂಬಗಳಿಗೆ ಸ್ನಾನ ಗೃಹ ಮತ್ತು ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೋಲಾರ್ ದೀಪಗಳನ್ನು ಕೊಡುಗೆಯಾಗಿ ಕೊಟ್ಟಿದೆ. ಈ ಯೋಜನೆಯಡಿ ಬಡ ವೃದ್ಧರಿಬ್ಬರಿಗೆ ವಾಸದ ಮನೆಯ ಮೇಲ್ಛಾವಣಿಯ ರಿಪೇರಿಯ ಜೊತೆಗೆ ನೆಲಕ್ಕೆ ಟೈಲ್ಸ್ ಹಾಕಿ ವಾಸಿಸಲು ಯೋಗ್ಯವನ್ನಾಗಿಸಿ ಕೊಡಲಾಗಿದೆ. ಅಂಗವಿಕಲ ಮಹಿಳೆಯೋರ್ವರ ಶಿಥಿಲಗೊಂಡಿದ್ದ ಮನೆಯನ್ನು ನವೀಕರಣ ಮಾಡಲಾಗಿದೆ. ಹಾಗೆಯೇ ಇನ್ನೊಂದು ಬಡ ಕುಟುಂಬಕ್ಕೆ ಮನೆಯ ಗೋಡೆಯ ಮೇಲೆ ಬೀಳುತ್ತಿದ್ದ ಮಳೆ ನೀರನ್ನು ತಡೆಯುವ ಉದ್ದೇಶದಿಂದ ಟಾರ್ಪಲಿನ್ ವ್ಯವಸ್ಥೆ ಮಾಡಲಾಗಿದೆ. ಆಕಸ್ಮಿಕ ಅಗ್ನಿ ಅವಘಡದಿಂದ ಮನೆ ಕಳೆದುಕೊಂಡ ಕುಟುಂಬವೊಂದಕ್ಕೆ ರೂ 10000 ಸಹಾಯ ಧನ ನೀಡಲಾಗಿದೆ.
ವಾಗ್ದೇವಿ ವರ್ಷಾಧಾರ ಯೋಜನೆ: ಈ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ 15 ಜನರಿಗೆ ವಾರ್ಷಿಕ ರೂ.6000 ಹಾಗೂ ಮಹಿಳಾ ಅಬಲಾಶ್ರಮವೊಂದಕ್ಕೆ ವಾರ್ಷಿಕ ರೂ.10000 ಸಹಾಯಧನ ನೀಡಲಾಗುತ್ತಿದೆ
Vagdevi Charitable Trust ವಾಗ್ದೇವಿ ಅನ್ನಾಧಾರ ಯೋಜನೆ: ಈ ಯೋಜನೆಯಡಿಯಲ್ಲಿ ಐದು ಕುಟುಂಬಗಳಿಗೆ ಪ್ರತಿ ತಿಂಗಳು ದಿನಸಿ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ವಿಕಲಚೇತನ ವ್ಯಕ್ತಿಯೊಬ್ಬರಿಗೆ ವ್ಯಾಪಾರದ ಉದ್ದೇಶಕ್ಕೆ ಮೇಜು, ಕುರ್ಚಿ ಮತ್ತು ಮೂಲ ಬಂಡವಾಳ ಕೊಟ್ಟು ಕಾಲುಗಳಿಲ್ಲದ ಆತ ಆತ್ಮವಿಶ್ವಾಸದಿಂದ ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಳ್ಳಲು ನೆರವು ನೀಡಲಾಗಿದೆ.
ಹೀಗೆ ಅವಶ್ಯಕತೆಯುಳ್ಳ ಆರ್ಥಿಕವಾಗಿ ಹಿಂದುಳಿದ ವಿಕಲಚೇತನರು, ವೃದ್ಧರು ಮತ್ತು ಅನಾಥರಿಗೆ ಅನೇಕ ರೀತಿಯಲ್ಲಿ ನೆರವು ನೀಡುತ್ತಾ, ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾ, ಸ್ವತಂತ್ರ ಜೀವನಕ್ಕೆ ಪೂರಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯೋನ್ಮುಖವಾಗಿದೆ. ಟ್ರಸ್ಟ್ ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಕಾರ್ಯನಿರ್ವಹಿಸುತ್ತಿದ್ದು ಟ್ರಸ್ಟ್ಗೆ ನೀಡುವ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80 ಜಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ. ವಾಗ್ದೇವಿ ಚಾರಿಟಬಲ್‌ ಟ್ರಸ್ಟ್‌(ರಿ) ತೀರ್ಥಹಳ್ಳಿ ಸಂಪರ್ಕ ಸಂಖ್ಯೆ: 9448745665

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddhramaiah ಮೂಡಾ ಬಗ್ಗೆ ಲೋಕಾಯುಕ್ತ ವಿಚಾರಣೆಯಲ್ಲಿ ಸೀಎಂ ಸಿದ್ಧರಾಮಯ್ಯ ಹೇಳಿದ್ದೇನು?

CM Siddhramaiah ಮುಡಾ ಪ್ರಕರಣ ಸಂಬಂಧ ಇಂದು( ಬುಧವಾರ) ಲೋಕಾಯುಕ್ತ...

Dnaneshwari Goshala ಗೋಪೂಜೆಯಿಂದ ಮನಸ್ಸಿಗೆ ಶಾಂತಿ & ನೆಮ್ಮದಿ- ಚಂದ್ರಹಾಸ.ಪಿ‌.ರಾಯ್ಕರ್

Dnaneshwari Goshala ಗೋವಿನ ಪೂಜೆ ಮಾಡುವುದರಿಂದ ಕೋಟ್ಯಾಂತರ ದೇವರ ಪೂಜಿಸಿದ ಪುಣ್ಯ...

Election Commission ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಮತದಾರರ ಪಟ್ಟಿ ಪ್ರಕಟಣೆ

Election Commission ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಕ್ಕೆ ಸಂಬAಧಿಸಿದAತೆ...