Rotary Club Shivamogga ಸಾಧಕರನ್ನು ಗೌರವಿಸುವುದು ಸಂಘಸಂಸ್ಥೆಗಳ ಕರ್ತವ್ಯ. ಸಾಧಕರನ್ನು ಸನ್ಮಾನಿಸುವುದರಿಂದ ಇತರರಿಗೂ ಸ್ಪೂರ್ತಿ ದೊರೆಯುತ್ತದೆ ಎಂದು ರೋಟರಿ ಶಿವಮೊಗ್ಗ ಮಲೆನಾಡು ಕ್ಲಬ್ ಅಧ್ಯಕ್ಷ ಮುಸ್ತಾಕ್ ಅಲಿ ಹೇಳಿದರು.
ಶಿವಮೊಗ್ಗದಲ್ಲಿ ನಗರದಲ್ಲಿ ರೋಟರಿ ಶಿವಮೊಗ್ಗ ಮಲೆನಾಡು ಕ್ಲಬ್ ಹಾಗೂ ಭಾವಸಾರ್ ವಿಷನ್ ಇಂಡಿಯಾ ಪ್ರೇರಣ ಸಂಸ್ಥೆ ವತಿಯಿಂದ ಕೇರಂ ವಿಭಾಗದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಕೆ.ಕೆ.ಶಶಿರೇಖಾ ಅವರನ್ನು ಸನ್ಮಾನಿಸಿ ಮಾತನಾಡಿದರು.
ರೋಟರಿ ಸಂಸ್ಥೆಯು ಸಮಾಜಮುಖಿ ಸೇವೆಗಳ ಜತೆಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ. ಇದರಿಂದ ಯುವಜನತೆಗೆ ಸಾಧನೆ ಮಾಡಲು ಪ್ರೇರೆಪಣೆ ದೊರೆಯುತ್ತದೆ. ಸಾಧಕರ ಬಗ್ಗೆ ಯುವಜನತೆ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಡೆದ ರಾಜ್ಯ ಸರ್ಕಾರ ನೌಕರರ ಕ್ರೀಡಾಕೂಟದಲ್ಲಿ ಕೇರಂ ಡಬಲ್ ಹಾಗೂ ಸಿಂಗಲ್ಸ್ ವಿಭಾಗದಲ್ಲಿ ಕೆ.ಕೆ.ಶಶಿರೇಖಾ ಅವರು ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಮಹಿಳಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
Rotary Club Shivamogga 19 ವರ್ಷಗಳ ಗಣಿತ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಶಶಿರೇಖಾ ಅವರು ಕಳೆದ ವರ್ಷ ತೀರ್ಥಹಳ್ಳಿಯ ಇನ್ನರ್‌ವ್ಹೀಲ್ ಕ್ಲಬ್ ನಿಂದ ನೇಷನ್ ಬಿಲ್ಡರ್ ಅವಾರ್ಡ್ ಪಡೆದಿರುತ್ತಾರೆ. ಪ್ರಸ್ತುತ ಶಿವಮೊಗ್ಗದ ಕ್ಷೇತ್ರ ಅಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಭಾವಸಾರ ವಿಷನ್ ಇಂಡಿಯಾ ಪ್ರೇರಣಾ ಸಂಸ್ಥೆ ಅಧ್ಯಕ್ಷೆ ಉಮಾ ವೆಂಕಟೇಶ್, ರೋಟರಿ ಶಿವಮೊಗ್ಗ ಪೂರ್ವ ಮಾಜಿ ಅಧ್ಯಕ್ಷ ಎಂ.ಎನ್.ವೆಂಕಟೇಶ, ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಶಶಿರೇಖಾ ಅವರ ಪತಿ ಸುರೇಶ್ ಉಪಸ್ಥಿತರಿದ್ದರು.
Rotary Club Shivamogga ಸಾಧಕರನ್ನು ಸನ್ಮಾನಿಸುವುದರಿಂದ ಇತರರಿಗೂ ಸ್ಫೂರ್ತಿ ದೊರೆಯುತ್ತದೆ- ಮುಸ್ತಾಕ್ ಆಲಿ
Date: