Sarji Hospital Shivamogga ಶಿವಮೊಗ್ಗ ನಗರದ ಪ್ರತಿಷ್ಠಿತ ಸರ್ಜಿ ಆಸ್ಪತ್ರೆಗಳ ಸಮೂಹವು ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಶಿವಮೊಗ್ಗ ಹಾಗೂ ಮಲೆನಾಡು ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಜೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸೌಲಭ್ಯ ಗಳೊಂದಿಗೆ ನರವೈಜ್ಞಾನಿಕ ಇಂಟರ್ವೆನ್ಸನ್ಸ್ ಚಿಕಿತ್ಸಾ ಸೇವೆಗಳನ್ನು ಸಾರ್ವಜನಿಕರಿಗೆ ನೀಡಲು ಮುಂದಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಸರ್ಜಿ ಅಸ್ಪತ್ರೆಗಳ ಸಮೂಹದ ಛೇರ್ಮನ್ ಡಾ!! ಧನಂಜಯ ಸರ್ಜಿ ಅವರು ಮಾಹಿತಿ ನೀಡಿ, ಭಾರತದಲ್ಲಿ ಪ್ರತಿ ವರ್ಷ 100 ಜನರ ಪೈಕಿ ಒಬ್ಬರಿಗೆ ಸ್ಟೋಕ್ ಆಗುತ್ತಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಕರ್ನಾಟಕದ ಐದಾರು ಜಿಲ್ಲೆಗಳಲ್ಲಿ ಈ ಚಿಕಿತ್ಸಾ ಸೌಲಭ್ಯವಿದ್ದು, ಇದೀಗ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
Sarji Hospital Shivamogga ಮೆದುಳು ಮತ್ತು ಬೆನ್ನುಹುರಿಯಹಲವಾರು ರೋಗಗಳಿಗೆ ಯಾವುದೇ ತೆರೆದ ಶಸ್ತ್ರಚಿಕಿತ್ಸೆ ಇಲ್ಲದೆಯೇ, ರಕ್ತ ನಾಳದ ಮೂಲಕ ಆಂಜಿಯೋಗ್ರಾಮ್ ಮಾದರಿಯಲ್ಲಿ ಆಧುನಿಕ ಚಿಕಿತ್ಸೆ ನೀಡಲಾಗುತ್ತದೆ. ಹೃದಯಾಘಾತ ಅಥವಾ ಹೃದಯದ ರಕ್ತ ನಾಳದ ತೊಂದರೆ ಆದಾಗ ಹೇಗೆ ಓಪನ್ ಹಾರ್ಟ್ ಸರ್ಜರಿ ಇಲ್ಲದೇ ಆಂಜಿಯೋಪ್ಲಾಸ್ಟಿ / ಸ್ಟಂಟಿಂಗ್ ಮಾಡಲಾಗುವುದೋ ಅದೇ ರೀತಿಯಲ್ಲಿ ಮೆದುಳಿನಲ್ಲೂ ಮೆದುಳಿನ ರಕ್ತನಾಳಗಳ ಚಿಕಿತ್ಸೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೆದುಳಿನಲ್ಲಿ ರಕ್ತ ಸ್ರಾವ ಅಥವಾ ರಕ್ತ ಸಂಚಾರ ಕಡಿತವಾಗಿ ಸ್ಟೋಕ್ /ಪಾರ್ಶ್ವವಾಯು ಉಂಟಾದಾಗ ಎಂ.ಆರ್. ಐ / ಸೀ.ಟೀ ನಿಂಗ್ ಅಥವಾ ಆಂಜಿಯೋಗ್ರಾಮ್ ಮಾಡಿ ರಕ್ತನಾಳಗಳಲ್ಲಿನ ದೋಷವನ್ನು ಪತ್ತೆ ಮಾಡಲಾಗುತ್ತದೆ. ರಕ್ತನಾಳದಲ್ಲಿ ದೋಷ ಕಂಡು ಬಂದಲ್ಲಿ ಸಾಮಾನ್ಯವಾಗಿ ಮೆದುಳಿನ ಸರ್ಜರಿ ಮಾಡಬೇಕಾಗಬಹುದು, ಇಂತಹ ತೊಂದರೆಗಳನ್ನು ಸರ್ಜರಿ ಇಲ್ಲದೇ ಅಂಜಿಯೋಪ್ಲಾಸ್ಟಿ ಅಥವಾ ಕಾಯ್ಲಿನ್ ಮಾಡಿ ಗುಣಪಡಿಸಬಹುದಾಗಿದೆ. ಈ ಚಿಕಿತ್ಸಾ ವಿಧಾನವು ಸರ್ಜರಿಗೆ ಹೋಲಿಸಿದರೆ ಬಹಳ ಸುರಕ್ಷಿತವಾದುದು ಹಾಗೂ ಇದರಿಂದ ರೋಗಿಯು ಬೇಗ ಗುಣಮುಖರಾಗುತ್ತಾರೆ ಎಂದರು.
ಮೆದುಳು ಅಥವಾ ಬೆನ್ನುಹುರಿಯಲ್ಲಿನ ಸಣ್ಣ ಸಮಸ್ಯೆಗಳು ಮತ್ತು ಕಷ್ಟಕರ ಸ್ಥಳಗಳನ್ನು ಸಹ ಈ ವಿಧಾನದಿಂದ ಸುಲಭವಾಗಿ ತಲುಪಬಹುದು ಮತ್ತು ಚಿಕಿತ್ಸೆ ನೀಡಬಹುದು. ಅದಲ್ಲದೇ ಮಕ್ಕಳು, ವಯೋವೃದ್ಧರು, ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರು, ಅರಿವಳಿಕೆ/ಅನೆಸ್ಥೆಷ್ಯಾಗೆ ಹಾಗೂ ಸರ್ಜರಿಗೆ ಯೋಗ್ಯವಲ್ಲದವರಲ್ಲೂ ಈ ಚಿಕಿತ್ಸೆ ಮಾಡಬಹುದಾಗಿದೆ ಎಂದು ತಿಳಿಸಿದರು.
Sarji Hospital Shivamogga ಸರ್ಜಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ನರ ವೈಜ್ಞಾನಿಕ ಚಿಕಿತ್ಸಾ ಸೌಲಭ್ಯ- ಡಾ.ಧನಂಜಯ ಸರ್ಜಿ
Date: