Monday, February 2, 2026
Monday, February 2, 2026

Rotary Club Shivamogga ತುಂಗಾ ಕಲೋತ್ಸವ. ಶಿವಮೊಗ್ಗ ಪೂರ್ವ ರೋಟರಿ ಕ್ಲಬ್ ಸದಸ್ಯರಿಗೆ 8 ಪುರಸ್ಕಾರ

Date:

Rotary Club Shivamogga ತೀರ್ಥಹಳ್ಳಿಯ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ವಲಯಮಟ್ಟದ ರೋಟರಿ ಸಾಂಸ್ಕೃತಿಕ ತುಂಗಾ ಕಲೋತ್ಸವ ಸ್ಪರ್ಧೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಸದಸ್ಯರು ಬಹುಮಾನ ವಿಜೇತರಾಗಿದ್ದಾರೆ.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಸದಸ್ಯರು ಎಲ್ಲ 8 ಸ್ಪರ್ಧೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಅಪಾರ ಮೆಚ್ಚುಗೆ ಗಳಿಸಿ ಬಹುಮಾನ ಪಡೆದಿದ್ದಾರೆ. ಸೋಲೊ ಚಿತ್ರಗೀತೆಯಲ್ಲಿ ಸಂಸ್ಥೆಯ ಆಕಾಶ್ ಪ್ರಥಮ ಸ್ಥಾನ, ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ಪಡೆದರು.
ಮಕ್ಕಳ ವಿಭಾಗದಲ್ಲಿ ಸೋಲೊ ನೃತ್ಯ ವಿಭಾಗದಲ್ಲಿ ಕೀರ್ತನಾ, ರೋಟರಿ ಶಿವಮೊಗ್ಗ ಪೂರ್ವ ಸದಸ್ಯರು ಸಮೂಹ ಗಾಯನ ವಿಭಾಗದಲ್ಲಿ ದ್ವಿತೀಯ, ಸಮೂಹ ನೃತ್ಯದಲ್ಲಿ ದ್ವಿತೀಯ ಸ್ಥಾನ ಪಡೆದರು. ಸ್ಕಿಟ್ ವಿಭಾಗದಲ್ಲಿ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ ಮಾಡಿದರು.
Rotary Club Shivamogga ಡಾ. ಅರುಣ್, ರಾಜ್ಯಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದ ರೇಣುಕಪ್ಪ ನಿರ್ದೇಶನದಲ್ಲಿ ರೋಟರಿ ಸದಸ್ಯರು ನಾಟಕ ಪ್ರದರ್ಶಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ರಂಜಿಸಿದರು. ಒಟ್ಟು ನಾಲ್ಕು ಬಹುಮಾನ ಪಡೆದು ಜಿಲ್ಲಾ ಮಟ್ಟದ ಸೋಲೊ ನೃತ್ಯ, ಸೋಲೊ ಚಿತ್ರಗೀತೆ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ರೋಟರಿ ಸಹಾಯಕ ಗವರ್ನರ್ ಪ್ರೊ. ಎಚ್.ಎಂ.ಸುರೇಶ್‌ಕುಮಾರ್, ಜಿಲ್ಲಾ ಸಾಂಸ್ಕೃತಿಕ ಉಪಾಧ್ಯಕ್ಷ ಧಮೇಂದರ್ ಸಿಂಗ್ ಬಂಟಿ, ಜೆ.ರಾಧಾಕೃಷ್ಣ, ಶ್ರೀಕಾಂತ್, ಕೆ.ಪಿ.ಸ್ವಾಮಿ, ಭರತಕುಮಾರ್, ಶಿವಪ್ರಸಾದ್, ಮಾಜಿ ಸಹಾಯಕ ಗವರ್ನರ್ ವಸಂತ್ ಹೋಬಳಿದಾರ್, ಜಿ.ವಿಜಯಕುಮಾರ್, ಡಾ. ಗುಡದಪ್ಪ ಕಸಬಿ, ಮಂಜುನಾಥ ರಾವ್ ಕದಂ, ಕಿಶರ‍್ಕುಮಾರ್, ಸುಮತಿ ಕುಮಾರಸ್ವಾಮಿ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್, ಸಂತೋಷ್, ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಡಾ. ಕೌಸ್ತುಭಾ ಅರುಣ್, ಡಾ. ಧನಂಜಯ, ಬಿಂದು ವಿಜಯಕುಮಾರ್, ನಾಗವೇಣಿ, ಪ್ರತಾಪ್ ಲಕ್ಷö್ಮಣ್, ಅನುಷ್‌ಗೌಡ, ರೋಟರಿ ಶಿವಮೊಗ್ಗ ಪೂರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...