Wednesday, November 6, 2024
Wednesday, November 6, 2024

Kateel Ashok Pai Memorial Institute ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿ ಯುವಜನ ತಮ್ಮ ಜೀವನ ಸಮೃದ್ಧಗೊಳಿಸಬಹುದು – ಶಾಸಕ‌ ಡಿ.ಎಸ್.ಅರುಣ್

Date:

Kateel Ashok Pai Memorial Institute ಶಿವಮೊಗ್ಗದ ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬಿಸಿಎ ವಿಭಾಗದ ಕಂಪ್ಯೂಟರ್ ಪ್ರಯೋಗಾಲಯದ ಉದ್ಘಾಟನೆ ಹಾಗೂ ರೋಟರಿ ಶಿವಮೊಗ್ಗ ಮಿಡ್‌ಟೌನ್ ವತಿಯಿಂದ ದಿನಾಂಕ ಅಕ್ಟೋಬರ್ 30 ರಂದು ವಿದ್ಯಾರ್ಥಿಗಳಿಗೆ ನಡೆಸಿದ ಕೌಶಲ್ಯ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ವಿಧಾನಪರಿಷತ್ ಸದಸ್ಯರು, ಕುವೆಂಪು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರೂ ಆಗಿರುವ ಶ್ರೀಯುತ ಡಿ ಎಸ್ ಅರುಣ್ ರವರು ನೆರವೇರಿಸಿದರು.

ಶಿಕ್ಷಣವು ಅನುಕರಣೆಗಿಂತ ಸ್ವಂತಿಕೆಯನ್ನು ಹಾಗೂ ಸೃಜನಾತ್ಮಕತೆಯನ್ನು ಉದ್ದೀಪನೆಗೊಳಿಸುವಂತಿರಬೇಕು ಎಂದು ಅವರು ಅಭಿಪ್ರಾಯ ಪಟ್ಟರು ಇಂದಿನ ಯುವಕ ಯುವತಿಯರಲ್ಲಿ ತನ್ನ ಬಗ್ಗೆ, ತನ್ನ ಸಮುದಾಯದ ಬಗ್ಗೆ, ತನ್ನ ದೇಶದ ಬಗ್ಗೆ ಕೀಳರಿಮೆ ಬೇಡ, ಬದಲಾಗಿ ಸ್ವಾಭಿಮಾನ ಇರಬೇಕು ಹಾಗೂ ಇಲ್ಲಿಯದೇ ಸಂಪನ್ಮೂಲಗಳನ್ನು ಬಳಸಿಕೊಂಡು ಯುವಜನರು ತಮ್ಮ ಜೀವನವನ್ನು ಸಮೃದ್ಧಿಗೊಳಿಸಬಹುದು ಎಂದು ತಿಳಿಸಿದರು. ತಮ್ಮ ಆಸಕ್ತಿಯ ವಿಷಯಗಳನ್ನು ಓದುವ ಮುಕ್ತ ಅವಕಾಶ ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ದೊರಕುತ್ತಿದೆ. ಅದನ್ನು ಇಂದಿನ ವಿದ್ಯಾರ್ಥಿಗಳು ಧನಾತ್ಮಕವಾಗಿ ಬಳಸಿಕೊಳ್ಳಬೇಕು… ಇಂದಿನ ಉದ್ಯೋಗಗಳಿಗೆ ಬೇಕಾಗುವುದು ಪದವಿ ಪತ್ರಗಳು ಒಂದೇ ಅಲ್ಲ. ಕೌಶಲ್ಯಗಳು ಕೂಡ ಮುಖ್ಯ ಎಂಬುದನ್ನು ಮರೆಯಬೇಡಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಮೂರು ಮುಖ್ಯ ವಿಷಯಗಳನ್ನು ರೂಡಿ ಮಾಡಿಕೊಳ್ಳಿ ..ಅವುಗಳಂದರೆ. ಮೊದಲನೆಯದಾಗಿ ಭಾವನಾತ್ಮಕ ಬುದ್ಧಿವಂತಿಕೆ ಅಥವಾ ಎಮೋಷನಲ್ ಕೋಶಂಟ್, ಎರಡನೆಯದಾಗಿ ಒಳ್ಳೆಯ ಕೆಲಸಗಳನ್ನು ದಿನನಿತ್ಯ ಮಾಡುವ ಅಭ್ಯಾಸ .ಮೂರನೆಯದಾಗಿ ಸಾಮಾಜಿಕ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವುದು ಎಂದು ಅವರು ತಿಳಿಸಿದರು.

Kateel Ashok Pai Memorial Institute ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ರಜನಿ ಪೈ ರವರು ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಶ್ರೀ ಅರುಣ್ ರವರು ತಿಳಿಸಿದರು .ಮತ್ತೋರ್ವ ಮುಖ್ಯ ಅತಿಥಿಗಳಾದ ರೋಟರಿ ಶಿವಮೊಗ್ಗ ಮಿಡ್‌ಟೌನ್ ಅಧ್ಯಕ್ಷರಾದ ಶ್ರೀ ಸುರೇಶ್ ಕುಮಾರ್ ರವರು ಮಾತಾಡುತ್ತಾ ನಮ್ಮೆಲ್ಲರ ಮೆದುಳು ಅಂದಾಜು ೩೨ ಲಕ್ಷಕ್ಕಿಂತಲೂ ಹೆಚ್ಚು ಜಿಬಿಯ ಸಾಮರ್ಥ್ಯವನ್ನು ಹೊಂದಿದೆ .

ಆದುದರಿಂದ ಅಂತಹ ಮೆದುಳಿನ ಸಾಮರ್ಥ್ಯವನ್ನು ಬಳಕೆ ಮಾಡುವ ಕೌಶಲ್ಯವನ್ನು ಕಲಿಯಿರಿ ಎಂದು ತಿಳಿಸಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಶ್ರೀ ರೋ ಸಂತೋಷ್ ರವರು ವಿದ್ಯಾರ್ಥಿಗಳಿಗೆ ಹಲವಾರು ಚಟುವಟಿಕೆಗಳ ಮೂಲಕ ಗ್ರಹಣ ಶಕ್ತಿಯ ಕೌಶಲ್ಯಗಳನ್ನು ,ಆರೋಗ್ಯ ಪೂರ್ಣ ಜೀವನ ಶೈಲಿಯ ರೀತಿಯನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಮಾನಸ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ರಜನಿ ಎ ಪೈ, ಆಡಳಿತ ಅಧಿಕಾರಿಗಳಾದ ಪ್ರೊಫೆಸರ್ ರಾಮಚಂದ್ರ ಬಾಳಿಗ ,ರೋಟರಿ ಶಿವಮೊಗ್ಗ ಮಿಡ್‌ಟೌನ್‌ನ ಕಾರ್ಯದರ್ಶಿ ಶ್ರೀ ಪಾಹಿಂ ,ಉಪನ್ಯಾಸಕರಾದ ಶ್ರೀ ಮಂಜುನಾಥ ಸ್ವಾಮಿ ಶ್ರೀ ಮಂಗೇಶ ಎಸ್ ಪೈ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾಕ್ಟರ್ ಸಂಧ್ಯಾ ಕಾವೇರಿ ಮಾತನಾಡುತ್ತಾ ಶ್ರೀ ಡಿಎಸ್ ಅರುಣ್ ರವರು ಯುವಜನರ ಹಾಗೂ ವಿದ್ಯಾರ್ಥಿಗಳ ಆಸಕ್ತಿ ಹಾಗೂ ಅವಶ್ಯಕತೆಗಳೆರಡನ್ನು ಅರ್ಥೈಸಿಕೊಂಡು ತನ್ನ ಸಮಾಜಸೇವೆಯ ಮುಖ್ಯ ವಿಷಯಗಳಾಗಿ ಕೈಗೆತ್ತಿಕೊಳ್ಳುತ್ತಾರೆ ಅವರು ಯುವಜನರೆಲ್ಲ ಮೆಚ್ಚಿದ ಅಪರೂಪದ ನಾಯಕ ಎಂದು ಹೇಳಿ ಸಂಸ್ಥೆಯ ಪರವಾಗಿ ಅಭಿನಂದಿಸಿದರು .

ರೋಟರಿ ಸಂಸ್ಥೆಯು ಆಯಾ ಕಾಲದ ಸಮಾಜಕ್ಕೆ ಅಗತ್ಯವಿರುವ ಸೇವೆಯನ್ನೇ ಒದಗಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಇಂದಿನ ಕಾಲಕ್ಕೆ ಅತಿ ಅವಶ್ಯಕವಾಗಿ ಬೇಕಾಗಿರುವ ಕೌಶಲ್ಯಗಳ ತರಬೇತಿಯ ಕಾರ್ಯಗಾರ ಅರ್ಥಪೂರ್ಣ ಕಾರ್ಯಕ್ರಮ ಎಂದು ಬಣ್ಣಿಸಿದರು.

ವಿದ್ಯಾರ್ಥಿಗಳಾದ ಸಂಧ್ಯಾ ಕೆಕೆ ನಿರೂಪಿಸಿ ,ಮಮತಾ ಸ್ವಾಗತಿಸಿ ,ಗೌಸ್ ಪೀರ್ ಹಾಗೂ ಹರ್ಷವರ್ಧನ ಅತಿಥಿಗಳನ್ನು ಪರಿಚಯಿಸಿದರು. ತನ್ಮಯಿ ಹಾಗೂ ತಂಡದವರು ಪ್ರಾರ್ಥನೆಯನ್ನು ಹಾಡಿದರು .ಹಾಗೂ ಕಾವ್ಯ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Janapada Academy 2023 ನೇ ವಾರ್ಷಿಕ ಜಾನಪದ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Janapada Academy 30 ಜಿಲ್ಲೆಗಳ 30 ಕಲಾವಿದರಿಗೆ ವಾರ್ಷಿಕ...

Department of Youth Empowerment and Sports ರಾಜ್ಯಮಟ್ಟದ ಯುವಜನೋತ್ಸವಕ್ಕೆ ನ.16 ರಂದು ಆಯ್ಕೆ ಪ್ರಕ್ರಿಯೆ

Department of Youth Empowerment and Sports ರಾಜ್ಯ ಮಟ್ಟದ ಯುವಜನೋತ್ಸವಕ್ಕೆ...

Shimoga District Legal Service Authority ನ.7 ರಂದು ತಂಬಾಕು ಮುಕ್ತ ಯುವ ಅಭಿಯಾನ 2.0

Shimoga District Legal Service Authority ಶಿವಮೊಗ್ಗ ಜಿಲ್ಲಾ ಕಾನೂನು...