Nagashree Begar ಶೃಂಗೇರಿ ಯ ಬಹುಮುಖ ಪ್ರತಿಭೆ ಯ ನಾಗಶ್ರೀ ಬೇಗಾರ್ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮ ದಲ್ಲಿ ” ನೆಚ್ಚಿನ ಸಹೋದರಿ ” ಪ್ರಶಸ್ತಿಗೆ ಪಾತ್ರರಾಗಿ ಮಲೆನಾಡ ಕೀರ್ತಿಯನ್ನು ಮತ್ತೆ ಕಿರುತೆರೆಯಲ್ಲಿ ಬೆಳಗಿದ್ದಾರೆ.
ಬಾಲಪ್ರತಿಭೆ ಯಾಗಿ ರಂಗವೇರಿ ನೃತ್ಯ, ನಾಟಕ, ಯಕ್ಷಗಾನ ಮೊದಲಾದ ಕಲಾ ಪ್ರಕಾರಗಳಲ್ಲಿ ತನ್ನ ಛಾಪು ಮೂಡಿಸಿ, ಎಲ್ಲಾ ವಯೋಮಾನದಲ್ಲೂ ನಿರಂತರ ಸೃಜನಶೀಲತೆ ಕಾಯ್ದುಕೊಂಡ ಕಲಾವಿದೆ ನಾಗಶ್ರೀ ಏಕಪಾತ್ರಾಭಿನಯದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಸತತವಾಗಿ ಬಹುಮಾನ ಗೆದ್ದವರು.
ಶ್ರೀ ಆದಿ ಚುಂಚನಗಿರಿ ಶೃಂಗೇರಿ ಶಾಖಾ ಮಠದಿಂದ ಚುಂಚೋತ್ಸವ ಯುವ ಪ್ರಶಸ್ತಿ , ಕಲ್ಕಟ್ಟೆ ಕನ್ನಡತಿ, ಬಾಳೆಹೊನ್ನೂರಿನ ಅಯ್ಯಪ್ಪ ಸಮಿತಿಯ ಕಲಾ ಪ್ರಶಸ್ತಿ ಪಡೆದಿರುವ ನಾಗಶ್ರೀ ಜಲಪಾತ ಚಲನಚಿತ್ರ ದ ನಾಯಕಿಯಾಗಿ ಜನ ಮನ್ನಣೆ ಪಡೆದವರು.
ಜೀ ಕನ್ನಡ ದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಯ ರತ್ನಾ ಎಂಬ ಸೌಮ್ಯ ಸ್ವಭಾವದ ಶಿಕ್ಷಕಿ ಪಾತ್ರ ದ ಮೂಲಕ ಮನೆಮಾತಾಗಿದ್ದಾರೆ.
ಜೀ ಕನ್ನಡ ಬೆಂಗಳೂರಿನ ನಂದಿ ಗ್ರೌಂಡ್ಸ್ ಲ್ಲಿ ಏರ್ಪಡಿಸಿದ್ದ ವರ್ಣರಂಜಿತ ಕಾರ್ಯಕ್ರಮ ದಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಇವರಿಂದ ನಾಗಶ್ರೀ ಇತರ ಮೂವರು ಸಹೋದರಿ ಯರೊಂದಿಗೆ ಪ್ರಶಸ್ತಿ ಸ್ವೀಕರಿಸಿದರು.
Nagashree Begar ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ನಾಗಶ್ರೀ ತಂಡ ದ ಸಹಕಾರ ದಿಂದ ತನ್ನ ಮೂಲ ವಯಸ್ಸಿಗೆ ಮೀರಿದ ಈ ಗಂಭೀರ ಪಾತ್ರದಲ್ಲಿ ತೊಡಗುವಂತಾಯ್ತು. ಮನೆಯವರ ಪ್ರೋತ್ಸಾಹ ಮತ್ತು ರಂಗಭೂಮಿ ಯ ಭದ್ರ ನೆಲೆ ತನ್ನ ಸಾಧನೆಗೆ ಕಾರಣವಾಗಿದೆ ಎಂದರು.
ಮಲೆನಾಡ ಪ್ರಸಿದ್ಧ ಕಲಾವಿದ ರಮೇಶ್ ಬೇಗಾರ್ ಮತ್ತು ಭಾಗ್ಯಶ್ರೀ ದಂಪತಿಗಳ ಪುತ್ರಿಯಾಗಿರುವ ನಾಗಶ್ರೀ ಶೃಂಗೇರಿ ಯ ಜೇಸಿಸ್ ಸ್ಕೂಲ್ ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಬಿ ಜೀ ಎಸ್ ದರ್ಶಿನಿ ಸಂಸ್ಥೆ ಯಲ್ಲಿ ಪದವಿಪೂರ್ವ ಮತ್ತು ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಪದವಿ ಪಡೆದಿದ್ದಾರೆ. ಭರತ ನಾಟ್ಯ ದಲ್ಲೂ ಪದವಿ ಪಡೆದು ಸಂಗೀತವನ್ನು ವಿದುಷಿ ಸಾವಿತ್ರಿ ಪ್ರಭಾಕರ್, ಯಕ್ಷಗಾನ ವನ್ನು ಅಶ್ವಥ್ ನಾರಾಯಣ ಇವರಿಂದ ಅಭ್ಯಾಸ ಮಾಡಿದ್ದಾರೆ. ಶೃಂಗೇರಿ ಯ ಪ್ರಸಿದ್ಧ ರಂಗಮಿತ್ರ ತಂಡ ಮತ್ತು ಬೆಂಗಳೂರು ಬಣ್ಣದಮನೆ ತಂಡದ ಪ್ರಮುಖ ಕಲಾವಿದೆಯಾಗಿದ್ದಾರೆ.