Saturday, November 23, 2024
Saturday, November 23, 2024

Klive News Special ಅವಧೂತ ಭಾವದ ಅನುಭವ ಯಾವಾಗ ? ಹೇಗೆ? ಚಿಂತನ. ಲೇ:ನಂಜುಂಡ ಪ್ರಸಾದ್ ದಾವಣಗೆರೆ

Date:

Klive News Special ಭಾರತವೆಂದರೆ ಅದು ಕೇವಲ ದೇಶವಲ್ಲ ಅದೆಷ್ಟೋ ಅಮೂಲ್ಯ ರತ್ನಗಳ ರತ್ನಾಕರ. ರಾಜಕೀಯ, ಇತಿಹಾಸ, ತರ್ಕ, ಶಾಸ್ತ್ರ, ವೇದ, ಉಪನಿಷತ್ ಹಾಗೆಯೇ ತಾತ್ತ್ವಿಕ ರಾಷ್ಟ್ರ. ಒಮ್ಮೆ ಭಾರತದ ಹಿರಿಮೆಯನ್ನು ಕಂಡು ದೊಡ್ಡ ತಾತ್ವಿಕರಿದ್ದಾರೆ ಎಂದು ಬಂದ ಪರಕೀಯರೊಬ್ಬರು ಯಾವುದೇ ಅಧ್ಯಾತ್ಮ‌ ಸಾಧಕರನ್ನು ಕಾಣದೇ, “shit..! Every begger is the saint in india” ಎಂದು ನಿರಾಶನಾಗಿ, ಹಿಂತಿರುಗುವಾಗ ಮಹರ್ಷಿ ರಮಣರನ್ನು ಕಂಡು, ಅವರ ಆಧ್ಯಾತ್ಮಿಕ ಸಂಪತ್ತನ್ನು ಕಂಡು ವಿದೇಶದಲ್ಲಿ ಭವ್ಯ ಭಾರತದ ಆಧ್ಯಾತ್ಮಿಕ ಹಿರಿಮೆಯನ್ನು ಸಾರಿದೆ.

ಅವನು‌ ಹಾಗೆ ಹೇಳಿದ್ದರಲ್ಲಿ ಅರ್ಥವಿದೆ. ಏಕೆಂದರೆ ಭಾರತವು  ಆಗ ಆರ್ಥಿಕವಾಗಿ ಬಡರಾಷ್ಟ್ರವಾಗಿತ್ತು. ಬಡತನ ಅಧ್ಯಾತ್ಮದ ತವರು ಎಂಬ ನಾಣ್ಣುಡಿಯಿದೆ. ಅದಕ್ಕೆ ಪೂರಕವಾಗಿ ನಮ್ಮಲ್ಲಿ ಹೆಚ್ಚು ಸಾಧು ಸಂತರು ಕೇವಲ ಕಾಷಾಯಧಾರಿಗಳಾಗಿ, ಕೌಪೀನಧಾರಿಗಳಾಗಿ ಕಂಡರೆ ಇನ್ನೂ ಹಲವರು ಹುಚ್ಚರಂತೆ ಎಲ್ಲರಿಗೆ ಬೈಯ್ಯುತ್ತಾ, ಕೆಲವೊಮ್ಮೆ ಮೌನಿಗಳಾಗಿ, ಅರ್ಥವೇ ಆಗದಂತಹ ಅವಧೂತರು ಕಾಣ ಸಿಗುವುದು ಭಾರತದಲ್ಲಿ ಮಾತ್ರ. ಏಕೆಂದರೆ ಅಲೌಕಿಕ ಸಂಪತ್ತಿನ ಅನಾವರಣವಾಗುವುದು ಇಲ್ಲಿಯೇ…. ಸಹಜವಾಗಿ ಮನುಷ್ಯನಿಗೆ ನಿಜವಾದ ಸಂತೋಷ ಕೊಡುವ ವಸ್ತು ಯಾವುದು ಎಂದರೆ ಹಲವು ಉತ್ತರಗಳು ಬರುತ್ತವೆ.‌ದುಡ್ಡು, ಅಂತಸ್ತು,‌ಅಧಿಕಾರ, ಪದವಿ ಹೀಗೆ ಆದರೆ ಒಂದು ರೀತಿಯಲ್ಲಿ ಇದೆಲ್ಲವೂ ಹಂಗು ಹಾಗೂ ಒಮ್ಮೆ ಇಲ್ಲದಂತಾದಾಗ ದುಃಖ ಸಮುದ್ರದ ಅಲೆಯಂತೆ ಅಪ್ಪಳಿಸಿ ನಮ್ಮನ್ನು ಬೀಳಿಸಿಬಿಡುತ್ತದೆ. ಇದಕ್ಕೆ ಭರತನ ಭ್ರಾತೃತ್ವ, ಪಾಂಡವರ ವನವಾಸ, ಹನುಮನ ಭಕ್ತಿ ಎಲ್ಲವೂ ಒಟ್ಟಿಗೆ ಕಂಡು ದತ್ತ ಅವಧೂತನಿಂದ ಪ್ರಾರಂಭವಾಗಿ, ಸಾವಿರಾರು ಕಂಡರಿಯದ, ಕೇಳರಿಯದ ನಿಗೂಢವಾಸದಲ್ಲಿರುವ ಇಂದಿಗೂ ಸಾವಿರಾರು ವರ್ಷಗಳಿಂದ ಬದುಕಿರುವ ಸಾಧನೆ ಮಾಡುತ್ತಿರುವ ಮುನಿಗಳನ್ನು ನಾವು ಹಿಮಾಲಯದ ತಪ್ಪಲಿನಲ್ಲಿ ಕಾಣಬಹುದು… ಆದರೆ ಅವರನ್ನು ಸಂಧಿಸಲು ನಮ್ಮಿಂದ ಅಸಾಧ್ಯ ಎಂಬ ಮಾತೂ ಕೂಡಾ ಹಲವರಿಂದ ಕೇಳಿದ್ದೇನೆ.

ಈ ಅವಧೂತನೆಂದರೆ ಯಾರು ಎಂದು ನೋಡುತ್ತಿರುವಾಗ ಬ್ರಹ್ಮಾನಂದದಲ್ಲಿ ಯಾವಾಗಲೂ ಜ್ಞಾನಸಿಂಧುವಾಗಿ, ಮಾತನಾಡಿದಲ್ಲಿ ಕೇವಲ ತತ್ತ್ವವಿಚಾರ, ಪ್ರತಿಯೊಬ್ಬರೂ ತಲೆಬಾಗಿ ಅವನಲ್ಲಿ‌ ಜಾಗ್ರತರಾಗುವಂತಹ ಹಾಗೂ ಆಧ್ಯಾತ್ಮಿಕತೆಯೆಲ್ಲ ಪೊಳ್ಳು ಎನ್ನುವವರಿಗೆ ಅರೆಹುಚ್ಚರಂತೆ ಕಾಣುವ, ಉಪನಿಷತ್‌ಗಳಲ್ಲಿ ಬ್ರಹ್ಮ ಎಂದರೇನು ಎಂದು ತಿಳಿಸುವ, ಯಾವಾಗಲೂ ಬಾಲ-ಭಾವದಲ್ಲಿರುವ, ತನ್ನ ಮುಗ್ಧ ನಗೆಯಿಂದ ಜಗತ್ತು ಸೆಳೆಯುತ್ತಾ ತಮ್ಮ ದೇಹದ ಅಸ್ತಿತ್ವ ಹೋದ‌ ಮೇಲೆಯೂ ಪ್ರಭಾವ ಬೀರುವವರು.

ಮೊದಲಿನಿಂದ ನನ್ನ ಅಪ್ಪನೊಡನೆ ಬೆಳೆದ ನಾನು ಆಗಾಗ ಅವರು ತಿಳಿಸುತ್ತಿದ್ದ, ಅವರ ಗುರುಗಳ ಬಗ್ಗೆ ಕೇಳಿದ್ದೆ. ಆಗ ನಾನಿನ್ನೂ ಹತ್ತು-ಹನ್ನೆರಡು ವಯಸಿನವನಾದ್ದರಿಂದ ನನಗೆ ಅದರ ಅರ್ಥವಾಗಿರಲಿಲ್ಲ. ಅವರೊಟ್ಟಿಗೆ ಹಸು ಮೇಯಿಸಲು ಹೋಗುತ್ತಿದ್ದುದು ಕೂಡಾ ಅಧ್ಯಾತ್ಮ ಲೋಕದ ಹಲವಾರು ಅಚ್ಚರಿಗಳನ್ನು ತಿಳಿಯಲೇ ಎಂದರೆ ತಪ್ಪಾಗಲಾರದು. ಹೀಗಿರುವಾಗ ಒಮ್ಮೆ ಅವರು ಅವರ ಸ್ನೇಹಿತರಿಗೆ ಅವಧೂತ ಬಿಷ್ಟಪ್ಪಯ್ಯನವರ ಬಗ್ಗೆ ಮಾತನಾಡಿದ್ದು ಕೇಳಿದೆ.

Klive News Special ಈಗಿನ ರಾಯಲ ಸೀಮೆ ಅಥವಾ ಸೀಮಾಂಧ್ರದ ಗಡಿಯ ಹದಿನಾಲ್ಕು ಹಳ್ಳಿಗಳ ಒಡೆಯರಾಗಿದ್ದ ಅವರು. ಜೀವನ ಶೈಲಿಯಲ್ಲಿ ಮಹಾರಾಜನನ್ನೂ ಮೀರಿಸುವವರು. ಸ್ವಾತಂತ್ರ್ಯ ಪೂರ್ವದಲ್ಲಿ ಅವರಿಗಿದ್ದ ಆಸ್ತಿಗಳನ್ನು ಕೇಳಿದರೆ ಇಂದಿನ ವಿಶ್ವದ ಬಿಲೇನಿಯರ್ ಕೂಡಾ ಅವರ ಸರಿಸಮಾನವಿಲ್ಲ. ಐದು ಸಾವಿರ ಕುರಿಗಳು, ಒಂದು-ಒಂದೂವರೆ ನೂರು ಹಸುಗಳು, ಸುಮಾರು ಮೂರು ಸಾವಿರ‌ ಎಕರೆ ಭೂಮಿಯ ಒಡೆಯರು. ಮೂರು ಅಂತಸ್ತಿನ ಮಾಳಿಗೆ ಮನೆ, ಹತ್ತಾರು ಆಳುಕಾಳು, ಸುಖವಾದ ಸಂಸಾರ. ಅಷ್ಟೇ ದಾನ-ಧರ್ಮ ಕೂಡಾ ಅಲ್ಲಿ ನಡೆಯುತ್ತಿತ್ತು. ಹೀಗೇ ಅವರ ದರ್ಬಾರ ನಡೆಯುತ್ತಿರಲು ಒಂದು ದಿನ ಇದ್ದಕ್ಕಿದ್ದಂತೆ ಅವರ ಕುರಿ ಮತ್ತು ಹಸುಗಳು ಅಷ್ಟೂ ಸತ್ತು ಹೋಗುತ್ತವೆ. ಇದರ ವ್ಯಾಕುಲತೆಯಲ್ಲಿದ್ದಾಗಲೇ ಅವರ ತೋಟ, ಗದ್ದೆಗಳು ಹಾಳಾಗುತ್ತವೆ.  ಅಂಥ ಸಂದರ್ಭದಲ್ಲಿ ಅವರು ತಮ್ಮ ಮನೆಯಲ್ಲಿ ಊಟ ಮುಗಿಸಿ ಚಿಂತಾಕ್ರಾಂತರಾಗಿ ತೂಗುಯ್ಯಾಲೆಯ ಮೇಲೆ ಕುಳಿತಿದ್ದಾಗ, ಅವರ ಪತ್ನಿ ತಾಂಬೂಲವನ್ನು ಅವರಿಗೆ ನೀಡುತ್ತಿದ್ದರು. ಮಧ್ಯಾಹ್ನ 12-12.30 ರ ಸಮಯ. ಮನೆ ಬಾಗಿಲಿಗೆ ಒಬ್ಬ ದಾಸಯ್ಯ ಬರುತ್ತಾನೆ. ಸಾಮಾನ್ಯವಾಗಿ ಅವರು ಇತ್ತೀಚೆಗೆ ಬರುವುದಿಲ್ಲ. ಹಾಗೂ ಎಲ್ಲಿಯೂ ಕಾಣ ಸಿಗುವುದಿಲ್ಲ. ಬಂದ ದಾಸಯ್ಯ ಗೋವಿಂದ ಕೀರ್ತನೆಯನ್ನು ಹಾಡುತ್ತಾನೆ ” ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರದು. ಸಂಚಿತಾರ್ಥದ ಧನವು ಬಾರದು ಮುನ್ನ ಮಾಡಿದ ಕರ್ಮವು- ಗೋವಿಂದ ಹರಿ ಗೋವಿಂದ ಗೋವಿಂದ ನಾರಾಯಣ ” ಎಂದು ಹಾಡಿದ ತಕ್ಷಣ ಬಿಷ್ಟಪ್ಪಯ್ಯನವರು ಎಚ್ಚರಾಗಿ. ಇನ್ನೊಮ್ಮೆ ಹೇಳಲು ದಾಸಯ್ಯ ಹಾಡಿದ ಇದೇ ರೀತಿ ಮೂರು-ನಾಲ್ಕು ಬಾರಿ ಹಾಡಿಸಿ ಪತ್ನಿಗೆ ಹೇಳಿದರು “ಅವನಿಗೆ ಏನಾದರೂ ಕೊಡು” ಐಶ್ವರ್ಯವಂತರಿಗೆ ಬರವೇ…? ಯಥೇಚ್ಚ ಭಿಕ್ಷೆ ನೀಡಿದರು. ಅವನು‌ ಮುಂದೆ ಹೋದ.

ನಂತರ ಇವರು ಒಮ್ಮೆ ” ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರದು ” ಎನ್ನುತ್ತಾ ಮನೆಯನ್ನೂ, ಒಡವೆ ವಸ್ತುಗಳನ್ನೂ ನೋಡಿ ತಲೆಕೊಡವಿ ನಕ್ಕು, ಅವರ‌ ಕೈ-ಕೊರಳಿನಲ್ಲಿದ್ದ ಎಲ್ಲ ವಸ್ತುಗಳನ್ನೂ ಬಿಚ್ಚಿಟ್ಟು, ” ಸಂಚಿತಾರ್ಥದ ಧನವು ಬಾರದು ಮುನ್ನ ಮಾಡಿದ ಕರ್ಮವು” ಎನ್ನುತ್ತಾ ಜೇಬಿನಲ್ಲಿದ್ದ ದುಡ್ಡನ್ನು ಕೆಳಗಿಟ್ಟು ” ಗೋವಿಂದ ಹರಿ ಗೋವಿಂದ ಗೋವಿಂದ ನಾರಾಯಣ ” ಎಂದು ನಾನಸ್ಮರಣೆ ಮಾಡುತ್ತಾ ಹೊರಟು ಹೋದವರು ಮತ್ತೆ ಮನೆಗೆ ಬರಲೇ ಇಲ್ಲ. ದೊಡ್ಡ ಅವಧೂತರಾಗಿ ಹಲವರಿಗೆ ಮನೋಭೀಷ್ಟಗಳನ್ನೀಡೇರಿಸಿದರು.

ಭಾಗವತದಲ್ಲಿ ಉದ್ಧವನಿಗೆ ” ಯಸ್ಯಾನುಗ್ರಹಮಿಚ್ಛಾಮಿ ತಸ್ಯ ಸರ್ವಂ ಹರಾಮ್ಯಮ್ ” ಎಂದು ಕೃಷ್ಣನು ತಿಳಿಸುತ್ತಾನೆ. ಆದ್ದರಿಂದ ಕಷ್ಟಗಳು ಬರುವಾಗ ಭಗವಂತನ ನೆನಪಾಗಬೇಕು, ಅವನಿಗೆ ಹತ್ತಿರವಾಗಬೇಕು ಎಂಬುದು ನಮ್ಮ ಬುದ್ಧಿಗೆ ಗೋಚರವಸಗಬೇಕು. ಅವಧೂತರಲ್ಲಿಯೂ ಹೊಟ್ಟೆಪಾಡಿನವರು ಬಹಳ ಕಾಣಿಸುತ್ತಾರೆ. ಮೋಸ ಹೋಗುವ ಸಾಧ್ಯತೆಯಿರುತ್ತದೆ. ಆದ್ಧರಿಂದ ಅವಧೂತರೆಂದು ನಂಬಿ ಹೋಗುವ ಮೊದಲು ಅವಧೂತರು ಹೇಗಿರುತ್ತಾರೆ ಎಂದು ತಿಳಿದು ನಂತರ ಹೆಜ್ಜೆಯಿಡಬೇಕು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...