Thursday, November 7, 2024
Thursday, November 7, 2024

KWJ Voice ನೂತನ ಪತ್ರಕರ್ತರ ಸಂಘ KWJ Voice ಪದಾಧಿಕಾರಿಗಳ ಆಯ್ಕೆ

Date:

KWJ Voice ಪಧಾದಿಕಾರಿಗಳು:
1)ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಡಿ.ಜಿ.ನಾಗರಾಜ(ರಾಜು),ಸಂಪಾದಕರು, ಹಲೋ ಶಿವಮೊಗ್ಗ ದಿನಪತ್ರಿಕೆ 2)ಉಪಾಧ್ಯಕ್ಷರಾಗಿ ಚಿತ್ರಪ್ಪ ಯರಬಾಳ ವರದಿಗಾರರು ಸುದ್ದಿಸಾರ ದಿನಪತ್ರಿಕೆ ಪ್ರಧಾನ ಕಾರ್ಯದರ್ಶಿಯಾಗಿ 3)ಡಿ.ಪಿ.ಅರವಿಂದ್ ಸಂಪಾದಕರು,ಆಜಾದ್ ಹಿಂದ್ ಪತ್ರಿಕೆ/ F7 ನ್ಯೂಸ್ 4)ಕಾರ್ಯದರ್ಶಿ ಯಾಗಿ ಆರ್.ವಿ.ಕೃಷ್ಣ,ಸಂಪಾದಕರು,
ವಿಜಯ ಸಂಘರ್ಷ ಡಿಜಿಟಲ್ ಮೀಡಿಯಾ 5)ಸಹ ಕಾರ್ಯದರ್ಶಿಯಾಗಿ ಶಿವರಾಜ್ ಬಿ.ಸಿ ಅಗ್ನಿಯುಗ ಪತ್ರಿಕೆ 6)ಸಂಘಟನಾ ಕಾರ್ಯದರ್ಶಿಯಾಗಿ
ಅಣ್ಣಪ್ಪ ಎಂ. ಸಿಟಿ ರೌಂಡ್ಸ್ ಪತ್ರಿಕೆ 7)ಖಜಾಂಚಿಯಾಗಿ ಸತೀಶ್ ಗೌಡ ಕೆ.ಎಂ,ಸಂಪಾದಕರು, ನ್ಯೂ ಡಿಟೆಕ್ಟಿವ್‌ ಪತ್ರಿಕೆ
ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ನೇಮಕ ಮಾಡಲಾಗಿದೆ.

ಕಾರ್ಯಕಾರಿ ಸಮಿತಿಯ ನಿರ್ದೇಶಕರುಗಳು:

1) ಗಣೇಶ್ ಬಿ.ಎಸ್,ಸಂಪಾದಕರು, ಕ್ರಾಂತಿಕಿಡಿ ಪತ್ರಿಕೆ 2)ಭರಧ್ವಾಜ್ ಯು.ಎಸ್.Eedina.com ಡಿಜಿಟಲ್ ಮೀಡಿಯಾ, ಜಿಲ್ಲಾ ವರದಿಗಾರರು 3)ಲಕ್ಷ್ಮಣ್ ಕುಮಾರ್ ಉದಾವತ್,ಸಂಪಾದಕರು, ನಿಮ್ಮ ವರಧಿ ಪತ್ರಿಕೆ 4)ನಂದನ್ ಕುಮಾರ್ ಸಿಂಗ್,ಸಂಪಾದಕರು, ಸಿಂಗ್ ಪತ್ರಿಕೆ 5)ಲೀಯೋಅರೋಜ,ವರದಿಗಾರರು,
ಹಲೋ ಶಿವಮೊಗ್ಗ ದಿನಪತ್ರಿಕೆ 6)B.A.ಸುರೇಶ್,ಸಂಪಾದಕರು, ಮಲೇನಾಡು ಕ್ರೈಮ್ ನ್ಯೂಸ್ ಪತ್ರಿಕೆ
7) ಹೆಚ್.ಎಸ್.ವಿಷ್ಣುಪ್ರಸಾದ್, ಸಂಪಾದಕರು, ಸ್ಟಾರ್ ಆಫ್ ಶಿವಮೊಗ್ಗ ಪತ್ರಿಕೆ
8)ಷಡಾಕ್ಷರಪ್ಪ ಜಿ.ಆರ್, ವಕೀಲರು ಇವರನ್ನು ಸಂಘದ ಕಾನೂನು ಸಲಹೆಗಾರರಾಗಿ ಮತ್ತು ಮಾರ್ಗದರ್ಶಕರಾಗಿ ನೇಮಕ ಮಾಡಲಾಗಿದೆ.

KWJ Voice ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ನೇಮಕ ಮಾಡಲಾಯಿತು.

ಶಿವಮೊಗ್ಗದಲ್ಲಿ ನೂತನ ಪತ್ರಕರ್ತರ ಸಂಘ (KWJVoice) ಅಸ್ತಿತ್ವಕ್ಕೆ: ಸದಸ್ಯತ್ವ ಪಡೆಯಲು ಅರ್ಜಿ ಅಹ್ವಾನ

ಶ್ರೀಯುತ ಬಂಗ್ಲೆ ಮಲ್ಲಿಕಾರ್ಜುನ ರಾಜ್ಯಾದ್ಯಕ್ಷರ ನೇತೃತ್ವದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ, ನೂತನ ಶಿವಮೊಗ್ಗ ಜಿಲ್ಲಾಘಟಕ ಕಾರ್ಯಾಲಯ ಇತ್ತಿಚೆಗೆ ಅಸ್ತಿತ್ವಕ್ಕೆ ಬಂದಿದೆ. ಸಂಘದ ಕಚೇರಿ ಕೂಡ ಶಿವಮೊಗ್ಗದ ದುರ್ಗಿಗುಡಿ,3 ನೇಕ್ರಾಸ್ ಭರಣಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ.

ಶಿವಮೊಗ್ಗ ನಗರ ಮತ್ತು ಜಿಲ್ಲೆಯ ನೂರಾರು ಸಮಾನ ಮನಸ್ಕ ಪತ್ರಕರ್ತರು ಸೇರಿ ಯಾವುದೇ
ತಾರಮ್ಯವಿಲ್ಲದೇ,ಬೇದಭಾವ ಇಲ್ಲದೇ,ಮಾಧ್ಯಮ ಪಟ್ಟಿ ಮತ್ತು ಮಾಧ್ಯಮ ಪಟ್ಟಿ ಹೊರತುಪಡಿಸಿದ ಎಲ್ಲಾ ಪತ್ರಕರ್ತರು ಹಾಗೂ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ, ಬ್ಲಾಗ್,ವೆಬ್ ಸೈಟ್ ಪತ್ರಕರ್ತರು ಸೇರಿ ಕಟ್ಟಿದ ಸಂಘಟನೆ ಇದಾಗಿದೆ. ಈ ಸಂಘಟನೆಯ ಉದ್ದೇಶ ಯಾವ ಸಂಘಟನೆಯ ವಿರುದ್ದವು ಅಲ್ಲ.

ದಿನಪತ್ರಿಕೆ,ವಾರಪತ್ರಿಕೆ,fortnightly,
ಮಾಸಿಕೆ ಪತ್ರಿಕೆಯ ಪತ್ರಕರ್ತರು ನೂತನ ಪತ್ರಕರ್ತರ ಸಂಘಟನೆಯಲ್ಲಿ ಸೇರ ಬಯಸುವವರು ಸಂಘದ ಕಚೇರಿಯಲ್ಲಿ ಅರ್ಜಿ ಫಾರಂ ಪಡೆದು ಸೂಕ್ತವಾದ ದಾಖಲಾತಿ ಯೊಂಧಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಬಹುದು.

ರಾಜ್ಯಾದ್ಯಕ್ಷರ ಆದೇಶದ ಮೇರೆಗೆ ಶಿವಮೊಗ್ಗ ಜಿಲ್ಲಾ ಘಟಕದ ಪಧಾದಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸರ್ವಾನುಮತದಿಂದ ಎಲ್ಲರ ಒಪ್ಪಿಗೆ ಪಡೆದು ಸರ್ವಾನುಮತದಿಂದ ನೇಮಕ ಮಾಡಲಾಗಿದೆ.

ಇದು ಸರ್ಕಾರದಿಂದ ಮಾನ್ಯತೆ ಪಡೆದ ಸಂಘಟನೆಯಾಗಿದೆ. ರಾಜ್ಯಾದ್ಯಂತ ಈಗಾಗಲೇ 3500 ಸದಸ್ಯರು ಇದ್ದಾರೆ. ಸುಮಾರು ಜಿಲ್ಲೆಗಳಲ್ಲಿ ಸಂಘದ ಜಿಲ್ಲಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ, ನೂತನ ಶಿವಮೊಗ್ಗ ಜಿಲ್ಲಾಘಟಕದಲ್ಲಿ ಸಮಾನ ಮನಸ್ಕ ಪ್ರಾಮಾಣಿಕ ಪತ್ರಕರ್ತರು, ನೈಜ ಪತ್ರಕರ್ತರನ್ನು ಈ ಸಂಘಟನೆಯಲ್ಲಿ ತರುವ ಪ್ರಯತ್ನ ನಡೆದಿದೆ.

ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿರುವ ಪತ್ರಿಕೆಯ ಸಂಪಾದಕರು ವರದಿಗಾರರು ಹಾಗೂ ಡಿಜಿಟಲ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾದ ಪತ್ರಕರ್ತರನ್ನು ಈ ಸಂಘಟನೆಗೆ ಸೇರಿಸುವ ಪ್ರಯತ್ನ ಮುಂದುವರಿದಿದೆ.

ಈಗಾಗಲೇ ಸದರಿ ಸಂಘದ ಸದಸ್ಯರಾಗಲು 100 ಕ್ಕೂ ಹೆಚ್ಚು ಪತ್ರಕರ್ತರು ಸದಸ್ಯತ್ವದ ಅರ್ಜಿ ಫಾರಂ ಪಡೆದಿದ್ದಾರೆ.ಅವರೆಲ್ಲರನ್ನೂ ಅರ್ಜಿಗಳನ್ನು ಪರಿಶೀಲನೆ ಮಾಡಿ ಸಂಘದಲ್ಲಿ ಸೇರಿಸುವ ಪ್ರಯತ್ನ ನಡೆದಿದೆ.ಎಲ್ಲಾ ಅರ್ಜಿಗಳನ್ನು ಅನುಮೋದನೆ ಗಾಗಿ ರಾಜ್ಯ ಅದ್ಯಕ್ಷ ರಿಗೆ ಕಳುಹಿಸಲಾಗುವುದು.ಅನುಮೋದನೆ ಯಾದ ನಂತರ ಅಧಿಕೃತ ಐಡಿ ಕಾರ್ಡ್ ಸದಸ್ಯರಿಗೆ ವಿತರಿಸಲಾಗುತ್ತದೆ.

KWJVOICE ಶಿವಮೊಗ್ಗ ಘಟಕದ ಪತ್ರಿಕಾ ಭವನ:

KWJVOICE ಶಿವಮೊಗ್ಗ ಘಟಕದ ಪತ್ರಿಕಾ ಭವನ ಸಹ ಸಧ್ಯದಲ್ಲಿಯೇ ಶುಭಾರಂಭ ಗೊಳ್ಳಲಿದೆ. ಪ್ರೆಸ್ ಮೀಟ್ ಮಾಡಲು, ಪ್ರೆಸ್ ನೋಟ್ ನೀಡಲು ವ್ಯವಸ್ಥೆ ಮಾಡಲಾಗುವುದು.ಇಲ್ಲಿ ಶಿವಮೊಗ್ಗ ನಗರ/ ಜಿಲ್ಲೆಯ KWJVOICE ಸಂಘಟನೆಯ ಸದಸ್ಯತ್ವ ಹೊಂದಿದ ಪತ್ರಕರ್ತರಿಗೆ ಮಾತ್ರ ಅವಕಾಶವನ್ನು ಕಲ್ಪಿಸಲಾಗುವುದು.

ಶಿವಮೊಗ್ಗ ಜಿಲ್ಲಾ ಘಟಕದ Karnataka working journalist Voice ಸಂಘಟನೆಯ ಸದಸ್ಯತ್ವದ ಅರ್ಜಿಗಳು ಲಭ್ಯವಿದೆ.ಅರ್ಜಿ ಮತ್ತು ಸದಸ್ಯತ್ವದ ಶುಲ್ಕ ಸೇರಿ ರೂ.500/- ನೀಡಿ ಅರ್ಜಿ ಪಡೆದುಕೊಳ್ಳಬಹುದು. .ಶಿವಮೊಗ್ಗ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಅರ್ಜಿಯನ್ನು ನೀಡಲಾಗುವುದು.

ಶಿವಮೊಗ್ಗ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಆತ್ಮೀಯ ಸ್ವಾಗತ.ಬನ್ನಿ ಕೈ ಜೋಡಿಸಿ…

KWJVOICE ಶಿವಮೊಗ್ಗ ಘಟಕದ ಧ್ಯೇಯ ಉದ್ದೇಶ ಏನೇಂದರೇ,ಒಟ್ಟಾಗಿ ಪತ್ರಕರ್ತರ ಶ್ರೇಯೋ ಅಭಿವೃದ್ದಿ,ಹಿತಕಾಯುವ ಕೆಲಸ ಮಾಡೋಣ,ಅವರ ಕಷ್ಟ ನಷ್ಟಗಳಿಗೆ ಸ್ಪಂದಿಸೋಣ…ಸರ್ಕಾರದಿಂದ ವಾರ್ತಾ ಇಲಾಖೆಯಿಂದ ಪತ್ರಕರ್ತರಿಗೆ ಸಿಗಬಹುದಾದ ಸೌಲಭ್ಯಗಳು, ನಿವೇಶನ ಇತ್ಯಾದಿ ಪಡೆಯಲು ಹೋರಾಟ,ಪತ್ರಕರ್ತರ ಸಹಕಾರ ಬ್ಯಾಂಕ್ ನಿರ್ಮಾಣ ಮಾಡುವ ಪ್ರಯತ್ನ ಮಾಡೋಣ…ಬನ್ನಿ ಕೈ ಜೋಡಿಸಿ…
ಅರ್ಜಿಯ ಜೊತೆಯಲ್ಲಿ ತಮ್ಮ ಪತ್ರಿಕೆಯ ಒಂದು ಪ್ರತಿ, ಒಂದು ಪಾಸ್ ಪೋರ್ಟ್ ಪೋಟೋ….RNI certificate xerox,ಆದಾರ್ ಕಾರ್ಡ್ ನೀಡತಕ್ಕದ್ದು. ವರದಿಗಾರರು ಮತ್ತು ಪೋಟೋ ಗ್ರಾಫ್ ಗಳು ಆಗಿದ್ದಲ್ಲಿ ಸಂಪಾದಕರಿಂದ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಧೃಡಿಕರಣ ಪತ್ರ ತರತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲಾ ಘಟಕದ Karnataka working journalist Voice ಸಂಘದ ಜಿಲ್ಲಾ ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ್ (ರಾಜು).ಮೊ.9449063043 ಮತ್ತು ಪ್ರಧಾನ ಕಾರ್ಯದರ್ಶಿಯಾದ ಅರವಿಂದ್.ಮೊ.9481090929 ಇವರನ್ನು ಸಂಪರ್ಕಿಸಲು ಕೋರಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddhramaiah ಮೂಡಾ ಬಗ್ಗೆ ಲೋಕಾಯುಕ್ತ ವಿಚಾರಣೆಯಲ್ಲಿ ಸೀಎಂ ಸಿದ್ಧರಾಮಯ್ಯ ಹೇಳಿದ್ದೇನು?

CM Siddhramaiah ಮುಡಾ ಪ್ರಕರಣ ಸಂಬಂಧ ಇಂದು( ಬುಧವಾರ) ಲೋಕಾಯುಕ್ತ...

Dnaneshwari Goshala ಗೋಪೂಜೆಯಿಂದ ಮನಸ್ಸಿಗೆ ಶಾಂತಿ & ನೆಮ್ಮದಿ- ಚಂದ್ರಹಾಸ.ಪಿ‌.ರಾಯ್ಕರ್

Dnaneshwari Goshala ಗೋವಿನ ಪೂಜೆ ಮಾಡುವುದರಿಂದ ಕೋಟ್ಯಾಂತರ ದೇವರ ಪೂಜಿಸಿದ ಪುಣ್ಯ...

Election Commission ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಮತದಾರರ ಪಟ್ಟಿ ಪ್ರಕಟಣೆ

Election Commission ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಕ್ಕೆ ಸಂಬAಧಿಸಿದAತೆ...