Friday, November 22, 2024
Friday, November 22, 2024

Department of Kannada and Culture ಕಿತ್ತೂರು ಚೆನ್ನಮ್ಮ ಮಾದರಿ ಅನುಸರಿಸಿ ಮಹಿಳೆಯರು ಸಾಧನೆ ಮಾಡಬೇಕು-ಎಸ್.ಸುಂದರ್

Date:

Department of Kannada and Culture ನಮ್ಮೆಲ್ಲರ ಸ್ಪೂರ್ತಿ, ಸ್ವಾತಂತ್ರ್ಯ ಹಂಬಲದ ನಿದರ್ಶನ ಹಾಗೂ ಶೌರ್ಯದೊಂದಿಗೆ ಕಾರುಣ್ಯಮೂರ್ತಿಯಾದ ಕಿತ್ತೂರಿನ ರಾಣಿ ಚೆನ್ನಮ್ಮನವರ ಹಾದಿಯಲ್ಲಿ ನಡೆದು ಹೆಣ್ಣುಮಕ್ಕಳು ಸಾಧನೆ ಮಾಡಬೇಕೆಂದು ಸಿರಿಕನ್ನಡ ಪುಸ್ತಕ ಮನೆಯ ಪ್ರಕಾಶಕರಾದ ಎಸ್.ಸುಂದರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ದೇಶ ಬ್ರಿಟಿಷರಿಂದಾಗಿ 200 ವರ್ಷಗಳ ಕಾಲ ಗುಲಾಮಗಿರಿಯಿಂದ ನಲುಗಿದ ಸಂದರ್ಭದಲ್ಲಿ, ಸ್ವಾತಂತ್ರö್ಯ ಸಂಗ್ರಾಮಕ್ಕೂ 33 ವರ್ಷಗಳ ಪೂರ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ತತ್ವ ಪ್ರೇರಣೆಯಿಂದ ಬೆಳೆದು ಬಂದ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಸಂಗ್ರಾಮ ಸಾರಿ ದೊಡ್ಡ ಜಯ ಸಾಧಿಸಿ ಕನ್ನಡ ನಾಡಿನಲ್ಲಿ ಹೋರಾಟಕ್ಕೆ ಮುನ್ನುಡಿ ಬರೆದ ದಿನಕ್ಕೆ ಇಂದು 200 ರ ಸಂಭ್ರಮ.

ರಾಣಿ ಚೆನ್ನಮ್ಮ ಮತ್ತೆ ಮತ್ತೆ ನಮ್ಮೆದೆಯಲ್ಲಿ ಸ್ಫೂರ್ತಿಯಾಗಿದ್ದಾರೆ. ಅವರ ಮಾರ್ಗದಲ್ಲಿ ನಡೆದು ನಮ್ಮ ಹೆಣ್ಣು ಮಕ್ಕಳು ಸಾಧನೆ ಮಾಡಬೇಕು. ರಾಜಕೀಯ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇದೆ.
ಗಂಡಿಗೆ ಸಮಾನವಾದ ದಕ್ಷತೆ, ಚಾಣಾಕ್ಷತೆ ಮತ್ತು ಜಾಣ್ಮೆಯಿಂದ ಹೋರಾಡಿದ್ದರು ಚೆನ್ನಮ್ಮ. ಅದೇ ದಕ್ಷತೆ, ಜಾಣ್ಮೆ ಪ್ರಸ್ತುತ ನಮ್ಮಲ್ಲಿ, ನಮ್ಮ ಹೆಣ್ಣುಮಕ್ಕಳಲ್ಲಿ ಇದೆಯಾ ಎಂದು ಪ್ರಶ್ನಿಸಿಕೊಳ್ಳುವ, ಪುನರಾವಲೋಕನ ಮಾಡಿಕೊಳ್ಳುವ ಸಂದರ್ಭ ಇದಾಗಿದೆ.

ಶೌರ್ಯದ ಜೊತೆ ಕಾರಣ್ಯಮೂರ್ತಿಯಾಗಿದ್ದರು ಚೆನ್ನಮ್ಮ. ಯುದ್ದ ನೈಪುಣ್ಯತೆ ಮತ್ತು ಎಚ್ಚೆತ್ತ ರಾಜಕೀಯ ಪ್ರಜ್ಞೆ ಹೊಂದಿದ್ದ ಆಕೆಯು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಇತಿಹಾಸದ ಎರಡು ಕಣ್ಣಾಗಿದ್ದು ಯಾವತ್ತೂ ಮಾರ್ಗದರ್ಶಕರಾಗಿದ್ದಾರೆ.

Department of Kannada and Culture ಆಧುನಿಕತೆ, ವಾಣಿಜ್ಯ ಬದುಕಿನಲ್ಲಿ ಪ್ರಸ್ತುತ ಜಾಗತಿಕ ದಾಸ್ಯದಂತಹ ಸಂದರ್ಭ ಸೃಷ್ಟಿಯಾಗಿದ್ದು, ಈ ಕುರಿತು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಂಡು ಉತ್ತರ ಕಂಡುಕೊಳ್ಳದಿದ್ದರೆ ಮುಂದೆ ಕೆಟ್ಟ ಪರಿಸ್ಥಿತಿ ಎದುರಾಗಲಿದೆ ಎಂದ ಅವರು ಮುಂದಿನ ಪೀಳಿಗೆಗೆ ಸ್ವಾತಂತ್ರö್ಯ ಹೋರಾಟಗಾರರು ಹಾಗೂ ಮಹನೀಯರ ಭವ್ಯವಾದ ಪರಂಪರೆಯನ್ನು ದಾಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್ ಮಾತನಾಡಿ, ಚೆನ್ನಮ್ಮ ಅವರೊಂದು ಶಕ್ತಿ, ಸ್ಪೂರ್ತಿ ಮತ್ತು ನಂಬಿಕೆ. ಇವೆಲ್ಲ ನಮ್ಮೆಲ್ಲರಲ್ಲಿ ಬರಬೇಕು. ಅವರು ಯಾವುದೋ ಒಂದು ಜಾತಿಗೆ ಸೀಮಿತರಲ್ಲ. ಎಲ್ಲ ಹೆಣ್ಣು ಮಕ್ಕಳಿಗೆ ಮಾದರಿಯಾಗಿರುವ ಅವರನ್ನು ಎಷ್ಟು ನೆನೆದರೂ, ಹೊಗಳಿದರು ಸಾಲದು.
ಬ್ರಿಟಿಷರ ವಿರುದ್ದ ಚೆನ್ನಮ್ಮ ವಿಜಯ ಸಾಧಿಸಿದ ವಿಜಯೋತ್ಸವ ದಿನ ಇಂದು. ಈ ದಿನವನ್ನು ನಾವು ಇನ್ನೂ ವಿಜೃಂಭಣೆಯಿಂದ ಆಚರಿಸಿ ಅವರ ಕೀರ್ತಿಯನ್ನು ಎತ್ತಿ ಹಿಡಿಯಬೇಕು ಎಂದರು.
ಪಂಚಮಸಾಲಿ ಸಂಘದ ಸಂಘಟನಾ ಕಾರ್ಯದರ್ಶಿ ಸಿದ್ದೇಶ್ ಬೇಗೂರು ಮಾತನಾಡಿ, ಬ್ರಿಟಿಷರ ವಿರುದ್ದ ಧ್ವನಿಯೆತ್ತಿದ ಪ್ರಥಮ ಮಹಿಳೆ ಕಿತ್ತೂರಿನ ರಾಣಿ ಚೆನ್ನಮ್ಮ. ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಸೆಣೆಸಾಡಿ ವಿಜಯ ಸಾಧಿಸಿದ ದಿನವಿಂದು. ಇಂತಹ ವೀರಮಹಿಳೆಯನ್ನು ಯಾವುದೇ ಜಾತಿಗೆ ಸೀಮಿತ ಮಾಡುವುದು ಬೇಡ. ಗಾಂಧಿ ಜಯಂತಿ ಮಾದರಿಯಲ್ಲಿ ಶಾಲಾ-ಕಾಲೇಜು ಸೇರಿದಂತೆ ಎಲ್ಲೆಡೆ ಇವರ ಜಯಂತಿ ಆಚರಣೆ ಆಗಬೇಕು ಎಂದ ಅವರು ಸಮುದಾಯದ ಸಂಘಟನೆ ಹೆಚ್ಚಬೇಕು. ನಗರದಲ್ಲಿ ಒಂದು ಸಮುದಾಯ ಭವನ ನಿರ್ಮಿಸಲು ಜಾಗ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಗೌರವಾಧ್ಯಕ್ಷ ಬಸವರಾಜು ಕನಗಲ್ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಬಾಲ್ಯದಲ್ಲಿ ಓದಿನಲ್ಲಿ ಜಾಣೆಯಾಗಿದ್ದು ಕುದರೆ ಸವಾರಿ ಪರಿಣಿತಿ ಹೊಂದಿದ್ದರು. ಅವರು ಜೀವನದಲ್ಲಿನ ಸವಾಲುಗಳನ್ನು ಹೇಗೆಲ್ಲಾ ಎದುರಿಸಿ ನಿಂತು ಹೋರಾಡಿದರೆಂದು ಚೆನ್ನಮ್ಮನ ಜೀವನ ಚರಿತ್ರೆ ಬಗ್ಗೆ ತಿಳಿಸಿದರು.
ಕೊಳಗೇರಿ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಗೀತಾ ರವಿಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ಇಂದು ಎಲ್ಲ ಕ್ಷೇತ್ರದಲ್ಲಿ ಇದ್ದರೂ ತಾರತಮ್ಯ ಇದೆ. ಹೆಣ್ಣು ಮಕ್ಕಳಿಗೆ ಮನೆಯಿಂದಲೇ ಸಮಾನತೆ ಶುರು ಆಗಬೇಕು. ವೀರರಾಣಿ ಚೆನ್ನಮ್ಮನಂತಿರಬೇಕೆಂದು ಅವರಲ್ಲಿ ಧೈರ್ಯ ತುಂಬಬೇಕು. ಹೆಣ್ಣು ಮಕ್ಕಳ ಬದುಕು ಇನ್ನೂ ಸುಧಾರಣೆ ಆಗಬೇಕು. ಧೈರ್ಯ ಸ್ಥೈರ್ಯದಿಂದ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆ ಎಂದರು.

ಮುಖಂಡರಾದ ಹೆಚ್.ವಿ.ಮಹೇಶ್ವರಪ್ಪ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಇಡೀ ದೇಶಕ್ಕಾಗಿ ಹೋರಾಡಿದವರು. ಇವರ ಜಯಂತಿಯನ್ನು ಮುಂದಿನ ದಿನಗಳಲ್ಲಿ ಎಲ್ಲರೂ ಸಂಘಟಿತರಾಗಿ ವಿಜೃಂಭಣೆಯಿಂದ ಆಚರಿಸುವಂತೆ ಆಗಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಕಾರ್ಯಕ್ರಮ ನಿರ್ವಹಿಸಿದರು. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಎಂ.ಕುಮಾರ್ ವಂದಿಸಿದರು.

ಮುಖಂಡರಾದ ಎನ್.ಎಸ್.ಕುಮಾರ್, ಚನ್ನಬಸಪ್ಪ, ಮಾಲತೇಶ, ಮಂಜುನಾಥ, ವೈ.ಹೆಚ್.ನಾಗರಾಜ್ ಶಶಿಕಲ, ಬಸವರಾಜ್, ಇತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...