Friday, November 22, 2024
Friday, November 22, 2024

M.B.B.S ನಮ್ಮದೊಂದೇ ಗುರಿ.ಡಾಕ್ಟರಾಗೋದು” ಒಂದೇ ಕುಟುಂಬದ ನಾಲ್ವರು ಸೋದರಿಯರ ದಿಟ್ಟ ನಿರ್ಧಾರ

Date:

M.B.B.S ಹೆಣ್ಣು ಮಕ್ಕಳಿಗೆ ಶಿಕ್ಷಣದಲ್ಲಿ ಹೆಚ್ಚು ಹೆಚ್ಚು ಅವಕಾಶ ನೀಡಿದಂತೆ ಸಾಧನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಮಧ್ಯೆ ಒಂದೇ ಕುಟುಂಬದ ನಾಲ್ವರು ಸಹೋದರಿಯರಿಗೆ MBBS ಸೀಟ್ ಪಡೆದು ವೈದ್ಯರಾಗಲು ಹೊರಟಿದ್ದಾರೆ.

ನಾಲ್ವರು ಸಹೋದರಿಯರು ತಮ್ಮ ಕಠಿಣ ಪರಿಶ್ರಮದ ಮೂಲಕವೇ ಎಂ.ಬಿ.ಬಿ.ಎಸ್ ಸೀಟ್ ಪಡೆದು ಭವಿಷ್ಯದ ಡಾಕ್ಟರ್ಸ್ ಆಗಲು ಹೊರಟಿದ್ದಾರೆ. ಇದೀಗ ನಾಲ್ವರು ಸಹೋದರಿಯರ ಸಾಧನೆಯ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ಎಂ.ಬಿ.ಬಿ.ಎಸ್ ಓದಿ ಡಾಕ್ಟರ್ಸ್ ಆಗಲು ಕಠಿಣ ಪರಿಶ್ರಮದ ಜೊತೆಗೆ ಹಣವೂ ಇರಬೇಕು . ಯಾಕಂದ್ರೆ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಸಿಗುವುದು ಭಾರೀ ಕಷ್ಟದ ಮಾತು ಅಂತಾನೇ ಹೇಳಬಹುದು. ಅಂತಹದರಲ್ಲಿ ಇಲ್ಲೊಂದು ಒಂದೇ ಕುಟುಂಬದ ನಾಲ್ವರು ಮಕ್ಕಳು ಎಂ.ಬಿ.ಬಿ.ಎಸ್ ಸೀಟ್ ಪಡೆದು ಭವಿಷ್ಯ ವೈದ್ಯರಾಗಲು ತಯಾರಾಗಿದ್ದಾರೆ.

ತೆಲಂಗಾಣದ ಸಿದ್ದಿಪೇಟೆಯ ನಾಲ್ವರು ಸಹೋದರಿಯರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂ.ಬಿ.ಬಿ.ಎಸ್ ಸೀಟು ಪಡೆದುಕೊಂಡು ಪೋಷಕರಿಗೆ ಹೆಮ್ಮೆ ತರುವಂತಹ ಕೆಲಸವನ್ನು ಮಾಡಿದ್ದಾರೆ.
ತಮ್ಮ ನಾಲ್ವರು ಹೆಣ್ಣು ಮಕ್ಕಳ ಈ ಸಾಧನೆಗೆ ಪೋಷಕರಾದ ಕೊಂಕ್ ರಾಮಚಂದ್ರಂ ಮತ್ತು ಶಾರದ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

M.B.B.S ಈ ಪತಿ-ಪತ್ನಿಯರಿಬ್ಬರು ಟೈಲರ್ ಕೆಲಸವನ್ನು ಮಾಡಿ ಕಷ್ಟಪಟ್ಟು ನಾಲ್ವರು ಮಕ್ಕಳನ್ನು ಓದಿಸಿದ್ದು, ಇದೀಗ ಈ ನಾಲ್ವರು ಹೆಣ್ಣು ಮಕ್ಕಳು ತಂದೆ ತಾಯಿ ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಿದ್ದಾರೆ.

ಅವರ ಹಿರಿಯ ಮಗಳಾದ ಮಮತಾ 2018 ರಲ್ಲಿ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಪಡೆದು ಇತ್ತೀಚಿಗಷ್ಟೇ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾಳೆ.
ಇನ್ನೂ ಅವರ ಮಗಳು ಮಾಧವಿ 2020 ರಲ್ಲಿ ಎಂಬಿಬಿಎಸ್ ಸೀಟ್ ಪಡೆದು ಪ್ರಸ್ತುತ ಅಂತಿಮ ವರ್ಷದ ಎಂಬಿಬಿಎಸ್ ಪದವಿ ಶಿಕ್ಷಣವನ್ನು ಪಡೆದಯುತ್ತಿದ್ದಾಳೆ. ಇದೀಗ ಇವರ ಅವಳಿ ಮಕ್ಕಳಾದ ರೋಹಿಣಿ ಮತ್ತು ರೋಷಿಣಿ ಕೂಡಾ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಪಡೆಯುವ ಮೂಲಕ ತಂದೆ-ತಾಯಿಗೆ ಹೆಮ್ಮೆ ತರುವಂತಹ ಕಾರ್ಯವನ್ನು ಮಾಡಿದ್ದಾರೆ. ಎಷ್ಟೇ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರೂ ನಮಗೆ ಇಷ್ಟು ಒಳ್ಳೆಯ ಶಿಕ್ಷಣವನ್ನು ನೀಡಿದ ನಮ್ಮ ತಂದೆ-ತಾಯಿಯ ಕನಸನ್ನು ನಾವು ನನಸು ಮಾಡುತ್ತೇವೆ ಎಂದು ನಾಲ್ವರು ಪುತ್ರಿಯರು ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...