Wednesday, November 6, 2024
Wednesday, November 6, 2024

Special Olympics Bharat ಬೌದ್ಧಿಕ ಭಿನ್ನ ಸಾಮರ್ಥ್ಯವುಳ್ಳ ಮಕ್ಕಳ ಕ್ರೀಡೆಗೆ ಬೆನ್ನೆಲುಬಾಗಿ ನಿಲ್ಲಬೇಕು- ಆಯನೂರು ಮಂಜುನಾಥ್

Date:

Special Olympics Bharat ಕ್ರೀಡಾಕೂಟವು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಆಯನೂರು ಮಂಜುನಾಥ್ ರವರು “ಬೌದ್ಧಿಕ ಭಿನ್ನ ಸಾಮರ್ಥ್ಯ ಉಳ್ಳ ಮಕ್ಕಳಿಗೂ ಅವಕಾಶ ಕೊಟ್ಟು ತಾಳ್ಮೆ ಹಾಗೂ ಶ್ರದ್ಧೆಯಿಂದ ಅವರಿಗೆ ಕಲಿಸಿದರೆ ಅವರೂ ತಮ್ಮ ಜೀವನದಲ್ಲಿ ಸಾಧನೆ ಮಾಡಬಲ್ಲರು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಪೋಷಕರು, ಶಿಕ್ಷಕರು ಮತ್ತು ಸಮಾಜ ಅವರಿಗೆ ಬೆನ್ನೆಲುಬಾಗಿ ನಿಂತು ಅವರ ಸಾಧನೆಗೆ ಹಾಗೂ ಸಂತೋಷಕ್ಕೆ ಸಹಕರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದರು.

ಕ್ರೀಡಾಕೂಟದಲ್ಲಿ 25 ಮೀಟರ್,50 ಮೀಟರ್, 100 ಮೀಟರ್ ಹಾಗೂ 200 ಮೀಟರ್ ಓಟದ ಸ್ಪರ್ಧೆ, ರಿಲೇ, ಗುಂಡು ಎಸೆತ, ಟೆನ್ನಿಸ್ ಬಾಲ್ ಎಸೆತ, ಮೃದು ಬಾಲ್ ಎಸೆತ, ಹೀಗೆ 5 ವಿಧದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. 3 ಜಿಲ್ಲೆಗಳಿಂದ 11 ಶಾಲೆಗಳ ಸುಮಾರು 170 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ತಮ್ಮ ಮಕ್ಕಳ ಸಾಮರ್ಥ್ಯ ಮತ್ತು ಸಂತೋಷವನ್ನು ನೋಡಲು ಸಂಭ್ರಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಬಂದಿದ್ದರು.

ಬೌದ್ಧಿಕ ಭಿನ್ನ ಸಾಮರ್ಥ್ಯ ಇರುವ ವಿಶೇಷ ಮಕ್ಕಳ ಕ್ರೀಡಾಕೂಟ ನಡೆಸಲು ಸ್ಪೆಷಲ್ ಒಲಿಂಪಿಕ್ಸ್ ಭಾರತ್ ತನ್ನದೇ ಆದ ಕೆಲವು ನೀತಿ ನಿಯಮಗಳನ್ನು ಅಳವಡಿಸಿಕೊಂಡಿದೆ. ಹಾಗಾಗಿ ಈ ಕ್ರೀಡಾಕೂಟವನ್ನು ನಡೆಸಲು ವಿವಿಧ ಜಿಲ್ಲೆಗಳಿಂದ ವಿಶೇಷ ತರಬೇತಿ ಹೊಂದಿದ 12 ಜನ ಕ್ರೀಡಾ ತರಬೇತಿದಾರರು ಬಂದಿದ್ದರು.

Special Olympics Bharat ಕ್ರೀಡಾಕೂಟವನ್ನು ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕದ ಶಿವಮೊಗ್ಗ ಜಿಲ್ಲಾ ಸಮಿತಿ ಆಯೋಜನೆ ಮಾಡಿತ್ತು. ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರ ಶಿವಮೊಗ್ಗ, ಚೈತನ್ಯ ವಿಶೇಷ ಶಾಲೆ ಸಾಗರ ಹಾಗೂ ಸಕ್ಷಮ ಸಂಘಟನೆಯವರ ಸಹಯೋಗದೊಂದಿಗೆ ಈ ಕ್ರೀಡಾಕೂಟವು ನಡೆಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಶಿವಮೊಗ್ಗದ ಹೆಸರಾಂತ ಈ ಎನ್ ಟಿ ತಜ್ಞರಾದ ಶ್ರೀಯುತ ಡಾ.ಶ್ರೀಧರ್ ರವರು ಭಾಗವಹಿಸಿದ್ದರು.

ಮತ್ತೋರ್ವ ಅತಿಥಿಗಳಾಗಿ ಮಾನಸ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ರಜನಿ ಎ ಪೈ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪೆಷಲ್ ಒಲಂಪಿಕ್ ಭಾರತ್ ಕರ್ನಾಟಕದ ವಲಯಾಧಿಕಾರಿಗಳಾದ ಶ್ರೀಯುತ ಅಮರೇಂದ್ರ ಅಂಜನಪ್ಪನವರು ವಹಿಸಿಕೊಂಡಿದ್ದರು.
ಸ್ಪೆಷಲ್ ಒಲಿಂಪಿಕ್ಸ್ ನ ಶಿವಮೊಗ್ಗ ಜಿಲ್ಲಾ ಸಂಘದ ಅಧ್ಯಕ್ಷರಾದ ಶಾಂತಲಾ ಸುರೇಶ್ ರವರು ಪ್ರಾಸ್ತಾವಿಕ ನುಡಿಗಳಾನ್ನಾಡಿದರು. ಕಾರ್ಯದರ್ಶಿಗಳಾದ ಜ್ಯೋತಿ ಅರುಣ್ ಕುಮಾರ್ ರವರು ಸ್ವಾಗತವನ್ನು ಕೋರಿದರು. ಉಪಾಧ್ಯಕ್ಷರಾದ ಕುಮಾರ್ ಶಾಸ್ತ್ರೀಜಿಯವರು ಎಲ್ಲರನ್ನೂ ವಂದಿಸಿದರು. ಮಾಜಿ ಅಂಗವಿಕಲರ ಕಲ್ಯಾಣ
ಣಾಧಿಕಾರಿಗಳಾದ ಚಂದ್ರಪ್ಪಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಯುತ ರೇಖಾ ನಾಯಕ್, ಜಿಲ್ಲಾ ಸಮಿತಿ ಸದಸ್ಯರಾದ ಶ್ರೀಮತಿ ಮೇಘ, ಸುಲೇಖಾ, ಸವಿತಾರಾಣಿ, ಶ್ರೀ ಎ.ಮಂಜುನಾಥ್ ರವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddhramaiah ಮೂಡಾ ಬಗ್ಗೆ ಲೋಕಾಯುಕ್ತ ವಿಚಾರಣೆಯಲ್ಲಿ ಸೀಎಂ ಸಿದ್ಧರಾಮಯ್ಯ ಹೇಳಿದ್ದೇನು?

CM Siddhramaiah ಮುಡಾ ಪ್ರಕರಣ ಸಂಬಂಧ ಇಂದು( ಬುಧವಾರ) ಲೋಕಾಯುಕ್ತ...

Dnaneshwari Goshala ಗೋಪೂಜೆಯಿಂದ ಮನಸ್ಸಿಗೆ ಶಾಂತಿ & ನೆಮ್ಮದಿ- ಚಂದ್ರಹಾಸ.ಪಿ‌.ರಾಯ್ಕರ್

Dnaneshwari Goshala ಗೋವಿನ ಪೂಜೆ ಮಾಡುವುದರಿಂದ ಕೋಟ್ಯಾಂತರ ದೇವರ ಪೂಜಿಸಿದ ಪುಣ್ಯ...

Election Commission ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಮತದಾರರ ಪಟ್ಟಿ ಪ್ರಕಟಣೆ

Election Commission ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಕ್ಕೆ ಸಂಬAಧಿಸಿದAತೆ...