Karnataka Cricket Premier League ಕರ್ನಾಟಕ ರಾಜ್ಯ ಕ್ರಿಕೆಟ್ ಪ್ರೀಮಿಯರ್ ಲೀಗ್ (ಎಸ್.ಪಿ.ಎಲ್ 2024) ಟೂರ್ನಿಯ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸುವ ಶಿವಮೊಗ್ಗ ಟೈಗರ್ಸ್ ತಂಡದ ಆಟಗಾರರ ಪಟ್ಟಿ ಹಾಗೂ ಆಹ್ವಾನ ಪತ್ರಿಕೆಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಶಿವಮೊಗ್ಗ ತಂಡದ ಮಾಲಕ ಚೇತನ್ ದಾಸರಹಳ್ಳಿ, ಕರ್ನಾಟಕ ರಾಜ್ಯ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ನಡೆಸುವ ಕರ್ನಾಟಕ ಸಾಫ್ಟ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ – 2024 ನ. 1ರಂದು ಬೆಂಗಳೂರಿನ ಸೋಲದೇವನಹಳ್ಳಿಯ ಆಚಾರ್ಯ ಮೈದಾನದಲ್ಲಿ ನಡೆಯಲಿದೆ ಎಂದರು.
ಯಾರೆಲ್ಲ ಗಲ್ಲಿ ಕ್ರಿಕೆಟ್ ಆಟಗಾರರು ಹಾಗೂ ಗ್ರಾಮೀಣ ಮಟ್ಟದ ಕ್ರಿಕೆಟ್ ಪ್ರತಿಭೆಗಳಿದ್ದರುಊ ಅವರನ್ನು ಗುರುತಿಸುವ ಮತ್ತು ಒಂದು ಅದ್ಭುತವಾದ ಅವಕಾಶವನ್ನು ಕಲ್ಪಿಸುವ ಪ್ರಯತ್ನವೇ ಈ KSPL 2024 ಆಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಟಗಾರರ ಆಯ್ಕೆಯ ಟ್ರಯಲ್ಸ್ ನ್ನು KSSCA ವತಿಯಿಂದಲೆ ನಡೆಸಿ, ಅಲ್ಲಿ ಆಯ್ಕೆಯಾದ 700 ಜನ ಪ್ರತಿಭಾನ್ವಿತ ಯುವ ಕ್ರಿಡಪಟುಗಳನ್ನು ಹರಾಜು ಪ್ರಕ್ರಿಯೆಯ ಮುಖೇನ ರಾಜ್ಯದ 32 ತಂಡಗಳಿಗೆ ಆಟಗಾರರ ಆಯ್ಕೆ ಯನ್ನು ಮಾಡಲಾಯಿತು ಎಂದರು.
Karnataka Cricket Premier League ಇದರಲ್ಲಿ ಶಿವಮೊಗ್ಗ ಟೈಗರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ 21 ಜನ ಆಟಗಾರರಲ್ಲಿ 17 ಆಟಗಾರರು ಶಿವಮೊಗ್ಗ ಜಿಲ್ಲೆಯವರರಾಗಿದ್ದಾರೆ. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶವನ್ನು ನೀಡುವ ಪ್ರಯತ್ನ ನಮ್ಮದಾಗಿದೆ ಎಂದರು.
, 01 ನವೆಂಬರ್ 2024 ಇಂದ 01 ಡಿಸೆಂಬರ್ 2024 ರ ವರೆಗೆ ಒಂದು ತಿಂಗಳ ಕಾಲ ನಡೆಯಲಿದ್ದು, ಎಲ್ಲಾ ಆಟಗಳ ನೇರ ಪ್ರಸಾರವನ್ನು ದೂರ ದರ್ಶನ ಚಂದನದಲ್ಲಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಶಿವಮೊಗ್ಗ ತಂಡದ ಪಂದ್ಯ ನ.24ರಂದು ಹಾವೇರಿ, 25ರಂದು ಬೆಂಗಳೂರು ಗ್ರಾಮಾಂತರ, 27ರಂದು ಗದಗ್ ತಂಡದ ಜೊತೆ ನಡೆಯಲಿದೆ ಎಂದರು.
ತಂಡದ
ಆಟಗಾರರ ಪಟ್ಟಿ : ಬಸವರಾಜು (ಶಿವಮೊಗ್ಗ) – ನಾಯಕ 3. ಎಂ.ಡಿ ಸಿರಾಜ್ (ಬೀದರ್) 5. ವಿನಯ್ (ಹೊಸನಗರ) 7. ಸನತ್ ಆಚಾರ್ಯ (ಹೊಸನಗರ) 9. ಗಂಗಾಧರ (ಶಿವಮೊಗ್ಗ) 2. ಸಚಿನ್ (ತೀರ್ಥಹಳ್ಳಿ) – ಉಪ ನಾಯಕ 4. ಕಿರಣ್ (ಭದ್ರಾವತಿ) 6. ಸೈಯದ್ ಖಾಷಿಫ್ (ಶಿವಮೊಗ್ಗ) 8. ಆಶಿಕ್ (ಹೊಸನಗರ) 10. ತೌಫಿಕ್ (ತೀರ್ಥಹಳ್ಳಿ, 11. ಶ್ರೀನಿವಾಸ್ (ಶಿವಮೊಗ್ಗ)
- ಚೇತನ್ (ಶಿವಮೊಗ್ಗ)
- ನಿಯಾಸ್ (ಭದ್ರಾವತಿ)
- ವಿಕ್ರಮ್ ಗೌಡ (ತೀರ್ಥಹಳ್ಳಿ)
- ಸ್ವಸ್ತಿಕ್ ನಾಗರಾಜ್ (ಬೆಂಗಳೂರು)
- ಪ್ರತಾಪ್ (ಶಿವಮೊಗ್ಗ)
- ಪ್ರಜ್ವಲ್ ಗಂಗೊಳ್ಳಿ (ಕುಂದಾಪುರ)
- ಉಮೇಶ್ (ತುಮಕೂರು)
- ರಾಘವೇಂದ್ರ (ಶಿವಮೊಗ್ಗ)
- ಅವಿನಾಶ್ ಆಚಾರ್ಯ (ಹೊಸನಗರ)
- ಸುಧಾಕರ್ (ಸೊರಬ) ಆಟಗಾರರಿದ್ದಾರೆ ಎಂದರು.