Wednesday, November 6, 2024
Wednesday, November 6, 2024

Ayanur Manjunath ಸಚಿವ ಪ್ರಹ್ಲಾದ್ ಜೋಷಿ ರಾಜಿನಾಮೆ ನೀಡಲಿ- ಆಯನೂರು ಮಂಜುನಾಥ್

Date:

Ayanur Manjunath ಶಿವಮೊಗ್ಗ ಟಿಕೇಟ್ ಗಾಗಿ ಡೀಲ್ ನಡೆಯುವುದು ಬಿಜೆಪಿಯಲ್ಲಿ ಹೊಸತೇನಲ್ಲ, ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಸಹೋದರ-ಸಹೋದರಿಯರ ವಿರುದ್ದ ವೇ ಕೇಸು ದಾಖಲಾಗಿದ್ದು, ಪ್ರಹ್ಲಾದ್ ಜೋಷಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ವಕ್ತಾರ , ಮಾಜಿ ಸಂಸದ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ಯಲ್ಲಿ ಮಾತನಾಡುತ್ತಿದ್ದ ಆಯನೂರು ಮಂಜುನಾಥ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಕೇಂದ್ರ ಸಚಿವ ಪ್ರಹ್ಲದ್ ಜೋಷಿಯವರ ಸಹೋದರ ಗೋಪಾಲ ಜೋಷಿ ಅವರು ಟಿಕೆಟ್ ಕೊಡಿಸಲು ೫ ಕೋಟಿ ಡಿಮ್ಯಾಂಡ್ ಮಾಡಿದ್ದರು. ಅದರಂತೆ ೨೫ ಲಕ್ಷ ಮುಖಂಡ ಹಣ ನೀಡಿದ್ದೇವು. ಆದರೆ ಟಿಕೆಟ್ ಕೊಡಿಸದೆ ವಂಚಿಸಲಾಗಿದೆ. ವಾಪಾಸ್ ಹಣ ಕೇಳಿದರೆ ಜೀವಬೆದರಿಕೆ ಹಾಕಲಾಗಿದೆ ಎಂದು ಸುನೀತಾ ಚೌವ್ಹಣ್ ಎಂಬುವವರು ಕೊಟ್ಟ ದೂರಿನಲ್ಲಿ ಈ ಎಲ್ಲಾ ವ್ಯವಹಾರಗಳು ಸಚಿವ ಪ್ರಹ್ಲಾದ್ ಜೋಷಿ ಅವರ ಕಚೇರಿಯಲ್ಲೇ ನಡೆದಿದೆ ಇದಕ್ಕೆ ಜೋಷಿ ಉತ್ತರಿಸಬೇಕು.
ಬಿಜೆಪಿಯಲ್ಲಿ ಒಂದು ಶಿಷ್ಟಾಚಾರ ಇದೆ. ಈ ತರಹದ ಹಣವನ್ನು ಬ್ಯಾಂಕ್ ಮೂಲಕವಲ್ಲದೆ, ಚೆಕ್ ಮೂಲಕ ಇಲ್ಲವೇ ನಗದಾಗಿ ಪಡೆಯುವ ಅಭ್ಯಾಸವಿದೆ. ಅದೇ ರೀತಿ ಇಲ್ಲೂ ನೇರವಾಗಿ ನಗದುಪಡೆಯಲಾಗಿದೆ.ಇದೆಲ್ಲವೂ ಇದ್ದರೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು , ಪ್ರಕರಣಕ್ಕೂ ತಮಗೂ ಸಂಬಂಧವೇ ಇಲ್ಲ ಎಂದಿದ್ದಾರೆ. ಇನ್ನು ವಿಚಿತ್ರಯೆಂದರೆ ಸಹೋದರ ಗೋಪಾಲ ಜೋಷಿಗೂ ತಮಗೂ ಸಂಬಂಧವೇ ಇಲ್ಲ ಎಂದಿದ್ದಾರೆ. ಹಾಗೆಯೇ ಪ್ರಕರಣದಲ್ಲಿರುವ ವಿಜಯಲಕ್ಷ್ಮಿ ತಮ್ಮ ಸಹೋದರಿಯೇ ಅಲ್ಲ ಎಂದಿದ್ದಾರೆ. ಹಾಗಾದರೆ ಟಿಕೆಟ್ ಕೊಡಿಸುವುದಾಗಿ ಹೇಳಿ ನಡೆಸಿದ ಹಣದ ವಹಿವಾಟಿನ ಚಟುವಟಿಕೆಗಳು ಅವರದೇ ಕಚೇರಿಯಲ್ಲಿ ನಡೆದಿದ್ದು ಯಾಕೆ? ಅದಕ್ಕೆ ಜೋಷಿಯವರು ಉತ್ತರಿಸಲಿ ಎಂದು ಆಗ್ರಹಿಸಿದರು.

Ayanur Manjunath ಬಿಜೆಪಿಯಲ್ಲಿ ಹಣಕ್ಕಾಗಿ ಟಿಕೆಟ್ ಮಾರಿಕೊಳ್ಳುವ ಸಂಸ್ಕೃತಿ ಅಲ್ಲಿ ಹೊಸದಲ್ಲ. ಈ ಹಿಂದೆ ಕುಂದಾಪುರದಲ್ಲೂ ಇಂತಹದೊಂದು ಪ್ರಕರಣ ಸುದ್ದಿ ಆಗಿತ್ತು. ಇನ್ನಷ್ಟು ಪ್ರಕರಣಗಳು ಅವರದೇ ಪಕ್ಷದ ಮುಖಂಡರೇ ಬಹಿರಂಗ ಮಾಡಿದರು. ಮೊನ್ನೆಯಷ್ಟೇ ಅವರದೇ ಪಕ್ಷದ ಮುಖಂಡ ಯತ್ನಾಳ್, ತಮ್ಮಪಕ್ಷದ ನಾಯಕರೊಬ್ಬರು ಒಂದು ಸಾವಿರ ಕೋಟಿ ರೂ. ಇಟ್ಟುಕೊಂಡು ಮುಖ್ಯ ಮಂತ್ರಿಯಾಗಲು ಕಾಯುತ್ತಿದ್ದಾರೆಂದು ಹೇಳಿದ್ದರು. ಇದನ್ನು ಬಿಜೆಪಿಯ ಯಾರು ಕೂಡ ಅಲ್ಲಗಳೆದಿಲ್ಲ. ಅದರರ್ಥವೇನು? ಎಂದು ಆಯನೂರು ಪ್ರಶ್ನಿಸಿದರು.
ಜೋಷಿ ಅವರ ಸಹೋದರ ಗೋಪಾಲ ಜೋಷಿ ಟಿಕೆಟ್ ಕೊಡಿಸುವ ವಿಚಾರದಲ್ಲಿ ಗೃಹ ಸಚಿವರ ಹೆಸರು ಪ್ರಸ್ತಾಪ ವಾಗಿದೆ. ಹಾಗೆಯೇ ಸಚಿವರ ಆಪ್ತ ಕಾರ್ಯದರ್ಶಿ ಹೆಸರು ಪ್ರಸ್ತಾಪಕ್ಕೆ ಬಂದಿದೆ. ಹಾಗಾಗಿ ಜೋಷಿ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅತ್ಯಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಮುನಿರತ್ನ ಪ್ರಕರಣದಲ್ಲಿ ಬಿಜೆಪಿಯವರ ಧ್ವನಿಯೇ ಇಲ್ಲ. ಹನಿಟ್ರ್ಯಾಪ್ ಮಾಡುವ ಒಬ್ಬ ರಾಜಕಾರಣಿಯ ಬಗ್ಗೆ ಇವರ ಮೌನವೇಕೆ ಎನ್ನುವುದನ್ನು ತಿಳಿಸಲಿ ಎಂದ ಆಯನೂರುಮಂಜುನಾಥ್ ಅವರು ಮನಿಲಾಡ್ರಿಂಗ್ ಅಲ್ಲದ ಜಾಗಕ್ಕೆ ಬರುವ ಇಡಿ , ಕೋವಿಡ್‌ನಲ್ಲಿ ೨೦೦೦ ಕೋಟಿ ಹಗರಣ ನಡೆದಿದೆ ಎಂದು ಯತ್ನಾಳ್ ಹೇಳುವ ವಿಚಾರದಲ್ಲಿ ಯಾಕೆ ಇಡಿ ಬರೋದಿಲ್ಲ ಎಂದು ಪ್ರಶ್ನಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಬೆಂಗಳೂರಿಗೆ ಬಂದರೆ, ದುಡ್ಡು ದೋಚುವುದಕ್ಕಾಗಿಯೇ ಬಂದಿದ್ದಾರೆಂದು ಸಿ.ಟಿ.ರವಿ ಟೀಕಿಸುತ್ತಾರೆ. ಸಿ.ಟಿ.ರವಿ ಕೂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಆಗ ಅವರು ಕೂಡ ಬೇರೆಬೇರೆ ರಾಜ್ಯಕ್ಕೆ ಹೋಗುತ್ತಿದ್ದರು. ಹಾಗಾದರೆ ಅವರು ಕೂಡ ಇದೇ ರೀತಿ ಹಣ ದೋಚುವುದಕ್ಕೆ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದರೆ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddhramaiah ಮೂಡಾ ಬಗ್ಗೆ ಲೋಕಾಯುಕ್ತ ವಿಚಾರಣೆಯಲ್ಲಿ ಸೀಎಂ ಸಿದ್ಧರಾಮಯ್ಯ ಹೇಳಿದ್ದೇನು?

CM Siddhramaiah ಮುಡಾ ಪ್ರಕರಣ ಸಂಬಂಧ ಇಂದು( ಬುಧವಾರ) ಲೋಕಾಯುಕ್ತ...

Dnaneshwari Goshala ಗೋಪೂಜೆಯಿಂದ ಮನಸ್ಸಿಗೆ ಶಾಂತಿ & ನೆಮ್ಮದಿ- ಚಂದ್ರಹಾಸ.ಪಿ‌.ರಾಯ್ಕರ್

Dnaneshwari Goshala ಗೋವಿನ ಪೂಜೆ ಮಾಡುವುದರಿಂದ ಕೋಟ್ಯಾಂತರ ದೇವರ ಪೂಜಿಸಿದ ಪುಣ್ಯ...

Election Commission ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಮತದಾರರ ಪಟ್ಟಿ ಪ್ರಕಟಣೆ

Election Commission ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಕ್ಕೆ ಸಂಬAಧಿಸಿದAತೆ...