Monday, February 2, 2026
Monday, February 2, 2026

Chamber Of Commerce Shivamogga ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

Date:

Chamber Of Commerce Shivamogga ಶಿವಮೊಗ್ಗದ "ಜವಳಿ ವರ್ತಕರ ಸಂಘ" (ರಿ) ದ ವತಿಯಿಂದ  ಛೇಂಬರ್ ಆಫ್ ಕಾಮರ್ಸ್ ನ "ಶಾಂತಲಾ ಸ್ಪೆರೋಕಾಸ್ಟ್" ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಸರಳ ಸಮಾರಂಭದಲ್ಲಿ "ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ"ದ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು. ಪ್ರತಿಷ್ಠಿತ ಸಂಸ್ಥೆಯಾಗಿ ಮತ್ತು ಜನೋಪಯೋಗಿ,ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಹೆಗ್ಗುರುತನ್ನು ಮೂಡಿಸಿರುವ ಸಂಘದ ನೂತನ ಅದ್ಯಕ್ಷರಾದ ಬಿ.ಗೋಪಿನಾಥ್ ರವರು ಉದ್ದೇಶಿತ ಬೃಹತ್ "ಶಿವಮೊಗ್ಗ ಹಬ್ಬ" ವನ್ನು ಮುಂಬರುವ ದಿನಗಳಲ್ಲಿ ಆಯೋಜಿಸುವ ಮೂಲಕ ವ್ಯಾಪಾರ, ಕೈಗಾರಿಕೆ, ಪ್ರವಾಸೋದ್ಯಮ ಇನ್ನೂ ಮುಂತಾದ ಹಲವಾರು ಆಯಾಮಗಳಲ್ಲಿ  ಶಿವಮೊಗ್ಗವನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಅನೇಕ ಯೋಜನೆಗಳನ್ನು ಹೊಂದಿರುವುದಾಗಿ   ತಮ್ಮ ಅಭಿನಂದನಾ ನುಡಿಗಳಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್. ಕಾರ್ಯದರ್ಶಿ ಎ ಎಂ ಸುರೇಶ್. ಖಜಾಂಚಿ ಮನೋಹರ್. ಸಹಕಾರದ ಶ್ರೀ ಸುಕುಮಾರ್ ರವರಿಗೆ ಅಭಿನಂದಿಸಲಾಯಿತು 
Chamber Of Commerce Shivamogga ಸಭಾದ್ಯಕ್ಷತೆಯನ್ನು ಜವಳಿ ವರ್ತಕರ ಸಂಘದ ಸುರೇಶ್ ಕುಮಾರ್ ಬೇದ್ರೆಯವರು ವಹಿಸಿದ್ದರು.ಕಾರ್ಯದರ್ಶಿ ಪ್ರಭಾಕರ್ ರವರ ಸ್ವಾಗತ, ಅನಿಲ್ ಕುಮಾರ್. ಹೆಚ್.ಶೆಟ್ಟರ್ ರವರ ನಿರೂಪಣೆ,ರಾಕೇಶ್ ಸಾಕ್ರೆಯವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...