Cybercrime of Punjab Police ಕಾನೂನುಬಾಹಿರ ಜಾಹೀರಾತು ನೀಡಿದ್ದಕ್ಕಾಗಿ ರಾಜ್ಯದಾದ್ಯಂತ 18 ಟ್ರಾವೆಲ್ ಏಜೆನ್ಸಿಗಳ ವಿರುದ್ಧ ಎನ್‌ಆರ್‌ಐ ಅಫೇರ್ಸ್ ವಿಂಗ್ ಮತ್ತು ಪಂಜಾಬ್ ಪೋಲೀಸ್‌ನ ಸೈಬರ್ ಕ್ರೈಮ್ ವಿಭಾಗವು ಚಂಡೀಗಢದ ಪ್ರೊಟೆಕ್ಟರೇಟ್ ಆಫ್ ಎಮಿಗ್ರಂಟ್ಸ್ ಸಮನ್ವಯದಲ್ಲಿ ಪ್ರಕರಣ ದಾಖಲಾಗಿದೆ.
ಈ ಟ್ರಾವೆಲ್ ಏಜೆನ್ಸಿಗಳು ವಿದೇಶಗಳಲ್ಲಿ ಉದ್ಯೋಗವಕಾಶಗಳನ್ನು ನೀಡುವುದಾಗಿ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿತ್ತು ಎಂದು ವಲಸಿಗರ ಸಂರಕ್ಷಣಾ ಸಂಸ್ಥೆಯಾಗಿರುವ ಪ್ರೊಟೆಕ್ಟರೇಟ್ ಆಫ್ ಎಮಿಗ್ರಂಟ್ಸ್ ಆರೋಪಿಸಿದೆ.
ಆಗಸ್ಟ್‌ನಲ್ಲಿ ಇಂತಹ 25 ಅಕ್ರಮ ಟ್ರಾವೆಲ್ ಏಜೆನ್ಸಿಗಳ ವಿರುದ್ಧ ಕನಿಷ್ಠ 20 ಎಫ್‌ಐಆರ್‌ಗಳು ದಾಖಲಾಗಿತ್ತು. ಇದರೊಂದಿಗೆ ಇಂತಹ ಪ್ರಕರಣ ದಾಖಲಾಗದ ಅಕ್ರಮ ಟ್ರಾವೆಲ್ ಏಜೆನ್ಸಿಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.
ಎನ್‌ಆರ್‌ಐ ವ್ಯವಹಾರಗಳ ಹೆಚ್ಚುವರಿ ಡಿಜಿಪಿ ಪ್ರವೀಣ್ ಕುಮಾರ್ ಸಿನ್ಹಾ, “ಈ ಟ್ರಾವೆಲ್ ಏಜೆನ್ಸಿಗಳು ಅಗತ್ಯ ಪರವಾನಗಿ ಮತ್ತು ಅನುಮತಿಗಳಿಲ್ಲದೆ ವಿದೇಶದಲ್ಲಿ ಉದ್ಯೋಗಗಳನ್ನು ಜಾಹೀರಾತು ಮಾಡುತ್ತಿವೆ. ನಾವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಪರಿಶೀಲಿಸಿದ್ದು, ಅವರ ದಾಖಲೆಗಳನ್ನು ರಹಸ್ಯವಾಗಿ ಪರಿಶೀಲಿಸಿದ್ದೇವೆ. ಇದರ ನಂತರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ.” ಎಂದು ಹೇಳಿದ್ದಾರೆ.
Cybercrime of Punjab Police ಅಮೃತಸರ, ಎಸ್‌ಎಎಸ್ ನಗರ, ಲುಧಿಯಾನ ಮತ್ತು ಪಟಿಯಾಲ ಸೇರಿದಂತೆ ಚಂಡೀಗಢದ ವಿವಿಧ ಎನ್‌ಆರ್‌ಐ ಪೊಲೀಸ್ ಠಾಣೆಗಳಲ್ಲಿ ಎಮಿಗ್ರೇಷನ್ ಕಾಯ್ದೆಗಳ ಸೆಕ್ಷನ್ 24/25 ರ ಅಡಿಯಲ್ಲಿ 18 ಹೊಸ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ದಾಖಲಾದ 18 ಎಫ್‌ಐಆರ್‌ಗಳಲ್ಲಿ ಆರು ಸೆಪ್ಟೆಂಬರ್‌ನಲ್ಲಿ ಮತ್ತು ಹನ್ನೆರಡು ಅಕ್ಟೋಬರ್‌ನಲ್ಲಿ ದಾಖಲಾಗಿವೆ.
ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ದಾಖಲಾದ 26 ಎಫ್‌ಐಆರ್‌ಗಳಲ್ಲಿ 34 ಆರೋಪಿಗಳ ಪೈಕಿ 25 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿನ್ಹಾ ಹೇಳಿದ್ದಾರೆ. “ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಮತ್ತು ಉಳಿದ ಆರೋಪಿ ಟ್ರಾವೆಲ್ ಏಜೆಂಟ್‌ಗಳಿಗೆ ನೋಟಿಸ್ ಕಳುಹಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ದಾಖಲೆಗಳು ಮತ್ತು ಹಣವನ್ನು ಕೊಡುವ ಮೊದಲು ಟ್ರಾವೆಲ್ ಏಜೆಂಟ್‌ಗಳ ದಾಖಲೆಗಳನ್ನು ಪರಿಶೀಲಿಸುವಂತೆ ಮತ್ತು ಜಾಗರೂಕರಾಗಿರುವಂತೆ ನಾಗರಿಕರಿಗೆ ಎಂದು ಸಿನ್ಹಾ ಹೇಳಿದ್ದಾರೆ.
“ಎಮಿಗ್ರೇಷನ್ ಆಕ್ಟ್, 1983 ರ ಅಡಿಯಲ್ಲಿ ಮಾನ್ಯವಾದ ನೇಮಕಾತಿ ಏಜೆಂಟ್ (RA) ಪರವಾನಗಿ ಇರುವ ಏಜೆನ್ಸಿಗಳೊಂದಿಗೆ ತೊಡಗಿಸಿಕೊಳ್ಳಿ. ಯಾವಾಗಲೂ ಕಾಯಿದೆಯ ಅಡಿಯಲ್ಲಿ ನೀಡಲಾದ ಏಜೆನ್ಸಿಯ ಪರವಾನಗಿಯನ್ನು ಕೇಳಿ. ಟ್ರಾವೆಲ್ ಏಜೆಂಟ್‌ಗಳನ್ನು ತೊಡಗಿಸಿಕೊಳ್ಳುವಾಗ ‘ಪರಿಶೀಲಿಸಿ ಮತ್ತು ನಂತರ ನಂಬಿ’ ಎಂಬುದು ಕೆಲಸದ ತತ್ವವಾಗಿರಬೇಕು” ಅವರು ಹೇಳಿದ್ದಾರೆ.
Cybercrime of Punjab Police ವಿದೇಶಗಳಲ್ಲಿ ಉದ್ಯೋಗವಕಾಶ ಜಾಹಿರಾತು: 18 ಕಾನೂನುಬಾಹಿರ ಟ್ರಾವೆಲ್ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲು
Date: