Shivamogga Dasara ಜೋರು ಮಳೆಯ ನಡುವೆ ಶಿವಮೊಗ್ಗ ದಸರಾದಲ್ಲಿ ಅಂಬು ಛೇದನ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್ ಗಿರೀಶ್ ಅವರು ಅಂಬು ಛೇದನ ಮಾಡಿದರು. ಬಳಿಕ ಪಟಾಕಿ ಸಿಡಿಸಲಾಯಿತು.
ಅಂಬು ಛೇದನಬದ ಬಳಿ ಜನರು ಘೋಷಣೆ ಕೂಗಿದರು. ಪರಸ್ಪರ ಬನ್ನಿ ಹಂಚಿಕೊಂಡು ದಸರಾ ಹಬ್ಬ ಶುಭಾಶಯ ವಿನಿಮಯ ಮಾಡಿಕೊಂಡರು.
ಇದೇ ವೇಳೆ ಬೃಹತ್ ರಾವಣನ ಪ್ರತಿಕೃತಿ ದಹಿಸಲಾಯಿತು.
ಶಿವಮೊಗ್ಗ ದಸರಾದ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗಿದೆ. ದಿಢೀರ್ ಶುರುವಾದ ಮಳೆಯಿಂದಾಗಿ ಜನರು ಕಾರ್ಯಕ್ರಮ ಬಿಟ್ಟು ತೆರಳುವಂತಾಯಿತು. ಕೆಲವರು ಛತ್ರಿ ಹಿಡಿದು ನಿಂತು ಅಂಬು ಛೇದನ ವೀಕ್ಷಿಸಿದರು. ನಗರದ ಫ್ರೀಡಂ ಪಾರ್ಕ್‌ನಲ್ಲಿ ಅಂಬು ಛೇದನ ಆಯೋಜಿಸಲಾಗಿತ್ತು.
ಈ ಸಂದರ್ಭ ಮಳೆಯಿಂದಾಗಿ ಜನರು ಗಲಿಬಿಲಿಗೊಂಡರು.
ಮೆರವಣಿಗೆ ವೇಳೆ ತುಂತುರು ಮಳೆ
Shivamogga Dasara ದಸರಾ ಮೆರವಣಿಗೆ ಜೈಲು ರಸ್ತೆಯಲ್ಲಿದ್ದಾಗ ದಟ್ಟವಾಗಿ ಮೋಡ ಕವಿದು, ತುಂತುರು ಮಳೆಯಾಗಿತ್ತು. ಕೆಲವೇ ನಿಮಿಷದಲ್ಲಿ ಮೋಡ ಸರಿದಂತಾಗಿತ್ತು. ಮಳೆ ಭೀತಿಯಿಂದಾಗಿ ಈ ಬಾರಿ ಅಂಬು ಛೇದನಕ್ಕೆ ಕಡಿಮೆ ಸಂಖ್ಯೆ ಜನ ಸೇರಿದ್ದರು.
ದಿಢೀರ್ ಮಳೆಗೆ ಜನರು ಗಲಿಬಿಲಿ:
ಅಂಬು ಛೇದನ ಕಾರ್ಯಕ್ರಮ ಮುನ್ನ ದಿಢೀರ್ ಮಳೆ ಸುರಿಯಿತು. ಜೋರು ಮಳೆಯಾಗುತ್ತಿದ್ದಂತೆ ತಕ್ಷಣ ಫ್ರೀಡಂ ಪಾರ್ಕ್‌ನಿಂದ ಹೊರ ನಡೆದರು. ಮಳೆಯಿಂದ ರಕ್ಷಣೆಗೆ ದಸರಾ ಕಾರ್ಯಕ್ರಮದ ಪೆಂಡಾಲ್, ಅಕ್ಕಪಕ್ಕದ ಕಟ್ಟಡಗಳ ಅಡಿ, ಉತ್ಸವ ಮೂರ್ತಿಗಳ ಟ್ರಾಕ್ಟರ್ ಕೆಳಗೆ ಕುಳಿತು ಜನರು ರಕ್ಷಣೆ ಪಡೆದರು. ಕೆಲವು ಛತ್ರಿ ಹಿಡಿದು ನಿಂತಿದ್ದರು.