Friday, March 27, 2026
Friday, March 27, 2026

Shikaripura Ulli Foundation ಪೌರ ಕಾರ್ಮಿಕರಿಗೆ ಸಿಹಿ- ಕೊಡುಗೆ ವಿತರಿಸಿ ಮಾಜಿ ಶಾಸಕರ ಜನ್ಮದಿನ ಆಚರಣೆ

Date:

Shikaripura Ulli Foundation ಶಿಕಾರಿಪುರ ಉಳ್ಳಿ ಫೌಂಡೇಶನ್ ವತಿಯಿಂದ ಪೌರಕಾರ್ಮಿಕರಿಗೆ ಸೀರೆ ಹಾಗೂ ಸಿಹಿ ವಿತರಿಸುವ ಮೂಲಕ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರು ಹಾಗು ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್ ಪ್ರಸನ್ನಕುಮಾರ್ ರವರ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು.

ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರು ಹಾಗು ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್.ಪ್ರಸನ್ನಕುಮಾರ್ ರವರ ಹುಟ್ಟು ಹಬ್ಬದ ಅಂಗವಾಗಿ ಶಿಕಾರಿಪುರ ಪುರಸಭೆಯ ಪೌರ-ಕಾರ್ಮಿಕರಿಂದ ಕೇಕ್ ಕತ್ತರಿಸಿ ಸುಮಾರು 35ಜನ ಮಹಿಳಾ ಪೌರಕಾರ್ಮಿಕರಿಗೆ ಸೀರೆ ಹಾಗು ಸಿಹಿ ವಿತರಿಸಿ ಮಾತನಾಡಿದ ಉಳ್ಳಿ ಫೌಂಡೇಶನ್ ಅದ್ಯಕ್ಷರಾದ ಉಳ್ಳಿ ದರ್ಶನ್ ರವರು, ಪ್ರತಿನಿತ್ಯ ಪಟ್ಟಣವನ್ನು ಸ್ವಚ್ಚವಾಗಿ ಇಡುವ ಹಾಗೂ ಕರೋನಾ ಸಂಧರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡಿದ ಅವರ ಕಾರ್ಯ ಶ್ಲಾಘನೀಯ ಆದ್ದರಿಂದ ನಮ್ಮ ನಾಯಕರು, ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್ ರವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದ್ದು, ಸರಳ ಸಜ್ಜನ ವ್ಯಕ್ತಿತ್ವದವರಾದ ಅವರ ಕೊಡುಗೆ ಶಿಕಾರಿಪುರಕ್ಕೆ ಅಮೂಲ್ಯವಾದದ್ದು, ಆ ದೇವರು ಅವರಿಗೆ ಆಯುರ್-ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು.

Shikaripura Ulli Foundation ಕೆಪಿಸಿಸಿ ಸದಸ್ಯರು, ನಿಕಟಪೂರ್ವ ಕಾಂಗ್ರೆಸ್ ಅಭ್ಯರ್ಥಿಗಳಾದ ಗೋಣೆ ಮಾಲತೇಶ್ ರವರು ಮಾತನಾಡಿ ನಮ್ಮ ನಾಯಕರಾದ ಆರ್.ಪ್ರಸನ್ನಕುಮಾರ್ ರವರು ನಗರಸಭಾ ಅದ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾಗಿ, ವಿಧಾನಪರಿಷತ್ ಶಾಸಕರಾದರೂ ಕೂಡ ಕಿಂಚಿತ್ತು ಅಹಂ ಅನ್ನು ತೋರಿಸದೇ ಸಾಮಾನ್ಯ ಕಾರ್ಯಕರ್ತರಿಗೂ ಸ್ಪಂದಿಸುವ ವ್ಯಕ್ತಿ, ಅವರಿಗೆ ಆ ದೇವರು ಇನ್ನೂ ಹೆಚ್ಚಿನ ಅಧಿಕಾರ, ಆರೋಗ್ಯ ನೀಡಲಿ ಎಂದರು.

ಈ ಸಂದರ್ಭದಲ್ಲಿ ಮಾಜಿ ತಾಂಡಾ ಅಭಿವೃದ್ದಿ ನಿಗಮದ ಸದಸ್ಯರಾದ ಶಿವು ನಾಯಕ್, ಬುಡೇನ್ ಸಾಬ್, ಸ.ನಾ.ಮಂಜಪ್ಪ, ನಗರದ ಮಾಲತೇಶ್, ಗುಡ್ಡಳ್ಳಿ ಸಂತೋಷ್, ಶಶಾಂಕ್, ಸಂತೋಷ್ ಮಡಿವಾಳ್, ಪ್ರದೀಪ್ ಮುಂತಾದ ಮುಖಂಡರು ಹಾಗೂ ಪುರಸಭೆಯ ಅಧಿಕಾರಿಯಾದ ರಾಜಕುಮಾರ್, ನವೀನ್ ಹಾಗು ಪೌರಕಾರ್ಮಿಕರು ಪಾಲ್ಗೊಂಡಿದ್ದರು..

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MADHU BANGARAPPA ಶಿಕ್ಷಣದಲ್ಲಿ ಹಿಂದಿ ಹೇರಿಕೆ ವಿರೋಧ ಮತ್ತು ‘ಪಾಸ್ ವಿಥೌಟ್ ಹಿಂದಿ’ ಜಾರಿ ಕುರಿತು ಚರ್ಚೆ

MADHU BANGARAPPA ರಾಜ್ಯದ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಮಂತ್ರಿಗಳಾದ ಮಧುಬಂಗಾರಪ್ಪ...

Morarji Desai Residential School ಜಿಲ್ಲೆಯ ಮೊರಾರ್ಜಿ ದೇಸಾಯಿ‌ ವಸತಿ ಶಾಲೆ 6 ನೆ ತರಗತಿಗೆ ಪ್ರವೇಶ ಪರೀಕ್ಷೆ.

Morarji Desai Residential School ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ...

Mylaralingeshwara Temple Shimoga ಮಾರ್ಚ್ 29. ಮೈಲಾರೇಶ್ವರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

Mylaralingeshwara Temple in Shimoga ಶಿವಮೊಗ್ಗ ನಗರದಲ್ಲಿನ ಶ್ರೀ ಮೈಲಾರೇಶ್ವರ ದೇವಸ್ಥಾನನಲ್ಲಿ...

Online shopping ಆನ್ ಲೈನ್ ಶಾಪಿಂಗ್ ಬಗ್ಗೆ ಬಹಳ ಜಾಗರೂಕರು ಹಾಗು ಜಾಣರಾಗಿರಿ- ಟಿ.ಶಿವಣ್ಣ.

Online shopping ಇತ್ತೀಚಿನ ಕಾಲಮಾನದಲ್ಲಿ ಆನ್‌ಲೈನ್ ಶಾಪಿಂಗ್ ಹೆಚ್ಚುತ್ತಿದೆ. ಆನ್‌ಲೈನ್ ಶಾಪಿಂಗ್...