ಲೇ; ಎನ್.ಜಯಭೀಮ ಜೊಯಿಸ್. ಶಿವಮೊಗ್ಗ
Navaratri Festival ವಂದೇ ವಾಂಛಿತ ಲಾಭಾಯ
ಚಂದ್ರಾರ್ಧಕೃತಶೇಖರಂ/
ವೃಷಾರೂಢಂ ಶೂಲಧರಾಂ
ಶೈಲಪುತ್ರೀಂ ಯಶಸ್ವಿನೀಂ//
ಇಂದು ಶರನ್ನವರಾತ್ರಿ ಹಬ್ಬದ ಮೊದಲನೆಯ ದಿನ. ಈದಿನ ದುರ್ಗಾಮಾತೆಯನ್ನು ಶೈಲಪುತ್ರಿದೇವಿ ಎಂಬ
ರೂಪದಿಂದ ಆರಾಧಿಸಲಾಗುತ್ತದೆ. ದೇವಿಯು ಕೈಯಲ್ಲಿ ತ್ರಿಶೂಲ ಮತ್ತು ಕಮಲವನ್ನು ಹಿಡಿದು ಎತ್ತನ್ನು ವಾಹನವನ್ನಾಗಿ ಮಾಡಿಕೊಂಡಿದ್ದಾಳೆ. ಪರ್ವತರಾಜ ಹಿಮವಂತನ ಪುತ್ರಿಯಾದ್ದರಿಂದ ಈಕೆಯನ್ನು ಶೈಲಪುತ್ರಿ ಎಂದು ಕರೆಯುತ್ತಾರೆ. ಸುಂದರ ಮತ್ತು ಸೌಮ್ಯ ರೂಪ ಶೈಲಪುತ್ರಿದೇವಿಯದು. ಶಿವ ಪುರಾಣದ ಪ್ರಕಾರ,ಸತಿದೇವಿ ದಕ್ಷಪ್ರಜಾಪತಿಯ
ಯಜ್ಞಕುಂಡಕ್ಕೆ ಹಾರಿ ಮುಂದಿನ ಜನ್ಮದಲ್ಲಿ ಶೈಲರಾಜ ಹಿಮವಂತನಿಗೆ ಮಗಳಾಗಿ ಜನಿಸಿ ಶೈಲಪುತ್ರಿ ಎಂದು
ಹೆಸರು ಪಡೆದಳು.
Navaratri Festival ಕಠಿಣ ತಪಸ್ಸು ಮಾಡಿ ಶಿವನೊಂದಿಗೆ ಮದುವೆಯಾದಳು.ಅಸುರರಿಂದ ತೊಂದರೆ ಅನುಭವಿಸುತ್ತಿದ್ದ ದೇವಾನುದೇವತೆಗಳಿಗೆ ಅಭಯ ಹಸ್ತ ನೀಡಿದವಳೇ ಶೈಲಪುತ್ರಿದೇವಿ. ನವರಾತ್ರಿ ಹಬ್ಬದ ಮೊದಲನೆಯ ದಿನ ಶೈಲಪುತ್ರಿದೇವಿಯನ್ನು ಶ್ರದ್ಧಾ,ಭಕ್ತಿಯಿಂದ ಆರಾಧಿಸಿದರೆ ದೇವಿಯು ಭಕ್ತರಿಗೆ ವಿಶೇಷ ಶಕ್ತಿಯನ್ನು ಕರುಣಿಸುತ್ತಾಳೆ ಎಂಬ ದೃಢವಾದ ನಂಬಿಕೆ ಇದೆ.
ಇಂತಹ ಅಭಯಕೊಟ್ಟು ಕಾಪಾಡುವ ಶೈಲಪುತ್ರಿ ದೇವಿಯನ್ನು ನಾವು ಭಕ್ತಿಯಿಂದ ಆರಾಧಿಸಿ,ಪೂಜೆ ಸಲ್ಲಿಸಿ,ತಾಯಿಯ ಅನುಗ್ರಹವನ್ನು ಪಡೆಯೋಣ.