Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ ದಸರಾಕ್ಕೆ’ ಕ್ಷಣಗಣನೆ ಪ್ರಾರಾಭವಾಗಿದ್ದು, ನಾಡದೇವತೆ ತಾಯಿ ಶ್ರೀ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿ ಹೊರುವ ಆನೆಗಳಿಗೆ ಅಧಿಕೃತ ಆಹ್ವಾನ ನೀಡಲಾಯಿತು.
Shivamogga Dasara ಶಿವಮೊಗ್ಗದ ಸಕ್ಕರೆ ಬೈಲಿ ನಲ್ಲಿರುವ ಆನೆ ಬಿಡಾರದಲ್ಲಿ ಮಹಾನಗರಪಾಲಿಕೆ ವತಿಯಿಂದ ನಡೆಯುವ ದಸರಾ ಮಹೋತ್ಸವಕ್ಕೆ ಅಧಿಕೃತ ಆಹ್ವಾನ ನೀಡಿ, ಅಂಬಾರಿ ಹೊರುವ ಸಾಗರ್ ಆನೆಗೆ ಹಾಗೂ ಜೊತೆಯಲ್ಲಿ ಸಾತ್ ನೀಡಲಿರುವ ಬಹದ್ದೂರ್ ಹಾಗೂ ಬಾಲಣ್ಣ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇನ್ನು ಸುಮಾರು 650 ಕೆಜಿ ಇರುವ ಬೆಳ್ಳಿಯ ಅಂಬಾರಿಯನ್ನು ಹೊರಲಿರುವ ಸಾಗರ್ ಆನೆಯ ಜೊತೆಯಲ್ಲಿ ಈ ಬಾರಿ ಜಂಬೂಸವಾರಿಯಲ್ಲಿ ಕೇವಲ ಗಂಡು ಆನೆಗಳ ಬಳಕೆ ವಿಶೇಷ. ಹಾಗಾಗಿಯೇ, ಆನೆಗಳಿಗೆ ನಾಳೆಯಿಂದಲೇ ತಾಲೀಮು ನಡೆಸಲು ನಿರ್ಧಾರ ಮಾಡಲಾಯಿತು. ಈ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪಾಲಿಕೆಯ ಮಾಜಿ ಸದಸ್ಯರುಗಳು ಉಪಸ್ಥಿತರಿದ್ದರು.