Friday, November 22, 2024
Friday, November 22, 2024

Youth Empowerment and Sports ಸುತ್ತಮುತ್ತಲ ಪ್ರದೇಶದ ಸ್ಬಚ್ಛತೆ ನಮ್ಮ ಜವಾಬ್ದಾರಿ- ಶಾಸಕ ಚನ್ನಬಸಪ್ಪ

Date:

 Youth Empowerment and Sports ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರದಾದ್ಯಂತ ಮೈ ಭಾರತ್ ಯೋಜನೆಯಡಿಯಲ್ಲಿ ಸ್ವಚ್ಛ ಭಾರತ್ ಮಿಷನ್- ನಯಾ ಸಂಕಲ್ಪದ, ಸ್ವಭಾವ್ ಸ್ವಚ್ಛತಾ, ಸಂಸ್ಕಾರ್ ಸ್ವಚ್ಛತೆ ಎಂಬ ಶೀರ್ಷಿಕೆಯಡಿಯಲ್ಲಿ ಅಕ್ಟೊಬರ್ 2 ರಂದು ಗಾಂಧಿ ಜಯಂತಿಯ ಪ್ರಯುಕ್ತ ಸೆಪ್ಟೆಂಬರ್ 17 ರಿಂದ 2ನೇ ಅಕ್ಟೋಬರ್ 2024 ವರೆಗೆ ಹಮ್ಮಿಕೊಳ್ಳಲಾಗಿದ್ದು,ಈ ಸಂದರ್ಭದಲ್ಲಿ ಜಿಲ್ಲಾಡಳಿತ, ಮಹಾನಗರಪಾಲಿಕೆ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ ಶಿವಮೊಗ್ಗ,ಪಶುವೈದ್ಯಕೀಯ ಮಹಾವಿದ್ಯಾಲಯ, ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜು, ನಂಜಪ್ಪ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್,ಶಿವಮೊಗ್ಗ, ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್,ಗೋಪಾಳ, ಮಲೆನಾಡು ಕಲಾ ತಂಡ, ವಿವೇಕಾನಂದ ಯೂತ್ ಫೌಂಡೇಶನ್,ಶಿವಮೊಗ್ಗಇವರ ಸಹಯೋಗದೊಂದಿಗೆ ದಿನಾಂಕ 01.10.2024 ರಂದು” ಸ್ವಚ್ಛತ ಹೀ ಸೇವಾ ” ಕಾರ್ಯಕ್ರಮವನ್ನು ಆಲ್ಕೊಳ ಸರ್ಕಲ್ನ ಗಾಡಿಕೊಪ್ಪದಲ್ಲಿ ಹಮ್ಮಿಕೊಂಡಿದ್ದು,ಈ ಸ್ವಚ್ಛತಾ ಅಭಿಯಾನದಲ್ಲಿ ನಮ್ಮ ಶಿವಮೊಗ್ಗ ನಗರದ ಗೌರವಾನ್ವಿತ ಶಾಸಕರಾದ ಶ್ರೀ. ಚನ್ನಬಸಪ್ಪ ಎಸ್.ಎನ್. (ಚೆನ್ನಿ) . ರವರು ಭಾಗವಹಿಸಿ ಚಾಲನೆ ನೀಡಿದರು.  Youth Empowerment and Sports ಹಾಗೂ ಸ್ವಚ್ಛತೆಯ ಬಗ್ಗೆ, ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಬ್ದಾರಿ ಎಂದು ತಿಳಿಸಿದರು. ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸುಮಾರು 250 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಲ್ಗೊಳ ಸರ್ಕಲ್ ನಿಂದ ನಂಜಪ್ಪ ಲೈಫ್ ಕೇರ್ ತನಕ ಮತ್ತು ಕೋಸ್ಮಾ ಕ್ಲಬ್ ನಿಂದ ನಂಜಪ್ಪ ಲೈಫ್ ಕೇರ್ ತನಕ ಎರಡು ತಂಡಗಳಾಗಿ ಸುಮಾರು 2.5 ಕೀ.ಮಿ ತನಕ ಅಭಿಯಾನವನ್ನು ನಡೆಸಲಾಯಿತು. ಈ ಅಭಿಯಾನದಲ್ಲಿ ನೆಹರು ಯುವ ಕೇಂದ್ರದ, ಜಿಲ್ಲಾ ಯುವ ಅಧಿಕಾರಿಯಾದ ಶ್ರೀ.ಉಲ್ಲಾಸ್ ಕೆ.ಟಿ.ಕೆ ಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಯುವಜನ ಮತ್ತು ಕ್ರೀಡಾ ಇಲಾಖೆಯ, ಸಹಾಯಕ ನಿರ್ದೇಶಕರಾದ, ಶ್ರೀ. ರೇಕ್ಯಾ ನಾಯಕ್, ಪಶುವೈದ್ಯಕೀಯ ಕಾಲೇಜಿನ ಎನ್. ಎಸ್. ಎಸ್. ಅಧಿಕಾರಿಗಳಾದ ಪ್ರೊ.ರವಿಕುಮಾರ್ ಮತ್ತು ಪ್ರೊ. ಯೋಗೇಶ್,ನಂಜಪ್ಪ ಫಿಸಿಯೋಥೆರಪಿ ಇನ್ಸ್ಟಿಟ್ಯೂಟ್ನ ಪ್ರಾಂಶುಪಾಲರಾದ ಶ್ರೀ. ರಾಜನ್, ಕಟೀಲು ಅಶೋಕ್ ಪೈ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ. ಸಂಧ್ಯಾಕಾವೇರಿಯವರು, NSS ಅಧಿಕಾರಿ ಡಾ. ಸುಗೀರ್ದಿ, ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ನ ಪ್ರಾಂಶುಪಾಲರಾದ ಶ್ರೀ. ಆರ್. ಸುನೀಲ್, NSS ಅಧಿಕಾರಿಯಾದ ಶ್ರೀಮತಿ. ಜ್ಯೋತಿ ಮತ್ತು ಸಿಬ್ಬಂದಿವರ್ಗದವರು, ಮಲೆನಾಡು ಕಲಾತಂಡದ ಅಧ್ಯಕ್ಷರಾದ ಶ್ರೀ. ಗಣೇಶ್ ಕೆಂಚನಾಲ್ ಮತ್ತು ತಂಡದ ಸದಸ್ಯರುಗಳು, ವಿವೇಕಾನಂದ ಯೂತ್ ಫೌಂಡೇಶನ್ನ ಸದಸ್ಯರುಗಳು, ಮತ್ತು ನೆಹರು ಯವ ಕೇಂದ್ರದ ಲೆಕ್ಕಾಧಿಕಾರಿಯಾದ ಶ್ರಿ. ರಮೇಶ್, ಸ್ವಯಂಸೇವಕರುಗಳು ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...

M.B.Patil 2025 ಫೆಬ್ರವರಿ 11.ಜಾಗತಿಕ ಹೂಡಿಕೆದಾರರ ಸಮಾವೇಶ.ಪೂರ್ವಸಿದ್ಧತೆ- ಸಚಿವ ಎಂ.ಬಿ.ಪಾಟೀಲ್

M.B.Patil 2025ರ ಫೆಬ್ರವರಿ 11 ರಿಂದ 14ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ...