Gandhi Jayanthi ರಾಮ ರಾಜ್ಯದ ಕನಸು ನನಸಾಗಿಸಲು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಅಹಿಂಸಾ ಮಾರ್ಗ, ಸರಳ ಜೀವನ ಶೈಲಿಯ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕೆಪಿ ಬಿಂದು ಕುಮಾರ್ ಹೇಳಿದರು.
ಶಿವಮೊಗ್ಗ ನಗರದ ಬಿ.ಎಚ್.ರಸ್ತೆಯಲ್ಲಿರುವ ಸ್ಕೌಟ್ ಭವನದಲ್ಲಿ ಗಾಂಧೀಜಿ ಯವರ 155 ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ 125 ಜಯಂತಿ ಪ್ರಯಕ್ತ ಹಮ್ಮಿಕೊಳ್ಳಲಾದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶ ಕಂಡ ಮಹಾನ್ ಸರಳ ವ್ಯಕ್ತಿ ಗಾಂಧೀಜಿ, ದೇಶದ ಸ್ವಾತಂತ್ರ್ಯಕ್ಕೆ ನೀಡಿದ ಕೊಡುಗೆ ಅಪಾರ ಎಂದು ತಿಳಿಸಿದರು.
ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಹೋರಾಟಗಾರರ ತ್ಯಾಗ ಬಲಿದಾನದ ಯಶೋಗಾಥೆಗಳನ್ನು ಮಕ್ಕಳಿಗೆ ತಿಳಿಸಬೇಕು. ದೇಶಪ್ರೇಮದಿಂದ ಜೀವನ ನಡೆಸುವ ಮಹತ್ವದ ಅರಿವು ಮೂಡಿಸಬೇಕು. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಜ್ಞಾನ ವೃದ್ಧಿಯಾಗುತ್ತದೆ. ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟು ಸತ್ಯಾಗ್ರಹಗಳ ರೂಪದಲ್ಲಿ ಹೋರಾಟವನ್ನು ನಡೆಸಿ ಅಹಿಂಸೆಯ ಮಾರ್ಗಸೂಚಿಯನ್ನ ಪ್ರಪಂಚಕ್ಕೆ ಹಾಕಿಕೊಟ್ಟಂತಹ ಏಕೈಕ ಮಹಾತ್ಮ ಅಂದರೆ ನಮ್ಮ ಗಾಂಧೀಜಿ ಎಂದರು.
Gandhi Jayanthi ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜೀವನ ಶೈಲಿ ಎಲ್ಲರಿಗೂ ಮಾರ್ಗದರ್ಶನ. ಬದುಕಿನಲ್ಲಿ ಪಾಲಿಸುತ್ತಿದ್ದ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ದೇಶಕ್ಕಾಗಿ ಜೀವನ ನಡೆಸಿದ ರೀತಿ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಅವರು ಗಾಂಧೀಜಿ ಜೀವನ ಚರಿತ್ರೆ ಕುರಿತು ಮಕ್ಕಳಿಗೆ ಸಮಗ್ರವಾಗಿ ವಿವರಿಸಿದರು.
ಅವರು ಸರ್ವಧರ್ಮ ಪ್ರಾರ್ಥನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸ್ಥಾನಕ್ಕೆ ಆಯುಕ್ತರಾದ. ಜಿ ವಿಜಯಕುಮಾರ್ ಅವರು ಮಾತನಾಡುತ್ತ. ಮಕ್ಕಳಲ್ಲಿ ರಾಷ್ಟ್ರಭಕ್ತಿ ಹೆಚ್ಚಾಗಬೇಕು ಇತಿಹಾಸದ ಬಗ್ಗೆ ಅರಿವು ಇರಬೇಕು. ತ್ಯಾಗ ಬಲಿದಾನದಿಂದ ಸಿಕ್ಕ ಸ್ವಾತಂತ್ರ ವನ್ನು ನಾವು ಗೌರವಿಸಿ. ಅವರ ಗುಣಗಳನ್ನು ಪಾಲನೆ ಮಾಡಬೇಕು ಎಂದು ನುಡಿದರು
ಜಿಲ್ಲಾ ಸ್ಕೌಟ್ ಆಯುಕ್ತ ಎಸ್ ಜಿ ಆನಂದ್ , , ಸಹ ಕಾರ್ಯದರ್ಶಿ ವೈ.ಆರ್.ವಿರೇಶಪ್ಪ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್‌ಕುಮಾರ್,.. ಖಜಾಂಚಿ ಚೌಡಮಣಿ ಈ ಪವರ್.
ಸಿ ಎಸ್ ಕಾತ್ಯಾಯಿನಿ. ಶಿವಶಂಕರ್.ಮಲ್ಲಿಕಾರ್ಜುನ ಕಾನೂರು , ಶಿಕ್ಷಕರರು ಮಕ್ಕಳು ಉಪಸ್ಥಿತರಿದ್ದರು