Karnataka State Farmers Association ಶಿವಮೊಗ್ಗ ನಗರದ ಅಂಚಿನಲ್ಲಿರುವ ಪುರದಾಳ್ ಆಲದೇವರ ಹೊಸೂರು ಗ್ರಾಮದಲ್ಲಿ ರೈತ ಹನುಮಂತಪ್ಪ ದಾಸಣ್ಣನವರು ಜಮೀನಿನಲ್ಲಿ ಕೆಲಸ ಮಾಡುವಾಗ ಆನೆ ದಾಳಿ ಮಾಡಿ ಕೊಂದು ಹಾಕಿದ್ದು ಇವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕು. ಪುರದಾಳ್, ಬೇಳೂರು ಹಾಗೂ ತಮ್ಮಡಿಹಳ್ಳಿ, ಸುತ್ತಮುತ್ತ ಗ್ರಾಮಗಳಲ್ಲಿ ಆನೆಗಳಲ್ಲಿ ಗುಂಪಾಗಿ ಬಂದು ಬೆಳೆನಾಶ ಮಾಡಿರುವುದಕ್ಕೆ ಪರಿಹಾರ ಕೊಡುವುದು. ಆನೆಗಳನ್ನು ಗ್ರಾಮಗಳಿಗೆ, ರೈತನ ಹೊಲಗಳಿಗೆ ಬರದಂತೆ ತಡೆಯಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪುರದಾಳು ಗ್ರಾಮದ ಹನುಮಂತಪ್ಪ ದಾಸಣ್ಣನವರು ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಆನೆ ಆತನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಅರಣ್ಯ ಇಲಾಖೆಯವರು ಈತನ ಕುಟುಂಬಕ್ಕೆ ಸರ್ಕಾರ ನಿಗಧಿ ಮಾಡಿರುವಂತೆ 25 ಲಕ್ಷ ರೂ. ಪರಿಹಾರವನ್ನು ತಕ್ಷಣ ಕೊಡಬೇಕು. ಗುಂಪಾಗಿ ರೈತನ ಜಮೀನಿನ ಮೇಲೆ ದಾಳಿ ಮಾಡುತ್ತಿದ್ದು, ರೈತನು ಬೆಳೆದ ಬೆಳೆಗಳು ಮೆಕ್ಕಜೋಳ, ಬಾಳೆ, ಅಡಿಕೆ ನಾಶ ಪಡಿಸಿ ರೈತನಿಗೆ ಅಪಾರ ನಷ್ಟ ಉಂಟು ಮಾಡುತ್ತಿವೆ ಎಂದರು.
Karnataka State Farmers Association ಕೆಲವು ಗ್ರಾಮಗಳಿಗೆ ನುಗ್ಗಿದ ಉದಾಹರಣೆಗಳು ಸಹ ಇವೆ. ಈ ’ರೀತಿಯಾಗಿ ಪದೇ ಪದೇ ದಾಳಿ ಮಾಡುತ್ತಿರುವುದರಿಂದ ರೈತರು ಜೀವನ ಮರಣದ ಭಯದಿಂದ ಆತಂಕದಿಂದ ಬದುಕುತ್ತಿದ್ದಾರೆ. ಆದ್ದರಿಂದ ತಕ್ಷಣ ಇವರಿಗೆ ರಕ್ಷಣೆ ಒದಗಿಸುವುದರ ಜೊತೆಗೆ ಸೂಕ್ತ ಬೆಳೆ ನಷ್ಟ ಪರಿಹಾರವನ್ನು ಕೊಡಬೇಕು ಮತ್ತು ಜಮೀನಿಗೆ ಗ್ರಾಮದೊಳಗೆ ಆನೆಗಳು ಬಾರದ ಹಾಗೆ ತಡೆಯಬೇಕು. ತತಕ್ಷಣದಿಂದ ಇವುಗಳನ್ನು ಕಾಡಿ ಕಳುಹಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಕಾಡು ಪ್ರಾಣಿಗಳೂ ಮತ್ತು ಮಾನವನ ಮಧ್ಯೆ ಇತ್ತಿಚಿನ ದಿನಗಳಲ್ಲಿ ಸಂಘರ್ಷ ನಡೆಯುತ್ತಲೇ ಇದೆ. ಬಗ್ಗೆ ರೈತ ಸಂಘ ಸರ್ಕಾರದ ಜೊತೆ ಮಾತುಕತೆ ನಡೆಸಿ, ಒತ್ತಾಯ ಮಾಡಲಾಗಿದೆ.