Shivamogga Karnataka Sanga ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲದಿಂದ ನಾನು ಯಶಸ್ವಿಯಾಗಿ ಮೂರು ವರ್ಷಗಳ ಕಾಲ ಕರ್ನಾಟಕ ಸಂಘದ ಅಧ್ಯಕ್ಷನಾಗಿ ಕೆಲಸ ನಿರ್ವಹಿಸುಬಂತಾಯಿತು. ಅದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ಶಿವಮೊಗ್ಗ ಕರ್ನಾಟಕ ಸಂಘದ ನಿರ್ಗಮಿತ ಅಧ್ಯಕ್ಷರಾದ ಎಂ.ಎನ್. ಸುಂದರರಾಜ್ ಅವರು ತಿಳಿಸಿದ್ದಾರೆ. ಮೂರು ವರ್ಷಗಳಲ್ಲಿ ನಡೆದ ಕಾರ್ಯಗಳ ಸಂಕ್ಷಿಪ್ತ ವರದಿ ಇಲ್ಲಿದೆ.
- ೩೬ ಸಾಹಿತಿಗಳಿಗೆ ಪುಸ್ತಕ ಬಹುಮಾನ
- ರಾಜ್ಯೋತ್ಸವ ಪ್ರಶಸ್ತಿ ಸೇರಿ ಮೂರು ರಾಜ್ಯಮಟ್ಟದ ಪ್ರಶಸ್ತಿ
- ೧೯ ಸಿಸಿ ಕ್ಯಾಮರಾಗಳ ಅಳವಡಿಕೆ
- ೨೩ ತಿಂಗಳ ಅತಿಥಿ ಕಾರ್ಯಕ್ರಮ
- ಮೂರು ಚಿತ್ರಕಲಾ ಪ್ರದರ್ಶನ
- ವೇದಿಕೆಯ ಎರಡೂ ಬದಿ ತೈಲ ವರ್ಣ ಚಿತ್ರ
- ಇಡೀ ಕಟ್ಟಡದ ಬಣ್ಣ ಲೇಪನ
- ಕರ್ನಾಟಕ ಸಂಘದ ಹೆಸರಿನ ವಿದ್ಯುತ್ ಫಲಕ ಅಳವಡಿಕೆ
- ಆಕಾಶವಾಣಿಯ ಕನ್ನಡ ಕಜ್ಜಾಯ ಕಾರ್ಯಕ್ರಮದಲ್ಲಿ ಸಂಘದ ಕುರಿತು ವಿಶೇಷ ಕಾರ್ಯಕ್ರಮ
- ದೂರದರ್ಶನ ಚಂದನದಲ್ಲಿ ಸಂದರ್ಶನ ಪ್ರಸಾರ
- ೩೫ ರಾಜ್ಯಮಟ್ಟದ ಸಾಹಿತಿಗಳು ಮತ್ತು ಕಲಾವಿದರನ್ನು ಆಹ್ವಾನಿಸಲಾಗಿದೆ
- ೫ ಸಂಗೀತ ಕಾರ್ಯಕ್ರಮ
- ಎರಡು ನಾಟಕ ಪ್ರದರ್ಶನ
- ಹತ್ತು ಸಂಘ ಸಂಸ್ಥೆಗಳ ಸಹಯೋಗ
- ಮೂರು ವಿಚಾರ ಸಂಕಿರಣ ಗಳು
- ಕಾವ್ಯ- ಕಥನ ಗೋಷ್ಠಿ
- ಐದು ಹಿರಿಯ ಸಾಹಿತಿಗಳಿಗೆ ಜೀವಮಾನ ಸಾಧನೆ ಪ್ರಶಸ್ತಿ
- ರಾಜ್ಯೋತ್ಸವದ ಸಮಯದಲ್ಲಿ ನೀಡಿದ ಐದು ಲಕ್ಷ ರೂ.ನ್ನು ಇಡುಗಂಟಾಗಿ ಇಟ್ಟು ಅದರಲ್ಲಿ ಬರುವ ಬಡ್ಡಿಯಿಂದ ಪ್ರತಿವರ್ಷ ಇಬ್ಬರು ವ್ಯಕ್ತಿ ಅಥವಾ ಸಂಸ್ಥೆ ಗೆ ನಗದು ಪುರಸ್ಕಾರ ಮತ್ತು ಸನ್ಮಾನ.
- ಸಿಬ್ಬಂದಿಗೆ ಸೇವಾ ಭದ್ರತೆ
- ಇಷ್ಟೆಲ್ಲ ಕಾರ್ಯಕ್ರಮ ಮಾಡಲು ನೆರವಾದ ತಮಗೆ ಹೃತ್ಪೂರ್ವಕ ವಂದನೆಗಳು.