Aayanur Manjunatha ನೈತಿಕತೆ ಇಲ್ಲದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಕೇಳುತ್ತಿದ್ದಾರೆ. ತನಿಖೆಗಷ್ಟೇ ಹೈಕೋರ್ಟ್ ಅನುಮೋದನೆ ನೀಡಿದೆ ಹೊರತು ಅಪರಾಧಿ ಎಂದು ಹೇಳಿಲ್ಲ. ಇದನ್ನು ಅರಿಯದೆ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.
ಇಲ್ಲಿನ ಗಾಂಧಿ ಪಾರ್ಕಿನಲ್ಲಿ ಗುರುವಾರ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಜಿಲ್ಲಾ ಕಾಂಗ್ರೆಸ್ ಏರ್ಪಡಿಸಿದ್ದ ಸಿದ್ದರಾಮಯ್ಯ ಅವರಿಗೆ ಬೆಂಬಲ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಮೂರು ಮುಖ್ಯಮಂತ್ರಿಗಳು ಅಪರಾಧಿಗಳಾಗಿ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ದೂರಿನ ಅನ್ವಯ ತನಿಖೆಗೆ ಅನುಮೋದನೆ ನೀಡಲಾಗಿದೆ ಹೊರತು ನೈತಿಕತೆಯ ಪಾಠ ಹೇಳುವ ಈ ನಾಯಕರಿಗೆ ಸಿಎಂಗೆ ನೋಟೀಸ್ ಸಹ ಬಂದಿಲ್ಲ ಎನ್ನುವುದು ಗೊತ್ತಿಲ್ಲ. ಯಾವ ಅಪರಾಧಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದರು.
Aayanur Manjunatha ಈ ಹಿಂದೆ ಹೈಕೋರ್ಟಿನಿಂದ ತನಿಖೆಗೆ ಒಳಗಾದವರು ಬಂಧನ ತಪ್ಪಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದರು. ಎಚ್ ಡಿ ಕುಮಾರಸ್ವಾಮಿ ಮತ್ತು ಬಿ ಎಸ್ ಯಡಿಯೂರಪ್ಪ ಬೆಂಗಳೂರಿನಲ್ಲಿ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ತನಿಖೆ ಎದುರಿಸುತ್ತಿದ್ದಾರೆ. ಆದರೆ ಇಬ್ಬರೂ ರಾಜೀನಾಮೆ ಕೊಟ್ಟಿಲ್ಲ . ಇದು ಮೂಡಾ ಹಗರಣಕ್ಕಿಂತ ದೊಡ್ಡದು. ಇದನ್ನು ಅರಿಯದ ಬಿಜೆಪಿ ನಾಯಕರು ಸಿಎಂ ರಾಜಿನಾಮೆ ಕೇಳುತ್ತಿದ್ದಾರೆ. ಅನಗತ್ಯ ಆರೋಪ ಮಾಡುತ್ತಿದ್ದಾರೆ. ಇಂತಹ ಕೆಲಸಕ್ಕಿಂತ ನಿಮ್ಮ ನಾಯಕರ ರಾಜೀನಾಮೆಯನ್ನು ಮೊದಲು ಪಡೆಯಿರಿ ಎಂದು ಹೇಳಿದರು.
Aayanur Manjunatha ನೈತಿಕತೆ ಇಲ್ಲದವರಿಂದ ರಾಜಿನಾಮೆಯ ಮಾತು: ಬಿಜೆಪಿ-ಜೆಡಿಎಸ್ ವಿರುದ್ದ ಹರಿಹಾಯ್ದ ಆಯನೂರು ಮಂಜುನಾಥ್
Date: