Wednesday, November 20, 2024
Wednesday, November 20, 2024

HS Sundaresh ಸೂಡಾದಿಂದ 16 ವರ್ಷಗಳ ಮಾಸ್ಟರ್ ಪ್ಲಾನ್, ಅಪಾರ್ಟ್ ಮೆಂಟ್ ನಿರ್ಮಾಣ

Date:

HS Sundaresh ಶಿವಮೊಗ್ಗ-ಭದ್ರಾವತಿಯ ಅಭಿವೃದ್ಧಿಗಾಗಿ ಮುಂದಿನ 16 ವರ್ಷಕ್ಕೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಇಜಿಎಸ್ ಸಂಸ್ಥೆಯ ಮೂಲಕ 2041 ರವರೆಗೆ ಅನ್ವಯವಾಗುವಂತೆ ಮಾಸ್ಟರ್ ಪ್ಲಾನ್ ತಯಾರಿಸುತ್ತಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸೂಡ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಮುಂದಿನ 16 ವರ್ಷಕ್ಕೆ ಜನ ಸಂಖ್ಯೆ ಎಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. 10 ಲಕ್ಷ ಜನ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದ್ದು. 7½ ಶಿವಮೊಗ್ಗ 2½ ಲಕ್ಷ ಜನ ಭದ್ರಾವತಿ ನಗರದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ. ಶಿಕ್ಷಣಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ ಶಾಲಾ ಕಾಲೇಜು‌ಗಳ ಅಭಿವೃದ್ಧಿಗೆ, ಆರೋಗ್ಯದಲ್ಲಿ ಆಸ್ಪತ್ರೆಗೆ ಒತ್ತು ನೀಡಲಾಗಿದೆ. ರಸ್ತೆಗಳಿಗೆ ಒತ್ತು ನೀಡಲಾಗಿದೆ. ಯಾವ ಯಾವ ಏರಿಯಾ ಒಳಪಡುವಂತಹದ್ದಲ್ಲಿ ದೊಡ್ಡರಸ್ತೆ ಯುಜಿಡಿ ರಚಿಸಲಾಗುತ್ತಿದೆ ಎಂದರು.
ರಿಂಗ್ ರಸ್ತೆ 12 ವರ್ಷ ಹಿಂದೆ ಆಗಿದೆ. ರೈಲ್ವೆ ಟ್ರಾಕ್ ನಲ್ಲಿ ವ್ಯವಸ್ಥೆ ಇರಲಿಲ್ಲ. ಈಗ ಸಮಗ್ರ ರಸ್ತೆ, ಒಳಚರಂಡಿ ಮತ್ತು ಮೂಲಭೂತ ಸೌಕರ್ಯಗಳನ್ನ ನಿರ್ಮಿಸಿಕೊಡಲಾಗುತ್ತಿದೆ. ವಾಜಪೇಯಿ ಲೇಔಟ್ ನಲ್ಲಿ 200 ಅಡಿ ರಸ್ತೆ ನಿರ್ಮಿಸಲಾಗುವುದು. ಮಾಸ್ಟರ್ ಪ್ಲಾನ್ ನಲ್ಲಿ ರಿಂಗ್ ರಸ್ತೆ, ಪ್ರವಾಸೋದ್ಯಮ, ದೇವಸ್ಥಾನ, ಜೋಗಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಉದ್ಯಾನವನದ ನಿರ್ಮಾಣವೂ ಇದರಲ್ಲಿ ಒಳಗೊಂಡಿದೆ. ಹೊಳೆ ಹನಸವಾಡಿ, ಜ್ಞಾನದೀಪ ಶಾಲೆಕಡೆ ಮಾಸ್ಟರ್ ಪ್ಲಾನ್ ಮಾಡಲಾಗುವುದು. ಊರಗಡೂರಿನಲ್ಲಿ ನಿರ್ಮಾಣಗೊಂಡಿರುವ ನಿವೇಶನಗಳಿಗೆ 7-8 ಸಾವಿರ ಅರ್ಜಿ ಬಂದಿದೆ. 437 ಸೈಟ್ ಇದೆ.. 60 ಎಕರೆಯಲ್ಲಿ ಸೈಟ್
HS Sundaresh ನಿರ್ಮಿಸಲಾಗಿದೆ. 179 ಸೈಟ್ ನಿವೇಶನಗಳಿಗೆ ನೀಡಿರುವ ರೈತರಿಗೆ ನೀಡಲಾಗುತ್ತಿದೆ ಎಂದರು.
ಊರುಗಡೂರಿನ ನಿವೇಶನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರಿಗೆ 9% ಜನರಲ್ ಗೆ 50% ಪತ್ರಕರ್ತರಿಗೆ ರಾಷ್ಟ್ರಪ್ರಶಸ್ತಿ ಪಡೆದವರಿಗೆ 5% ಅಂಗ ವಿಕಲರಿಗೆ 3% ಹಿರಿಯ ನಾಗರಿಕರಿಗೆ, ಎಸ್ ಸಿ, ಎಸ್ಟಿ ಸೇರಿದಂತೆ ಮೀಸಲಾತಿ ನೀಡಲಾಗುತ್ತಿದೆ. ಅಪಾರ್ಟ್ ಮೆಂಟ್ ಮಾಡಲಾಗುತ್ತಿದೆ. ಊರುಗಡೂರಿನಲ್ಲಿ 4 ಎಕರೆಯಲ್ಲಿ ಅಪಾರ್ಟ್ ಮೆಂಟ್ ಮಾಡಲಾಗುತ್ತಿದೆ. ಸೋಮಿನಕೊಪ್ಪದಲ್ಲಿ 1½ ಎಕರೆ ಯಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
156 ಸರ್ವೆನಂಬರ್ ‌ಸೋಗಾನೆಯಲ್ಲಿ 100 ಎಕರೆ ಜಮೀನು ನೋಡಲಾಗಿದೆ. ಇನ್ನು 14 ದಿನಗಳಲ್ಲಿ ಸಭೆ ಕರೆದು ನಿವೇಶನ ನಿರ್ಮಿಸಲಾಗುತ್ತಿದೆ. ನಿದಿಗೆ 3 ಎಕರೆ ಜಾಗದಲ್ಲಿ ಬಡಾವಣೆ ಮಾಡಲಾಗುವುದು. 30 ಪಾರ್ಕ್ ಗಳನ್ನು ಭದ್ರಾವತಿ ಶಿವಮೊಗ್ಗದಲ್ಲಿ ಅಭಿವೃದ್ಧಿ 15 ಕೆರೆ ಅಭಿವೃದ್ಧಿ ಪಡಿಸಲಾಗುವುದು.
ವಾಜಪೇಯಿ ಲೇಔಟ್ ನ ಅಕ್ರಮ ಹಂಚಿಕೆ ರದ್ದು ಮಾಡಿದ್ದು, ಶೀಘ್ರದಲ್ಲಿಯೇ ಮನೆಗಳು ನಿರ್ಮಾಣವಾಗಲಿವೆ. . ಮನೆ ಕಟ್ಟದವರಿಗೆ ನೊಟೀಸ್ ನೀಡಲಾಗಿದೆ. 2300 ನಿವೇಶನದಲ್ಲಿ ಮನೆಗಳನ್ನು ಕಟ್ಟಲು ಸೂಚಿಸಲಾಗಿದೆ ಮತ್ತು ಇವರಿಗೆ ಸಮಯ ನೀಡಲಾಗಿದೆ ಎಂದರು.
. ಶಿವಮೊಗ್ಗ ಭದ್ರಾವತಿಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಹೆಚ್ಚು ಒತ್ತುನೀಡಾಗುತ್ತಿದೆ ವಾಜಪೇಯಿ ಲೇಔಟ್ ನಲ್ಲಿ 1500 ಗಿಡ ನೆಡಲಾಗಿದೆ ಎಂದರು.
ಭದ್ರಾವತಿಯಲ್ಲಿ 34 ಎಕರೆ ಜಾಗವಿದೆ. ಅಲ್ಲಿನವೇಶನ,ಗೋಪಿಶೆಟ್ಟಿಕೊಪ್ಪದಲ್ಲಿ ಜಾಗ ನಿಗದಿ ಪಡಿಸಲಾಗಿದ ಎಂದರು. ಸುದ್ದಿಗೋಷ್ಠಿಯಲ್ಲಿ ರವಿಕುಮಾರ್, ರೇಣುಕಮ್ಮ, ವಿಶ್ವನಾಥ್ ಮುದ್ದಜ್ಜಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rising Goju Karate School ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶಿವಮೊಗ್ಗದ ತೇಜಸ್ ಕಟಾ ಗೆ ದ್ವಿತೀಯ ಸ್ಥಾನ

Rising Goju Karate School ನವಂಬರ್ 16ರಂದು ತಮಿಳುನಾಡಿನ ಊಟಿಯಲ್ಲಿನ ಅನ್ನ...

DC Shivamogga ಸಫಾಯಿ ಕರ್ಮಚಾರಿಗಳಿಗೆ ಕಾನೂನು ಬದ್ಧ ಸೌಲಭ್ಯಗಳನ್ನ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ- ಗುರುದತ್ತ ಹೆಗಡೆ

DC Shivamogga ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸಫಾಯಿ...

Karnataka Amateur Boxing Association ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಮೀನಾಕ್ಷಿಗೆ ದ್ವಿತೀಯ ಸ್ಥಾನ

Karnataka Amateur Boxing Association ನವೆಂಬರ್ 18ರಂದು ಬೆಂಗಳೂರಿನ ವಿದ್ಯಾರಣ್ಯಪುರದ ಮಹಾನಗರ...