V Somanna ಶಿವಮೊಗ್ಗ ನಗರದಿಂದ ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಮೂಲಕ ಮಂಗಳೂರಿಗೆ ಹೊಸ ರೈಲ್ವೆ ಇಂಟರ್ ಸಿಟಿ ರೈಲು ಬಿಡಬೇಕು. ಇದರಿಂದ ಕೇರಳ, ಕೊಚ್ಚಿನ್, ಗುರುವಾಯೂರು, ಶಬರಿಮಲೆ ದೇವಸ್ಥಾನಕ್ಕೆ ಹೋಗಲು ಅನುಕೂಲವಾಗುತ್ತದೆ. ಶಿವಮೊಗ್ಗದಿಂದ ಮಂಗಳೂರು ನಗರಕ್ಕೆ ಸಂಪರ್ಕ ಸಿಗುತ್ತದೆ ಎಂದು ಶಿವಮೊಗ್ಗದ ರೈಲ್ವೆ ಪ್ರಯಾಣಿಕ ನಾಗರಿಕರ ಸಂಘದಿಂದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗ ಜಿಲ್ಲಾ ಪ್ರವಾಸಿ ತಾಣ, ಐತಿಹಾಸಿಕ ತಾಣಗಳ ಮಾಹಿತಿ ಕೇಂದ್ರ ತೆರೆಯುವ ಜತೆಯಲ್ಲಿ ಸಾರ್ವಜನಿಕ ಹೆಲ್ಪ್ ಡೆಸ್ಕ್ ಆರಂಭಿಸಬೇಕು. ನಗರದ ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗದಿಂದ ಹೊರಡುವ ಮತ್ತು ಬರುವ ಎಲ್ಲ ರೈಲ್ವೆ ಕೋಚ್‌ಗಳಲ್ಲಿ ಶಿವಮೊಗ್ಗ ಜಿಲ್ಲಾ ಐತಿಹಾಸಿಕ ಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳ ಸ್ತಬ್ಧಚಿತ್ರವನ್ನು ಬೋಗಿಗಳಲ್ಲಿ ಅಳವಡಿಸಬೇಕು. ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರ, ಕೈಗಾರಿಕಾ ಕ್ಷೇತ್ರ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಇನ್ನು ಪ್ರಗತಿ ಸಾಧಿಸಲು ಅಗತ್ಯ ರೈಲ್ವೆ ಸೌಕರ್ಯಗಳನ್ನು ಶಿವಮೊಗ್ಗ ಜಿಲ್ಲೆ ಮತ್ತು ನಗರಕ್ಕೆ ಒದಗಿಸಲು ಕ್ರಮ ವಹಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶಿವಮೊಗ್ಗ ರೈಲ್ವೆ ಸ್ಟೇ?ನ್‌ನಲ್ಲಿ ೫೦ ಬೆಡ್‌ನ ರೈಲ್ವೆ ಯಾತ್ರಿನಿವಾಸ, ಲಗೇಜ್ ಲಾಕರ್ ಮತ್ತು ಸ್ತ್ರೀಯರಿಗೆ ಪ್ರತ್ಯೇಕ ರೆಸ್ಟ್ ರೂಮ್ ವಿತ್ ಸಿ.ಸಿ. ಟಿ.ವಿ ಕ್ಯಾಮೆರಾ ವ್ಯವಸ್ಥೆ ಕಲ್ಪಿಸಬೇಕು. ೧, ೨ ಮತ್ತು ೩ನೇ ಫ್ಲಾಟ್ ಫಾರಂನಲ್ಲಿ ಮಹಿಳೆ ಫೀಡಿನ್ ಕ್ಯಾಬಿನ್ ಅಳವಡಿಸಬೇಕು. ೨ ಮತ್ತು ೩ ನೇ ಪ್ಲಾಟ್ ಫಾರಂಗೆ ಅನುಗುಣವಾಗಿ ಶೌಚಗೃಹ ಕಟ್ಟಿಸಬೇಕು. ದಿನಕ್ಕೆ ೮,೦೦೦ ಜನರು ರೈಲ್ವೆ ಪ್ರಯಾಣಿಕರು ಶಿವಮೊಗ್ಗದಿಂದ ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಅವರಿಗೆ ಅನುಕೂಲವಾಗುವಂತೆ ೨ ಮತ್ತು ೩ನೇ ಫ್ಲಾಟ್ ಫಾರಂಗೆ ಎಕ್ಸ್‌ಲೇಟರ್ ಅಳವಡಿಸಬೇಕು ಎಂದು ಮನವಿ ಮಾಡಿದರು.
V Somanna ಶಿವಮೊಗ್ಗ- ಮಂಗಳೂರು ಇಂಟರ್‌ಸಿಟಿ ರೈಲಿಗೆ ಮನವಿ: ರೈಲ್ವೆ ಪ್ರಯಾಣಿಕ ನಾಗರಿಕರ ಸಂಘದಿಂದ ಸಚಿವ ಸೋಮಣ್ಣಗೆ ಒತ್ತಾಯ
Date: