Thursday, March 19, 2026
Thursday, March 19, 2026

Rotary Shivamogga ರೋಟರಿಯ ವಿವಿಧ ಕಾಳಜಿಗಳಲ್ಲಿ ಪರಿಸರವೂ ಒಂದು- ಸಿ.ಎ.ದೇವಾನಂದ್

Date:

Rotary Shivamogga ರೋಟರಿ ಸಂಸ್ಥೆಯ ಮುಖ್ಯ ಉದ್ದೇಶಗಳಲ್ಲಿ ಪರಿಸರ ಕಾಳಜಿಯೂ ಒಂದು. ಇದರೊಂದಿಗೆ ಸಂಪೂರ್ಣ ಸಹಕಾರದೊಂದಿಗೆ ತೊಡಗಿಸಿಕೊಳ್ಳುವುದಾಗಿ ರೋಟರಿ ಜಿಲ್ಲೆ – 3182 ರ ಗವರ್ನರ್ ರೋ. ಸಿ.ಎ.ದೇವಾನಂದ್ ತಿಳಿಸಿದರು.

ನಗರದ ಗಾಡಿಕೊಪ್ಪ ಪುರದಾಳು ರಸ್ತೆಯಲ್ಲಿರುವ ತುಂಗೆ ಮೇಲ್ದಂಡೆ ಕಾಲುವೆ ಪಕ್ಕದಲ್ಲಿರುವ ರೋಟರಿ ಬಯೋ ಡೈವರ್ಸಿಟಿ ಎರಡನೇ ಹಂತದ ಪಾರ್ಕ್ ಯನ್ನು ಶನಿವಾರÀ ಉದ್ಘಾಟಿಸಿ, ಕಾರ್ಯಕ್ರಮದ ಪೂರ್ವಭಾವಿಯಾಗಿ ಸಸಿ ನೆಡುವುದರ ಮೂಲಕ ಚಾಲನೆ ನೀಡಿ, ಮಾತನಾಡಿದ ಅವರು, ರೋ. ಡಾ. ಪಿ.ನಾರಾಯಣ್ ಅವರು ಈ ಪ್ರಾಜೆಕ್ಟ್‍ನ ಮುಂದುವರಿಸುವ ಬಗ್ಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡುವುದಾಗಿ ರೋಟರಿ ಸಂಸ್ಥೆಗಳ ಪರವಾಗಿ ಭರವಸೆ ನೀಡಿದರು.

ರೋಟರಿ ಶಿವಮೊಗ್ಗ ನಾರ್ಥ್‍ನ ರೋ. ಎಸ್.ಉಮೇಶ್ ಹಾಗೂ ರೋ. ಆನಂದ್ ಮೂರ್ತಿಯವರ ಕೊಡುಗೆಯನ್ನು ಶ್ಲಾಘಿಸಿದರು.

Rotary Shivamogga ಪ್ರಾಸ್ತಾವಿಕ ಮಾತನಾಡಿದ ರೋಟರಿ ಬಯೋಡೈವರ್ಸಿಟಿ ಅಧ್ಯಕ್ಷ ರೋ. ಎ.ಎಸ್.ಚಂದ್ರಶೇಖರ್, ರೋಟರಿ ಅಂತರಾಷ್ಟ್ರೀಯ ನಿಧಿಯಿಂದ 60000 ಅಮೇರಿಕನ್ ಡಾಲರ್ ನಿಧಿ ಮಂಜೂರಾತಿ ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ಮೊಡೆಸ್ಟಾ ಕ್ಯಾಲಿಫೋರ್ನಿಯ ಇವರ ಸಹಯೋಗ ಪ್ರಾಸ್ತಾಪಿಸಿದರು. ಈ ಯೋಜನೆ ರಟರಿ ಕ್ಲಬ್ ಶಿವಮೊಗ್ಗ ಉತ್ತರ ಇವರ ಸಹಯೋಗದಲ್ಲಿ ಶಿವಮೊಗ್ಗದ ಎಲ್ಲಾ ಇತರ 7 ರೋಟರಿ ಕ್ಲಬ್‍ಗಳ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಲ್ಲಾ ಪ್ರತಿನಿಧಿಗಳು, ರೋಟರಿ ಕಾರ್ಯವನ್ನು ಶ್ಲಾಘಿಸಿ, ಸರ್ಕಾರದ ವತಿಯಿಂದ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಈ ನಿಟ್ಟಿನಲ್ಲಿ ಸೂಕ್ತ ಸಲಹೆ ಸೂಚನೆಯನ್ನು ನೀಡಿದರು.

ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿ ನಟರಾಜ ಪಾಟೀಲ್ ಭಾಗವಹಿಸಿ, ಇಲಾಖೆಯ ಪರವಾಗಿ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಎಂ ಎಲ್ ಸಿ ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಶಾಸಕ ಎಸ್.ಎನ್.ಚನ್ನಬಸಪ್ಪ ಹಾಗೂ ಮಾಜಿ ಎಂ ಎಲ್ ಸಿ, ಉದ್ಯಮಿ ರುದ್ರೇಗೌಡರು, ಮಾಜಿ ಜಿಲ್ಲಾ ಗವರ್ನರ್‍ಗಳಾದ ರೋ. ಜಿ.ಎನ್.ಪ್ರಕಾಶ್ ಹಾಗೂ ರೋ.ಹೆಚ್.ಸಿ.ರವಿ ಉಪಸ್ಥಿತರಿದ್ದರು. ರೋಟರಿ ಅಸಿಸ್ಟೆಂಟ್ ಗವರ್ನರ್ ರೋ. ಎಸ್.ಆರ್.ನಾಗರಾಜ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಎಲ್ಲಾ ಕ್ಲಬ್‍ನ ಸದಸ್ಯರೂ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು. ರೋ.ವಿಜಯಕುಮಾರ್, ರೋ. ರವೀಂದ್ರನಾಥ್ ಐತಾಳ್ ಅವರು ಕಾರ್ಯಕ್ರಮ ಆಯೋಜನೆಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...