Chamber Of Commerce Shivamogga ಮಕ್ಕಳಿಗೆ ಬಾಲ್ಯದಿಂದಲೇ ಸಂಗೀತ ಅಭ್ಯಾಸ ಮಾಡಿಸುವುದರಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಂಗೀತ ಕಲಿಕೆಯು ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಹೇಳಿದರು.
ಶಿವಮೊಗ್ಗ ನಗರದ ಎಸ್‌ಎಸ್ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಿದ್ದ ಮಲೆನಾಡು ಗಾನ ಕೋಗಿಲೆಗಳ ಗಾಯನ ಸಮ್ಮಿಲನ ಹಾಗೂ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಸಂಗೀತ ಅಭ್ಯಾಸ ಖಿನ್ನತೆಯಿಂದ ದೂರವಾಗಲು ನೆರವಾಗುತ್ತದೆ. ಮನುಷ್ಯನ ಮನಸ್ಸಿಗೆ ಔಷಧವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
Chamber Of Commerce Shivamogga ಈಗಾಗಲೇ ರಮೇಶ್ ಮಲ್ಲಾಪುರ ಹಾಗೂ ಮಥುರಾ ನಾಗರಾಜ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಕರೋಕೆ ಗಾಯನ ಕಾರ್ಯಕ್ರಮಗಳು ಸಾಕಷ್ಟು ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವುದರ ಜತೆಗೆ ಪ್ರತಿಭೆ ಅನಾವರಣಗೊಳ್ಳಲು ಸಹಕಾರಿಯಾಗಿದೆ. ಕಲಾವಿದರನ್ನು ಬೆಳೆಸಲು ಇಂತಹ ಒಳ್ಳೆಯ ವೇದಿಕೆಗಳು ಅವಶ್ಯಕ ಎಂದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಗಾಯಕರಿಗೆ ಶುಭಕೋರಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಲೆನಾಡು ಗಾನ ಕೋಗಿಲೆಗಳ ಕಲಾಸಂಘದ ರಮೇಶ ಮಲ್ಲಾಪುರ ಮಾತನಾಡಿ, ಈ ದಿನ ನಡೆಯುತ್ತಿರುವ 11ನೇ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಆಗಮಿಸಿದ್ದು, ಬರುವ ದಿನಗಳಲ್ಲಿ ಇನ್ನು ದೊಡ್ಡ ದೊಡ್ಡ ವೇದಿಕೆ ಕಲ್ಪಿಸಿ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಎಲ್ಲರ ಸಹಕಾರದಿಂದ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದರಿಂದ ಪ್ರತಿಭಾವಂತ ಗಾಯಕರಿಗೆ ಅವಕಾಶ ಸಿಗಲಿದೆ. ಸಂಗೀತ ಆಸಕ್ತರಿಗೆ ಉತ್ತಮ ವೇದಿಕೆ ಕಲ್ಪಿಸುವುದು ಅತ್ಯಂತ ಮುಖ್ಯ ಎಂದು ಹೇಳಿದರು. ಮಥುರಾ ನಾಗರಾಜ್, ಸುಮಿತ್ರಾ ರವೀಂದ್ರ, ಶ್ಯಾಮಲಾ ಸತೀಶ್ ಹಾಗೂ ಗಾಯಕರು ಉಪಸ್ಥಿತರಿದ್ದರು.
Chamber Of Commerce Shivamogga ಬಾಲ್ಯದಿಂದಲೇ ಸಂಗೀತಾಭ್ಯಾಸ. ಉತ್ತಮ ಸಾಧನೆಗೆ ಸಾಧ್ಯ- ಜಿ.ವಿಜಯ ಕುಮಾರ್
Date: